ETV Bharat / sports

ಫೆ.8 ರಿಂದ ಅಹ್ಮದಾಬಾದ್​ನಲ್ಲಿ ಶುರುವಾಗಲಿದೆ ಧೋನಿ ಕ್ರಿಕೆಟ್​ ಅಕಾಡೆಮಿ

ಕ್ರಿಕೆಟ್​ ಕ್ಷೇತ್ರದಲ್ಲಿ ವೃತ್ತಿ ಜೀವನ ಕಾಣಲು ಬಯಸುವ 7 ವರ್ಷದ ಬಾಲಕರಿಂದ 19 ವರ್ಷದೊಳಗಿನ ಯುವಕರಿಗೆ ಎಂಎಸ್​ ಧೋನಿ ಕ್ರಿಕೆಟ್​ ಅಕಾಡೆಮಿ ತರಬೇತಿ ನೀಡಲಿದೆ. ಈ ಅಕಾಡೆಮಿಗೆ ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಕಾಲ ಕಾಲಕ್ಕೆ ಭೇಟಿ ನೀಡಿ ಯುವಕರಿಗೆ ಅಗತ್ಯವಿರುವ ಮಾರ್ಗದರ್ಶನ ನೀಡಲಿದ್ದಾರೆ. ಇನ್ನು ಅಕಾಡೆಮಿಯಲ್ಲಿ ಕೆಲವು ಮಾಜಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗರು ಯುವಕರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಧೋನಿ ಕ್ರಿಕೆಟ್​ ಅಕಾಡೆಮಿ
ಧೋನಿ ಕ್ರಿಕೆಟ್​ ಅಕಾಡೆಮಿ
author img

By

Published : Jan 25, 2021, 8:04 PM IST

ಅಹ್ಮದಾಬಾದ್​: ಫೆಬ್ರವರಿ 8 ರಿಂದ ಅಹ್ಮದಾಬಾದ್​ನಲ್ಲಿ ಎಂಎಸ್​ ಧೋನಿ ಒಡೆತನದ ಕ್ರಿಕೆಟ್ ಅಕಾಡೆಮಿ ಆರಂಭವಾಗಲಿದ್ದು, ಇದಕ್ಕೆ ಈಗಾಗಲೇ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ.

ಕ್ರಿಕೆಟ್​ ಕ್ಷೇತ್ರದಲ್ಲಿ ವೃತ್ತಿ ಜೀವನ ಕಾಣಲು ಬಯಸುವ 7 ವರ್ಷದ ಬಾಲಕರಿಂದ 19 ವರ್ಷದೊಳಗಿನ ಯುವಕರಿಗೆ ಎಂಎಸ್​ ಧೋನಿ ಕ್ರಿಕೆಟ್​ ಅಕಾಡೆಮಿ ತರಬೇತಿ ನೀಡಲಿದೆ. ಈ ಅಕಾಡೆಮಿಗೆ ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಕಾಲ ಕಾಲಕ್ಕೆ ಭೇಟಿ ನೀಡಿ ಯುವಕರಿಗೆ ಅಗತ್ಯವಿರುವ ಮಾರ್ಗದರ್ಶನ ನೀಡಲಿದ್ದಾರೆ. ಇನ್ನು ಅಕಾಡೆಮಿಯಲ್ಲಿ ಕೆಲವು ಮಾಜಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗರು ಯುವಕರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಎಂಎಸ್​ ಧೋನಿ ಕ್ರಿಕೆಟ್​ ಅಕಾಡೆಮಿಯನ್ನು ಅರ್ಕಾ ಸ್ಪೋರ್ಟ್ಸ್​ ಮತ್ತು ಶ್ರೀ ಎಂಟರ್​ಪ್ರೈಸಸ್​ ಜಂಟಿಯಾಗಿ ಅಹ್ಮದಾಬಾದ್​ನಲ್ಲಿ ಪ್ರಾರಂಭಿಸಲಿವೆ. ಅಹ್ಮದಾಬಾದ್​ನ ಜೆಎಂಡಿಸಿ ಮೈದಾನದಲ್ಲಿ ಅಕಾಡೆಮಿ ಸ್ಥಾಪಿಸಲಾಗುತ್ತಿದೆ. ಆಸಕ್ತ ಯುವಕರು ಈ ಅಕಾಡೆಮಿಯಲ್ಲಿ ನೋಂದಾಯಿಸಿಕೊಳ್ಳಬದಾಗಿದ್ದು, ಇದಕ್ಕಾಗಿ 6500 ರೂ.ಗಳ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಕ್ರಿಕೆಟ್ ಕಿಟ್, ಡ್ರೆಸ್ ಸೇರಿದಂತೆ ಎಲ್ಲಾ ಕ್ರಿಕೆಟ್​ ಸಾಮಗ್ರಿಗಳನ್ನು ಅಕಾಡೆಮಿ ಒದಗಿಸಿಕೊಡುತ್ತದೆ. ನೋಂದಣಿ ನಂತರ ತರಬೇತಿಗಾಗಿ ಅಭ್ಯರ್ಥಿಗಳು 3 ತಿಂಗಳ ಅವಧಿಗೆ 10,000 ರೂ., 6 ತಿಂಗಳಿಗೆ 20,000 ರೂ. ಮತ್ತು 1 ವರ್ಷಕ್ಕೆ 36,000 ರೂ. ಪಾವತಿಸಬೇಕು. ವಾರದಲ್ಲಿ 6 ದಿನ ಯುವಕರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತದೆ.

ಈ ಕುರಿತು ಮಾತನಾಡಿದ ಅರ್ಕಾ ಸ್ಪೋರ್ಟ್ಸ್‌ನ ಮಿಹಿರ್ ದಿವಾಕರ್, ಕ್ರಿಕೆಟ್ ಮತ್ತು ಜೀವನ ಎರಡರಲ್ಲೂ ಯಶಸ್ಸಿನ ಕೌಶಲ್ಯಗಳನ್ನು ಕಲಿಸಿಕೊಡುವ ಮೂಲಕ ದೇಶದ ಉದಯೋನ್ಮುಖ ಕ್ರಿಕೆಟಿಗರಿಗೆ ವೇದಿಕೆಯನ್ನು ಒದಗಿಸುವುದು ಎಂಎಸ್‌ಡಿಸಿಎ ಮುಖ್ಯ ಉದ್ದೇಶವಾಗಿದೆ. ನಮ್ಮ ವಿಶೇಷ ತರಬೇತಿ ಕಾರ್ಯಕ್ರಮಗಳಲ್ಲಿ ಸಮಗ್ರತೆ, ಟೀಮ್‌ವರ್ಕ್, ಎಂಜಾಯ್‌ಮೆಂಟ್, ಪ್ರೊಫೆಷನಲಿಸಂ ಮತ್ತು ಹೊಂದಾಣಿಕೆ ಜೊತೆಗೆ ಧೋನಿಯ ಜೀವನದ ಪ್ರಮುಖ ಮೌಲ್ಯಗಳನ್ನು ಆಧರಿಸಿದೆ. ಈ ಕಲಿಕಾ ಕಾರ್ಯಕ್ರಮವು ಚಿಕ್ಕ ವಯಸ್ಸಿನಲ್ಲಿಯೇ ಮೂಲಭೂತ ವಿಷಯಗಳನ್ನು ಕಲಿಸಲು ಸಹಾಯ ಮಾಡುತ್ತದೆ. ಇಲ್ಲಿ ಮಕ್ಕಳು ಆಧುನಿಕ ಕ್ರಿಕೆಟ್‌ನ ವಿವಿಧ ಸ್ವರೂಪಗಳಿಗೆ ಸುಲಭವಾಗಿ ಹೊಂದಿಕೊಳ್ಳಲು ಮತ್ತು ಯಶಸ್ವಿಯಾಗಲು ಅಗತ್ಯ ತರಬೇತಿ ಪಡೆಯಬಹುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.