ETV Bharat / sports

ಪರಿಸ್ಥಿತಿ ನೋಡಿದರೆ, ನಾವೇ ಮೊದಲು ಬೌಲಿಂಗ್​ ತೆಗೆದುಕೊಳ್ಳಬೇಕಿತ್ತು: ಮಾರ್ಗನ್ ಪಶ್ಚಾತಾಪ - ಕೋಲ್ಕತ್ತಾ ನೈಟ್ ರೈಡರ್ಸ್​

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧಾರ ತೆಗೆದುಕೊಂಡ ಕೆಕೆಆರ್ ಸಿರಾಜ್ ಬೌಲಿಂಗ್ ದಾಳಿಗೆ ಸಿಲು 4 ಓವರ್​ ಆಗುವುದರೊಳಗೆ 4 ವಿಕೆಟ್ ಕಳೆದುಕೊಂಡಿತು. ನಂತರ ಇತರ ಬೌಲರ್​ಗಳು ಕೂಡ ಕೋಲ್ಕತ್ತಾ ಬ್ಯಾಟ್ಸ್​ಮನ್​ಗಳನ್ನು ಚೇತರಿಸಿಕೊಳ್ಳಲು ಬಿಡಲಿಲ್ಲ. ಕೊನೆಗೆ 20 ಓವರ್​ಗಳಲ್ಲಿ 84 ರನ್​ ಮಾತ್ರ ಸಿಡಿಸಲು ಶಕ್ತವಾದರು. 85 ರನ್​ಗಳ ಗುರಿಯನ್ನು ಆರ್​ಸಿಬಿ 13.3 ಓವರ್​ಗಳಲ್ಲಿ ತಲುಪಿ ವಿಜಯ ಸಾಧಿಸಿತು.

ಇಯಾನ್ ,ಮಾರ್ಗನ್
ಇಯಾನ್ ,ಮಾರ್ಗನ್
author img

By

Published : Oct 22, 2020, 4:15 PM IST

ಅಬುಧಾಬಿ: ಆರ್​ಸಿಬಿ ವಿರುದ್ಧ ಹೀನಾಯ ಪ್ರದರ್ಶನ ತೋರಿ 8 ವಿಕೆಟ್​ಗಳ ಸೋಲು ಕಂಡ ನಂತರ ಕೆಕೆಆರ್​ ತಂಡದ ನಾಯಕ ಇಲ್ಲಿನ ಪರಿಸ್ಥಿತಿ ನೋಡಿದ ಮೇಲೆ ನಾವೇ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧಾರ ತೆಗೆದುಕೊಂಡ ಕೆಕೆಆರ್ ಸಿರಾಜ್ ಬೌಲಿಂಗ್ ದಾಳಿಗೆ ಸಿಲು 4 ಓವರ್​ ಆಗುವುದರೊಳಗೆ 4 ವಿಕೆಟ್ ಕಳೆದುಕೊಂಡಿತು. ನಂತರ ಇತರ ಬೌಲರ್​ಗಳು ಕೂಡ ಕೋಲ್ಕತ್ತಾ ಬ್ಯಾಟ್ಸ್​ಮನ್​ಗಳನ್ನು ಚೇತರಿಸಿಕೊಳ್ಳಲು ಬಿಡಲಿಲ್ಲ. ಕೊನೆಗೆ 20 ಓವರ್​ಗಳಲ್ಲಿ 84 ರನ್​ ಮಾತ್ರ ಸಿಡಿಸಲು ಶಕ್ತವಾದರು. 85 ರನ್​ಗಳ ಗುರಿಯನ್ನು ಆರ್​ಸಿಬಿ 13.3 ಓವರ್​ಗಳಲ್ಲಿ ತಲುಪಿ ವಿಜಯ ಸಾಧಿಸಿತು.

ಆರಂಭದಲ್ಲೇ ನಾಲ್ಕೈದು ವಿಕೆಟ್ ಕಳೆದುಕೊಂಡಿದ್ದು, ನಾವು ಬಯಸಿದ್ದ ಆಟವಾಗಿರಲಿಲ್ಲ. ಆರ್​ಸಿಬಿ ಬೌಲರ್​ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಅಲ್ಲಿನ ಪರಿಸ್ಥಿತಿ ನೋಡಿದರೆ ನಾವು ಮೊದಲು ಬೌಲಿಂಗ್ ಮಾಡಬೇಕಿತ್ತು" ಎಂದು ಮಾರ್ಗನ್ ಪಂದ್ಯದ ನಂತರ ಹೇಳಿದ್ದಾರೆ.

ಇನ್ನು ನರೈನ್ ಮತ್ತು ರಸೆಲ್ ಮುಂದಿನ ಪಂದ್ಯಗಳಿಗೆ ಲಭ್ಯವಿರುತ್ತಾರೆ. ಅವರಿಬ್ಬರು ಉತ್ತಮ ಸಾಮರ್ಥ್ಯ ಇರುವ ಆಲ್​ರೌಂಡರ್​ಗಳು. ಅಂತಹ ಆಟಗಾರರು ಯಾವಾಗ ಲಭ್ಯರಿರುತ್ತಾರೋ ಆಗ ವಿಷಯಗಳು ವಿಭಿನ್ನವಾಗಿರುತ್ತವೆ. ಆಶಾದಾಯಕವಾಗಿ ಅವರಿಬ್ಬರು ಶೀಘ್ರದಲ್ಲಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ಮಾರ್ಗನ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.