ETV Bharat / sports

ತಮ್ಮ ದಾಖಲೆ ಮುರಿದ ಗೇಲ್​ರನ್ನು ಅಭಿನಂದಿಸಿದ ಲಜೆಂಡ್ ಬ್ರಿಯಾನ್​​ ಲಾರಾ - ವೆಸ್ಟ್​ ಇಂಡೀಸ್​ ಪರ ಗೇಲ್​ ದಾಖಲೆ

ವಿಂಡೀಸ್​ ಪರ ಏಕದಿನ ಕ್ರಿಕೆಟ್​ನಲ್ಲಿ ಅಧಿಕ ರನ್​ ಸರದಾರರಾದ ಕ್ರಿಸ್ ​ಗೇಲ್​ರಿಗೆ ಬ್ರಿಯಾನ್​ ಲಾರಾ ಅಭಿನಂದನೆ ಸಲ್ಲಿಸಿದ್ದಾರೆ.

Lara congratulates Gayle
author img

By

Published : Aug 13, 2019, 10:03 AM IST

ಪೋರ್ಟ್​ ಆಫ್​ ಸ್ಪೇನ್​: ಕ್ರಿಸ್​ ಗೇಲ್​ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಿದಿದ್ದರೂ ಸಹ ವಿಂಡೀಸ್​ ಪರ ಏಕದಿನ ಕ್ರಿಕೆಟ್​ನಲ್ಲಿ ಅಧಿಕ ರನ್ ​ಗಳಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.

ಎರಡನೇ ಏಕದಿನ ಪಂದ್ಯದಲ್ಲಿ 11 ರನ್ ​ಗಳಿಸಿದ ಗೇಲ್​ 7 ರನ್ ​ಗಳಿಸಿದ ವೇಳೆ ವೆಸ್ಟ್​ ಇಂಡೀಸ್​ ಲೆಜೆಂಡ್​ ಬ್ರಿಯಾನ್​​ ಲಾರಾರ ದಾಖಲೆ ಮುರಿದು ವಿಂಡೀಸ್​ ಪರ ಏಕದಿನ ಕ್ರಿಕೆಟ್​ನಲ್ಲಿ ಅಧಿಕ ರನ್​ ಗಳಿಸಿರುವ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾಗಿದ್ದರು.

ವೃತ್ತಿ ಜೀವನ ಅಂತ್ಯದ ಸರಣಿಯಾಡುತ್ತಿರುವ ಗೇಲ್​ ತಮ್ಮ ದಾಖಲೆಯನ್ನು ಮುರಿದಿರುವುದಕ್ಕೆ ಲಾರಾ ಸ್ವತಃ ಗೇಲ್​ರನ್ನು ಅಭಿನಂದಿಸಿ ಟ್ವೀಟ್​ ಮಾಡಿದ್ದಾರೆ."ಏಕದಿನ ಕ್ರಿಕೆಟ್​ನಲ್ಲಿ ವೆಸ್ಟ್​ ಇಂಡೀಸ್​ ಪರ ಅತಿ ಹೆಚ್ಚು ರನ್ ​ಗಳಿಸಿದ್ದಕ್ಕೆ ಕ್ರಿಸ್​ ಗೇಲ್​ಗೆ ಅಭಿನಂದನೆ. ಆ ದಾಖಲೆಗೆ ನೀವು ಅರ್ಹರಾದ ವ್ಯಕ್ತಿ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರಿಸ್​ ಗೇಲ್​ 300 ಏಕದಿನ ಪಂದ್ಯಗಳಿಂದ 10,408 ರನ್ ​ಗಳಿಸಿದ್ದಾರೆ. ಬ್ರಿಯಾನ್​ ಲಾರಾ 299 ಪಂದ್ಯಗಳಿಂದ 10,405 ರನ್ ​ಗಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.