ಡುನೆಡಿನ್: ನ್ಯೂಜಿಲ್ಯಾಂಡ್ ಬ್ಯಾಟ್ಸ್ಮನ್ ರಾಸ್ ಟೇಲರ್ಗೆ ಗಾಯದ ಸಮಸ್ಯೆ ಎದುರಾಗಿರುವ ಕಾರಣ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಇವರ ಜಾಗಕ್ಕೆ ಬ್ಯಾಟ್ಸ್ಮನ್ ಮಾರ್ಕ್ ಚಾಪ್ಮನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಅಭ್ಯಾಸ ನಡೆಸುವ ವೇಳೆ ರಾಸ್ ಟೇಲರ್ ಎಡ ಮಂಡಿಗೆ ಗಾಯವಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಹೊರಗುಳಿಯಲಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ನ್ಯೂಜಿಲ್ಯಾಂಡ್ ಕಿವೀಸ್ ಕೋಚ್ ಗ್ಯಾರಿ ಸ್ಟೀಡ್ ತಿಳಿಸಿದ್ದಾರೆ.
"ಸರಣಿಯ ಮುನ್ನಾ ದಿನದಂದು ರಾಸ್ ಟೇಲರ್ಗೆ ಗಾಯವಾಗಿದ್ದು ಅಘಾತವನ್ನುಂಟು ಮಾಡಿದೆ. ಇದು ಒಂದು ಸಣ್ಣ ಗಾಯವಾಗಿದ್ದು, ಸ್ವಲ್ಪ ವಿಶ್ರಾಂತಿ ನಂತರ ಅವರು ಎರಡನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ" ಎಂದು ಸ್ಟೀಡ್ ತಿಳಿಸಿದ್ದಾರೆ.
ಓದಿ : ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ : ಇಂಗ್ಲೆಂಡ್ ಮಣಿಸಿ ಸೆಮೀಸ್ಗೆ ಲಗ್ಗೆ ಇಟ್ಟ ವೆಸ್ಟ್ ಇಂಡೀಸ್ ಲೆಜೆಂಡ್ಸ್
"ಟಿ 20 ತಂಡದಲ್ಲಿ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿದ ಮಾರ್ಕ್ಗೆ ಇದು ಒಂದು ಉತ್ತಮ ಅವಕಾಶ, ಅವರು ಈ ಅವಕಾಶವನ್ನ ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ನಮಗಿದೆ" ಎಂದು ಅವರು ಹೇಳಿದರು.