ಮೆಲ್ಬೋರ್ನ್: ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ 2020-21ರ ವಾರ್ಷಿಕ ಗುತ್ತಿಗೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡ 20 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉಸ್ಮಾನ್ ಖವಾಜಾ ಗುತ್ತಿಗೆಯಿಂದ ಹೊರಬಿದ್ದಿದ್ದಾರೆ.
5 ವರ್ಷಗಳಿಂದ ರಾಷ್ಟ್ರೀಯ ಗುತ್ತಿಗೆಯಲ್ಲಿ ಅವಕಾಶ ಪಡೆಯುತ್ತಿದ್ದ ಖವಾಜಾ ಇದೇ ಮೊದಲ ಬಾರಿಗೆ ಹೊರಬಿದ್ದಿದ್ದಾರೆ.
-
There are six changes to the men's contract list from last year: https://t.co/q5c29tVDX9 pic.twitter.com/Fww6dKKHYF
— cricket.com.au (@cricketcomau) April 30, 2020 " class="align-text-top noRightClick twitterSection" data="
">There are six changes to the men's contract list from last year: https://t.co/q5c29tVDX9 pic.twitter.com/Fww6dKKHYF
— cricket.com.au (@cricketcomau) April 30, 2020There are six changes to the men's contract list from last year: https://t.co/q5c29tVDX9 pic.twitter.com/Fww6dKKHYF
— cricket.com.au (@cricketcomau) April 30, 2020
2019ರಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಆಗಿರುವ ಮಾರ್ನಸ್ ಲಾಬುಶೇನ್ ಇದೇ ಮೊದಲ ಬಾರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಕೇಂದ್ರ ಗುತ್ತಿಗೆಯಲ್ಲಿ ಅವಕಾಶ ಪಡೆದಿದ್ದಾರೆ.
ಲಾಬುಶೇನ್ ಜೊತೆಗೆ ಆಲ್ರೌಂಡರ್ ಮಿಚೆಲ್ ಮಾರ್ಶ್, ಟಿ20 ಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಆಶ್ಟನ್ ಅಗರ್, ಟೆಸ್ಟ್ ಕ್ರಿಕೆಟ್ನ ಆರಂಭಿಕ ಬ್ಯಾಟ್ಸ್ಮನ್ ಜೋ ಬರ್ನ್ಸ್, ಕೇನ್ ರಿಚರ್ಡ್ಸನ್ ಮತ್ತು ಮ್ಯಾಥ್ಯೂ ವೇಡ್ ಇದೇ ಮೊದಲ ಬಾರಿಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಖವಾಜಾ ಜೊತೆಗೆ ನಾಥನ್ ಕೌಲ್ಟರ್-ನೈಲ್, ವಿಕೆಟ್ ಕೀಪರ್ ಪೀಟರ್ ಹ್ಯಾಂಡ್ಸ್ಕಂಬ್, ಮಾರ್ಕಸ್ ಹ್ಯಾರೀಸ್, ಶಾನ್ ಮಾರ್ಶ್, ಮಾರ್ಕಸ್ ಸ್ಟೋನೀಸ್ ಮತ್ತು ಆಶ್ಟನ್ ಟರ್ನರ್ ಹಾಗೂ ಕಳೆದ ವರ್ಷ ನಿವೃತ್ತಿ ಹೊಂದಿದ ಪೀಟರ್ ಸಿಡ್ಲ್ ಕೇಂದ್ರ ಗುತ್ತಿಗೆಯಿಂದ ಹೊರ ಬಿದ್ದಿದ್ದಾರೆ.