ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಮಹತ್ವದ ಮೈಲುಗಲ್ಲನ್ನು ತಲುಪಿದ್ದಾರೆ. ಹಿಟ್ ಮ್ಯಾನ್ ಐಪಿಎಲ್ ಇತಿಹಾಸದಲ್ಲಿ 5000 ರನ್ ಗಳಿಸಿದ 3 ನೇ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಈ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ 190 ಪಂದ್ಯಗಳಿಂದ 4,998 ರನ್ಗಳಿಸಿದ್ದರು. ಇದೀಗ ತಮ್ಮ 191 ಪಂದ್ಯದಲ್ಲಿ ಮೊಹಮ್ಮದ್ ಶಮಿಗೆ ಬೌಂಡರಿ ಬಾರಿಸುವ ಮೂಲಕ ಐಪಿಎಲ್ನಲ್ಲಿ 5,000 ಗಡಿ ದಾಟಿದರು. ರೋಹಿತ್ ಶರ್ಮಾ ಐಪಿಎಲ್ನಲ್ಲಿ 37 ಅರ್ಧಶತಕ ಹಾಗೂ 1 ಶತಕ ಕೂಡ ದಾಖಲಿಸಿದ್ದಾರೆ.
-
5000 runs in IPL for @ImRo45. Joins the likes of Suresh Raina and Virat Kohli.#Dream11IPL pic.twitter.com/EDA7u30pZb
— IndianPremierLeague (@IPL) October 1, 2020 " class="align-text-top noRightClick twitterSection" data="
">5000 runs in IPL for @ImRo45. Joins the likes of Suresh Raina and Virat Kohli.#Dream11IPL pic.twitter.com/EDA7u30pZb
— IndianPremierLeague (@IPL) October 1, 20205000 runs in IPL for @ImRo45. Joins the likes of Suresh Raina and Virat Kohli.#Dream11IPL pic.twitter.com/EDA7u30pZb
— IndianPremierLeague (@IPL) October 1, 2020
ರೋಹಿತ್ ಶರ್ಮಾಗೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 178 ಪಂದ್ಯಗಳಿಂದ 5,426 ರನ್ಗಳಿಸಿ ಗರಿಷ್ಠ ರನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 193 ಪಂದ್ಯಗಳಲ್ಲಿ 5,368 ರನ್ಗಳಿಸಿರುವ ಸಿಎಸ್ಕೆ ತಂಡದ ಸುರೇಶ್ ರೈನಾ 2ನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ ಗರಿಷ್ಠ ರನ್ ಸರದಾರರು
- ವಿರಾಟ್ ಕೊಹ್ಲಿ 5,430
- ಸುರೇಶ್ ರೈನಾ- 5,368
- ರೋಹಿತ್ ಶರ್ಮಾ-5,000+
- ಡೇವಿಡ್ ವಾರ್ನರ್- 4,793
- ಶಿಖರ್ ಧವನ್- 4,648
- ಎಬಿ ಡಿ ವಿಲಿಯರ್ಸ್- 4,529