ಕ್ರೈಸ್ಟ್ಚರ್ಚ್: ಅಜರ್ ಅಲಿ ಮತ್ತು ನಾಯಕ ರಿಜ್ವಾನ್ ಅವರ ಅರ್ಧಶತಕದ ಹೊರತಾಗಿಯೂ ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್ ವಿರುದ್ಧ 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 297 ರನ್ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡು ಅರಂಭದಲ್ಲೇ ಯಶಸ್ಸು ಸಾಧಿಸಿತು. ಪಾಕ್ನ ಆರಂಭಿಕರಾದ ಶಾನ್ ಮಸೂದ್ (0), ಅಬೀದ್ ಅಲಿ (25) ಹಾಗೂ ಹ್ಯಾರೀಸ್ ಸೊಹೈಲ್ (1) ಹಾಗೂ ಫವಾದ್ ಅಲಮ್ (2) ಬಹುಬೇಗನೆ ಔಟಾಗಿ ಹೊರನಡೆದರು.
-
Stumps in Christchurch 🏏
— ICC (@ICC) January 3, 2021 " class="align-text-top noRightClick twitterSection" data="
Trent Boult picks up the last wicket to bowl Pakistan out for 297!
Who impressed you the most today?#NZvPAK scorecard: https://t.co/eVFtwym5wg pic.twitter.com/iqGiW4S0L0
">Stumps in Christchurch 🏏
— ICC (@ICC) January 3, 2021
Trent Boult picks up the last wicket to bowl Pakistan out for 297!
Who impressed you the most today?#NZvPAK scorecard: https://t.co/eVFtwym5wg pic.twitter.com/iqGiW4S0L0Stumps in Christchurch 🏏
— ICC (@ICC) January 3, 2021
Trent Boult picks up the last wicket to bowl Pakistan out for 297!
Who impressed you the most today?#NZvPAK scorecard: https://t.co/eVFtwym5wg pic.twitter.com/iqGiW4S0L0
ಆದರೆ 5ನೇ ವಿಕೆಟ್ನಲ್ಲಿ ಜೊತೆಯಾದ ಮಾಜಿ ನಾಯಕ ಅಜರ್ ಮತ್ತು ಹಾಲಿ ನಾಯಕ ರಿಜ್ವಾನ್ 94 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ರಿಜ್ವಾನ್ 71 ಎಸೆತಗಳಲ್ಲಿ 11 ಬೌಂಡರಿ ಸಹಿತ 61 ರನ್ಗಳಿಸಿದರೆ, ಅಜರ್ ಅಲಿ 172 ಎಸೆತಗಳಲ್ಲಿ 12 ಬೌಂಡರಿ ಸಹಿತ 93 ರನ್ಗಳಿಸಿದರು. ಇವರ ನಂತರ ಫಹೀಮ್ ಅಶ್ರಫ್ 48, ಜಫರ್ ಗೊಹರ್ 34 ರನ್ಗಳಿಸಿ ತಂಡದ ಮೊತ್ತವನ್ನು 300ರ ಸನಿಹ ತಂದರು.
ನ್ಯೂಜಿಲ್ಯಾಂಡ್ ಪರ ಕೈಲ್ ಜೆಮೀಸನ್ 69ಕ್ಕೆ 5 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ತಲಾ 2 ವಿಕೆಟ್, ಮ್ಯಾಟ್ ಹೆನ್ರಿ ಒಂದು ವಿಕೆಟ್ ಪಡೆದರು.
ಇದನ್ನು ಓದಿ: ಅಶ್ವಿನ್-ಜಡೇಜಾ ಕಠಿಣ ಸ್ಪಿನ್ ಜೋಡಿ : ಕೇರಂ ಸ್ಪೆಷಲಿಸ್ಟ್ ವಿರುದ್ಧ ಸ್ಮಿತ್ ಗೆಲ್ಲುವ ವಿಶ್ವಾಸ- ಮ್ಯಾಥ್ಯೂ ವೇಡ್