ETV Bharat / sports

ಮ್ಯಾಚ್​ ಫಿಕ್ಸಿಂಗ್ ಕಾನೂನು ಭಾರತದಲ್ಲಿ ಗೇಮ್ ಚೇಂಜರ್​ ಆಗಲಿದೆ : ಐಸಿಸಿ ಅಧಿಕಾರಿ ವಿಶ್ವಾಸ

author img

By

Published : Jun 25, 2020, 1:20 PM IST

ಹೆಚ್ಚಿನ ಮ್ಯಾಚ್​​ ಫಿಕ್ಸಿಂಗ್ ಪ್ರಕರಣಗಳು ಭಾರತದ ಭ್ರಷ್ಟಾಚಾರದ ಹಿನ್ನೆಲೆ ಹೊಂದಿದೆ. ಆದ್ದರಿಂದ ಭಾರತದಲ್ಲಿ ಮ್ಯಾಚ್​ ಫಿಕ್ಸಿಂಗ್​ ವಿರುದ್ಧ ವಿಶೇಷ ಕಾನೂನು ಜಾರಿಗೊಳಿಸಿದರೆ ಮಾತ್ರ ಫಿಕ್ಸಿಂಗ್ ತಡೆಯಲು ಸಾಧ್ಯ ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು)ದ ತನಿಖೆಯ ಸಂಯೋಜಕರಾದ ಸ್ಟೀವ್ ರಿಚರ್ಡ್‌ಸನ್ ಹೇಳಿದ್ದಾರೆ.

Match-fixing law will be a game-changer in India: ICC official
ಚ್​ ಫಿಕ್ಸಿಂಗ್ ಕಾನೂನು ಭಾರತದಲ್ಲಿ ಗೇಮ್ ಚೇಂಜರ್​ ಆಗಲಿದೆ

ಲಂಡನ್ : ಭಾರತದಲ್ಲಿ ಮ್ಯಾಚ್​ ಫಿಕ್ಸಿಂಗ್​ ವಿರುದ್ಧ ವಿಶೇಷ ಕಾನೂನು ಜಾರಿಗೊಳಿಸಿದರೆ ಪಂದ್ಯವನ್ನು ರಕ್ಷಿಸಲು ಅದು ಏಕೈಕ ಅಸ್ತ್ರವಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು)ದ ತನಿಖೆಯ ಸಂಯೋಜಕರಾದ ಸ್ಟೀವ್ ರಿಚರ್ಡ್‌ಸನ್ ಹೇಳಿದ್ದಾರೆ.

2021 ರಿಂದ 2023 ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ಭಾರತವು ಎರಡು ಪ್ರಮುಖ ಪಂದ್ಯಗಳಾದ ಟಿ -20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಆಯೋಜಿಸಲಿದೆ. ಈ ಜಾಗತಿಕ ಪಂದ್ಯಾವಳಿಗಳು ಮ್ಯಾಚ್ ಫಿಕ್ಸರ್​ಗಳು ಹೆಚ್ಚು ಫಿಕ್ಸಿಂಗ್ ಮಾಡುವ ಸಮಯವಾಗಿದೆ. ಸೀಮಿತ ಅಸ್ತ್ರಗಳೊಂದಿಗೆ ಇದನ್ನು ತಡೆಯುವುದು ಐಸಿಸಿಗೆ ಯಾವಾಗಲೂ ಸವಾಲಿನ ಕೆಲಸವಾಗಿದೆ ಎಂದು ರಿಚರ್ಡ್‌ಸನ್ ತಿಳಿಸಿದ್ದಾರೆ

ಮ್ಯಾಚ್​​ ಫಿಕ್ಸಿಂಗ್​ ತಡೆಯಲು ನಮ್ಮ ಯಾವುದೇ ವಿಶೇಷ ಅಸ್ತ್ರಗಳಿಲ್ಲ. ಭಾರತದಲ್ಲಿ ಎರಡು ಪ್ರಮುಖ ಟೂರ್ನಿಗಳು ನಡೆಯಲಿರುವ ಕಾರಣ ಫಿಕ್ಸಿಂಗ್ ತಡೆಯಲು ನಾವು ಭಾರತೀಯ ಪೊಲೀಸರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದೇವೆ. ಭ್ರಷ್ಟರನ್ನು ಮಟ್ಟಹಾಕಲು ನಾವು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ನಮ್ಮಲ್ಲಿ ಪ್ರಸ್ತುತ 50 ಫಿಕ್ಸಿಂಗ್ ಪ್ರಕರಣಗಳು ತನಿಖೆಯಲ್ಲಿವೆ. ಹೆಚ್ಚಿನ ಪ್ರಕರಣಗಳು ಭಾರತದ ಭ್ರಷ್ಟಾಚಾರದ ಹಿನ್ನೆಲೆ ಹೊಂದಿದೆ. ಆದ್ದರಿಂದ ಭಾರತದಲ್ಲಿ ಮ್ಯಾಚ್​ ಫಿಕ್ಸಿಂಗ್​ ವಿರುದ್ಧ ವಿಶೇಷ ಕಾನೂನು ಜಾರಿಗೊಳಿಸಿದರೆ ಮಾತ್ರ ಇದನ್ನು ತಡೆಯಲು ಸಾಧ್ಯ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.