ಶಾರ್ಜಾ: ಬ್ಯಾಟಿಂಗ್ ಮತ್ತು ಬೌಲಿಂಗ್ನ ಸಂಘಟಿತ ಪ್ರದರ್ಶನದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್, ಕೆಕೆಆರ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪ್ಲೇ ರೇಸ್ನಲ್ಲಿ ಇನ್ನು ಉಳಿದುಕೊಂಡಿದೆ.
ಮೊದಲು ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿ ಕೋಲ್ಕತ್ತಾ ತಂಡವನ್ನು 149 ರನ್ಗಳಿಗೆ ಕಟ್ಟಿಹಾಕಿದ ರಾಹುಲ್ ಬಳಗ, ಚೇಸಿಂಗ್ ವೇಳೆ ಗೇಲ್ ಮತ್ತು ಮಂದೀಪ್ ಸಿಂಗ್ ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ಇನ್ನು7 ಎಸೆತ ಬಾಕಿ ಇರುವಂತೆ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ.
-
Half-centuries from Gayle (51) and Mandeep (66*) guide @lionsdenkxip to an 8-wicket win over #KKR
— IndianPremierLeague (@IPL) October 26, 2020 " class="align-text-top noRightClick twitterSection" data="
Scorecard - https://t.co/Ye2Tx7iO5Z #Dream11IPL pic.twitter.com/BLL2LAvxsw
">Half-centuries from Gayle (51) and Mandeep (66*) guide @lionsdenkxip to an 8-wicket win over #KKR
— IndianPremierLeague (@IPL) October 26, 2020
Scorecard - https://t.co/Ye2Tx7iO5Z #Dream11IPL pic.twitter.com/BLL2LAvxswHalf-centuries from Gayle (51) and Mandeep (66*) guide @lionsdenkxip to an 8-wicket win over #KKR
— IndianPremierLeague (@IPL) October 26, 2020
Scorecard - https://t.co/Ye2Tx7iO5Z #Dream11IPL pic.twitter.com/BLL2LAvxsw
ಅಬ್ಬರ ಬ್ಯಾಟಿಂಗ್ ಪ್ರದರ್ಶನ ತೋರಿದ ಯುನಿವರ್ಸಲ್ ಬಾಸ್ ಗೇಲ್ ಕೇವಲ 29 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್, 2 ಬೌಂಡರಿಗಳ ನೆರವಿನಿಂದ 51 ರನ್ಗಳಿಸಿ ಔಟಾದರು. ಅಜೇಯರಾಗಿ ಉಳಿದ ಮಂದೀಪ್ ಸಿಂಗ್ 55 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 8 ಬೌಂಡರಿ ಗಳ ನೆರವಿನಿಂದ 66 ರನ್ಗಳಿಸಿ ಗೆಲುವಿನ ಗಡಿ ದಾಟಿಸಿದರು. ನಾಯಕ ರಾಹುಲ್ 28 ರನ್ಗಳಿಸಿ ಔಟಾಗಿದ್ದರು.
ಕೆಕೆಆರ್ ಪರ ವರುಣ್ ಚಕ್ರವರ್ತಿ ಹಾಗೂ ಫರ್ಗ್ಯುಸನ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಕೆಕೆಆರ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 149 ರನ್ಗಳಿಸಿತ್ತು. ಗಿಲ್ 57, ಮಾರ್ಗನ್ 40 ರನ್ಗಳಿಸಿದ್ದರು.
ಪಂಜಾಬ್ ಪರ ಮೊಹಮ್ಮದ್ ಶಮಿ 3 ವಿಕೆಟ್ಸ್, ಮುರುಗನ್ ಅಶ್ವಿನ್, 1, ಮ್ಯಾಕ್ಸ್ವೆಲ್ 1, ಜೋರ್ಡನ್ ಮತ್ತು ಬಿಷ್ಣೋಯ್ ತಲಾ 2 ವಿಕೆಟ್ ಪಡೆದರು ಮಿಂಚಿದ್ದರು.