ETV Bharat / sports

ಪಾಕ್ - ಕಿವೀಸ್ ಟೆಸ್ಟ್ ಸರಣಿ : ಗಾಯಳು ನೈಲ್​ ವ್ಯಾಗ್ನರ್ ಬದಲು ಮ್ಯಾಟ್ ಹೆನ್ರಿ ಕಣಕ್ಕೆ

ವ್ಯಾಗ್ನರ್ ಅವರ ಚೇತರಿಕೆಗೆ ಸುಮಾರು ಆರು ವಾರಗಳ ಕಾಲ ಬೇಕಾಗಲಿದೆ ಎಂದು ನಿರೀಕ್ಷಿಸಲಾಗಿದೆ ಅಂತಾ ನ್ಯೂಜಿಲ್ಯಾಂಡ್ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ..

Matt Henry named replacement for injured Neil Wagner
ಮ್ಯಾಟ್ ಹೆನ್ರಿ
author img

By

Published : Jan 1, 2021, 12:43 PM IST

ಕ್ರೈಸ್ಟ್‌ಚರ್ಚ್ : ಪಾಕ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ವೇಗಿ ನೈಲ್​ ವ್ಯಾಗ್ನರ್ ಅವರ ಸ್ಥಾನಕ್ಕೆ ಮ್ಯಾಟ್ ಹೆನ್ರಿ ಆಯ್ಕೆಯಾಗಿದ್ದಾರೆ.

ಮೊದಲ ಟೆಸ್ಟ್‌ನ 2ನೇ ದಿನದಂದು ಬ್ಯಾಟಿಂಗ್ ಮಾಡುವಾಗ ವ್ಯಾಗ್ನರ್‌ಗೆ ಪಾಕಿಸ್ತಾನದ ವೇಗದ ಆಟಗಾರ ಶಾಹೀನ್ ಆಫ್ರಿದಿ ಎಸೆದ ಯಾರ್ಕರ್​ನಿಂದ ಬಲಗಾಲಿನ ನಾಲ್ಕನೇ ಮತ್ತು ಐದನೇ ಕಾಲ್ಬೆರಳುಗಳು ಮುರಿದಿವೆ.

ವ್ಯಾಗ್ನರ್ ಅವರ ಚೇತರಿಕೆಗೆ ಸುಮಾರು ಆರು ವಾರಗಳ ಕಾಲ ಬೇಕಾಗಲಿದೆ ಎಂದು ನಿರೀಕ್ಷಿಸಲಾಗಿದೆ ಅಂತಾ ನ್ಯೂಜಿಲ್ಯಾಂಡ್ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಓದಿ 12 ತಿಂಗಳಲ್ಲಿ ಸ್ಮಿತ್ ಸಾಕಷ್ಟು ಟೆಸ್ಟ್ ಕ್ರಿಕೆಟ್ ಆಡದಿರುವುದೇ ವೈಫಲ್ಯಕ್ಕೆ ಕಾರಣ: ಲಾಬುಶೇನ್

ಹೆನ್ರಿ ಟೆಸ್ಟ್ ಅನುಭವ ಮತ್ತು ಸ್ಥಳೀಯ ಜ್ಞಾನ ತಂಡಕ್ಕೆ ವರವಾಗಲಿದೆ ಎಂದು ಕೋಚ್ ಗ್ಯಾರಿ ಸ್ಟೀಡ್ ಹೇಳಿದ್ದಾರೆ. ಡಿಸೆಂಬರ್​ನಲ್ಲಿ ನಡೆದ ಪಾಕ್ ಎ ಮತ್ತು ನ್ಯೂಜಿಲ್ಯಾಂಡ್ ಎ ಪಂದ್ಯದಲ್ಲಿ ಮ್ಯಾಟ್ ಹೆನ್ರಿ 6 ವಿಕೆಟ್ ಪಡೆದು ಮಿಂಚಿದ್ದು, ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ಸ್ಟೀಡ್ ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಿವೀಸ್ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.