ETV Bharat / sports

ಆರ್​ಸಿಬಿಯ 15 ಕೋಟಿ ರೂ. ಆಟಗಾರನಿಗೆ ದಂಡ ವಿಧಿಸಿದ ಐಸಿಸಿ

author img

By

Published : Mar 25, 2021, 5:16 PM IST

ಕ್ರೈಸ್ಟ್‌ ಚರ್ಚ್‌ನಲ್ಲಿ ಮಂಗಳವಾರ ಬಾಂಗ್ಲಾದೇಶದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಎದುರಾಳಿ ತಂಡದ ತಮೀಮ್ ಇಕ್ಬಾಲ್ ಅವರನ್ನು ಕಾಟ್​​ ಅಂಡ್ ಬೌಲ್ಡ್ ಮಾಡಿದ್ದರು. ಆದರೆ ಈ ಕ್ಯಾಚ್​ ಪರಿಶೀಲಿಸಿದ ಟಿವಿ ಅಂಪೈರ್, ಜೆಮೀಸನ್ ಕ್ಯಾಚ್ ಪಡೆದ ನಂತರ ನೆಲಕ್ಕೆ ತಾಗಿಸಿರುವುದು ಸ್ಪಷ್ಟವಾಗಿದ್ದರಿಂದ ನಾಟ್‌ಔಟ್ ಎಂದು ತೀರ್ಪು ನೀಡಿದ್ದರು.

ಕೈಲ್ ಜೆಮೀಸನ್​
ಕೈಲ್ ಜೆಮೀಸನ್​

ಕ್ರೈಸ್ಟ್‌ಚರ್ಚ್: ಬಾಂಗ್ಲಾದೇಶದ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಮೂರನೇ ಅಂಪೈರ್​ ತೀರ್ಪಿನ ವಿರುದ್ಧ ಮೈದಾನದಲ್ಲಿ ಎಲ್ಲೆ ಮೀರಿ ವರ್ತಿಸಿದ ಆರೋಪದ ಮೇಲೆ ಐಸಿಸಿ, ನ್ಯೂಜಿಲ್ಯಾಂಡ್​ನ ಕೈಲ್ ಜೆಮೀಸನ್​ ಅವರಿಗೆ ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಿದೆ.

ಇದನ್ನು ಓದಿ:14ನೇ ಐಪಿಎಲ್​ಗೆ ಹೊಸ ಜರ್ಸಿ ಬಿಡುಗಡೆಗೊಳಿಸಿದ ಸಿಎಸ್​ಕೆ,ಡೆಲ್ಲಿ ಕ್ಯಾಪಿಟಲ್ಸ್​!

ಆದರೆ ಮೂರನೇ ಅಂಪೈರ್ ತೀರ್ಪು ತಮಗೆ ವಿರುದ್ಧವಾಗಿ ಬಂದಿದ್ದಕ್ಕೆ ಜೆಮೀಸನ್ ಮೈದಾನದಲ್ಲೇ ಅಸಮಾಧಾನ ಹೊರ ಹಾಕಿದ್ದರು. ಹೀಗಾಗಿ ಮ್ಯಾಚ್​ ರೆಫ್ರಿ ಕಿವೀಸ್ ಆಲ್​ರೌಂಡರ್​ಗೆ ಪಂದ್ಯ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಲಾಗಿದೆ. ಜೊತೆಗೆ ಜೇಮಿಸನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ತಿಳಿಸಿದೆ. ಐಸಿಸಿ ಆರ್ಟಿಕಲ್​ 2.8 ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ದಂಡದ ಜೊತೆಗೆ ಒಂದು ಋಣಾತ್ಮಕ ಅಂಕವನ್ನು ಪಡೆದುಕೊಂಡಿದ್ದಾರೆ.

2020ರ ಫೆಬ್ರವರಿಯಲ್ಲಿ ನಡೆದಿದ್ದ ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ನ್ಯೂಜಿಲೆಂಡ್‌ನ ವೇಗಿಯನ್ನು ಬರೋಬ್ಬರಿ 15 ಕೋಟಿ ರೂ. ನೀಡಿ ಖರೀದಿಸಿತ್ತು.

ಇದನ್ನು ಓದಿ:ಕಿವೀಸ್​ ಆಲ್​ರೌಂಡರ್​ ಜೆಮೀಸನ್​ರನ್ನು ಬರೋಬ್ಬರಿ 15 ಕೋಟಿ ರೂ. ನೀಡಿ ಖರೀದಿಸಿದ ಆರ್​ಸಿಬಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.