ಲಡಾಖ್: ವಿಕೆಟ್ ಹಿಂದೆ ನಿಂತು ಗೆಲುವಿನ ರಣತಂತ್ರ ರೂಪಿಸುತ್ತಾ ಟೀಮ್ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಬಾರಿ ವಿಶೇಷವಾಗಿ ಸ್ವಾತಂತ್ರ್ಯ ದಿನ ಆಚರಿಸಿದ್ದಾರೆ.
ಸೇನೆಯಿಂದ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಗೌರವ ಪಡೆದಿರುವ ಧೋನಿ ಕಳೆದ ಹದಿನೈದು ದಿನದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಾತಂತ್ರ್ಯ ದಿನವಾದ ಇಂದು ಲಡಾಖ್ನ ಸೇನಾ ಆಸ್ಪತ್ರೆಗೆ ಭೇಟಿ ನೀಡಿ ಸೈನಿಕರೊಂದಿಗೆ ಅರ್ಥಪೂರ್ಣ ಸಮಯ ಕಳೆದಿದ್ದಾರೆ. ಈ ವೇಳೆ ಸೈನಿಕರು ಧೋನಿ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.
-
#MSDhoni celebrating in independence day in army uniform @msdhoni pic.twitter.com/V0OhaUFfmC
— simbu Rakesh (@STRRakesh1) August 15, 2019 " class="align-text-top noRightClick twitterSection" data="
">#MSDhoni celebrating in independence day in army uniform @msdhoni pic.twitter.com/V0OhaUFfmC
— simbu Rakesh (@STRRakesh1) August 15, 2019#MSDhoni celebrating in independence day in army uniform @msdhoni pic.twitter.com/V0OhaUFfmC
— simbu Rakesh (@STRRakesh1) August 15, 2019
ಈ ದಿನ ಸಿಯಾಚಿನ್ನಲ್ಲಿರುವ ಸೇನಾ ನೆಲೆಗೆ ಧೋನಿ ಭೇಟಿ ನೀಡುವ ಸಾಧ್ಯತೆ ಇದ್ದು, ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಲಿದ್ದಾರೆ ಎನ್ನಲಾಗಿದೆ.
ಧೋನಿ ಹದಿನೈದು ದಿನದ ಸೇನಾ ತರಬೇತಿಯಲ್ಲಿ ಪಾಲ್ಗೊಂಡಿದ್ದು, ವಿಶೇಷ ಕಾರ್ಯಾಚರಣೆ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ನಿಗದಿಯಂತೆ ಈ ತರಬೇತಿ ಇಂದು ಮುಕ್ತಾಯವಾಗಲಿದೆ.
-
Unseen Pictures of MS Dhoni from Kashmir 🇮🇳😍❤️#MSDhoni #Dhoni #ParaMSD pic.twitter.com/tLHa5zLTZR
— Dhoni Raina Team (@dhoniraina_team) August 14, 2019 " class="align-text-top noRightClick twitterSection" data="
">Unseen Pictures of MS Dhoni from Kashmir 🇮🇳😍❤️#MSDhoni #Dhoni #ParaMSD pic.twitter.com/tLHa5zLTZR
— Dhoni Raina Team (@dhoniraina_team) August 14, 2019Unseen Pictures of MS Dhoni from Kashmir 🇮🇳😍❤️#MSDhoni #Dhoni #ParaMSD pic.twitter.com/tLHa5zLTZR
— Dhoni Raina Team (@dhoniraina_team) August 14, 2019