ಕ್ರೈಸ್ಟ್ಚರ್ಚ್: ನ್ಯೂಜಿಲ್ಯಾಂಡ್ನ ಸೂಪರ್ ಸ್ಮ್ಯಾಶ್ ಲೀಗ್ನಲ್ಲಿ ಕ್ಯಾಂಟರ್ಬರಿ ತಂಡದ ಲಿಯೋ ಕಾರ್ಟರ್ ಸ್ಪಿನ್ ಬೌಲರ್ ಆ್ಯಂಟನ್ ಡೇವಿಚ್ರ ಒಂದೇ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿ ಯುವರಾಜ್ ಸಿಂಗ್ ಸಾಲಿಗೆ ಸೇರಿಕೊಂಡಿದ್ದಾರೆ.
ಸೂಪರ್ ಸ್ಮಾಶ್ 2019-20ರ 22ನೇ ಪಂದ್ಯದಲ್ಲಿ ನಾರ್ದರ್ನ್ ನೈಟ್ಸ್ ತಂಡದ ವಿರುದ್ಧ ಲ್ಯಾಂಟರ್ಬರಿ ತಂಡ 220 ರನ್ಗಳ ಬೃಹತ್ ಟಾರ್ಗೆಟ್ ಅನ್ನು ಕೇವಲ 18.5 ಓವರ್ಗಳಲ್ಲಿ ಚೇಸ್ ಮಾಡಿ ಗೆದ್ದುಕೊಂಡಿತು.
ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಲಿಯೋ ಕಾರ್ಟರ್ ಒಂದೆ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದರು. ಇವರು ಒಟ್ಟಾರೆ 29 ಎಸೆತಗಳಲ್ಲಿ 3 ಬೌಂಡರಿ 7 ಸಿಕ್ಸರ್ ಸಹಿತ 70 ರನ್ ಸಿಡಿಸಿ ಗೆಲುವಿನ ರೂವಾರಿಯಾದರು.
-
36 off an over! 😲
— Dream11 Super Smash (@SuperSmashNZ) January 5, 2020 " class="align-text-top noRightClick twitterSection" data="
Leo Carter hit 6 sixes in a row and the @CanterburyCrick Kings have pulled off the huge chase of 220 with 7 balls to spare at Hagley Oval! 👏
Scorecard | https://t.co/uxeeDsd3QY#SuperSmashNZ #cricketnation
🎥 SKY Sport. pic.twitter.com/nuDXdp1muG
">36 off an over! 😲
— Dream11 Super Smash (@SuperSmashNZ) January 5, 2020

🎥 SKY Sport. pic.twitter.com/nuDXdp1muG36 off an over! 😲
— Dream11 Super Smash (@SuperSmashNZ) January 5, 2020
Leo Carter hit 6 sixes in a row and the @CanterburyCrick Kings have pulled off the huge chase of 220 with 7 balls to spare at Hagley Oval! 👏
Scorecard | https://t.co/uxeeDsd3QY#SuperSmashNZ #cricketnation
🎥 SKY Sport. pic.twitter.com/nuDXdp1muG
30 ಎಸೆತಗಳಲ್ಲಿ 74 ರನ್ಗಳ ಅಗತ್ಯವಿದ್ದ ಸಂದರ್ಭದಲ್ಲಿ ಲಿಯೋ ಕಾರ್ಟ್, ಡೇವಿಚ್ ಎಸೆದ 16 ಓವರ್ನಲ್ಲಿ 36 ರನ್ ಸೂರೆಗೈದರು. ಅಲ್ಲದೆ ನಾಲ್ಕನೇ ವಿಕೆಟ್ಗೆ ನಾಯಕ ಕಾಲ್ ಮೆಕಾಂಚಿ(49) ಜೊತೆ ಸೇರಿ ಕೇವಲ 51 ಎಸೆತಗಳಲ್ಲಿ 118ರನ್ಗಳ ಜೊತೆಯಾಟ ನಡೆಸಿ 220 ರನ್ಗಳ ಟಾರ್ಗೇಟ್ ಅನ್ನು ಸುಲಭವಾಗಿ ಚೇಸ್ ಮಾಡಿ ಗೆದ್ದರು. ಆರಂಭಿಕರಾದ ಚಾಡ್ ಬೌಸ್ 57, ಜಾಕ್ ಬಾಯ್ಲ್ 23, ಸ್ಟೆಫೆನ್ ಮರ್ಡೋಚ್ 13 ರನ್ಗಳಿಸಿದ್ದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ನಾರ್ದರ್ನ್ ನೈಟ್ಸ್ ತಂಡ ಟಿಮ್ ಸೀಫರ್ಟ್ 74(35 ಎಸೆತ), ಡೀನ್ ಬ್ರೌನ್ನೈಲ್ 55(29ಎಸೆತ) ಅರ್ಧಶತಕದ ನೆರವಿನಿಂದ 219 ರನ್ಗಳಿಸಿದ್ದರು.
ಲಿಯೋ ಕಾರ್ಟರ್ಗೂ ಮೊದಲು ಏಕದಿನ ಕ್ರಿಕೆಟ್ನಲ್ಲಿ ಹರ್ಷೆಲ್ ಗಿಬ್ಸ್, ಟಿ20 ಕ್ರಿಕೆಟ್ನಲ್ಲಿ ಯುವರಾಜ್ ಸಿಂಗ್, ಟಿ20 ಲೀಗ್ಗಳಲ್ಲಿ ಅಫ್ಘಾನಿಸ್ತಾನದ ಹಜರುತ್ತುಲ್ಲಾ ಜಾಜೈ, ಅಲೆಕ್ಸ್ ಹೇಲ್ಸ್ ಹಾಗೂ ರಾಸ್ ವೈಟ್ಲೀ , ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸರ್ ಗ್ಯಾರಿ ಸೋಬರ್ಸ್ ಮತ್ತು ರವಿ ಶಾಸ್ತ್ರಿ,