ETV Bharat / sports

ಕೋವಿಡ್​-19.. ಝೋನಲ್ ಟೂರ್ನಮೆಂಟ್ ರದ್ಧುಗೊಳಿಸಿದ ಕೆಎಸ್​ಸಿಎ.. ಹಾಗಾದ್ರೆ ಐಪಿಎಲ್ ಕಥೆ?

"ಕೆಎಸ್​ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​) ಕರ್ನಾಟಕ ರಾಜ್ಯ ಸರ್ಕಾರ ಏಪ್ರಿಲ್ 2ರಂದು ಹೊಸ ಕೋವಿಡ್ ಮಾರ್ಗಸೂಚಿಗಳನ್ನು ಪರಿಶೀಲಿಸಿದೆ. ಇದರ ಪ್ರಕಾರ ಕ್ರಿಕೆಟ್ ಪಂದ್ಯಗಳನ್ನಾಡಲು ಯಾವುದೇ ನಿರ್ಬಂಧವಿಲ್ಲ. ಆದರೆ, ಮುನ್ನಡೆಚ್ಚರಿಕೆ ಕ್ರಮವಾಗಿ ಅಂಡರ್-16 ಝೋನಲ್ ಪಂದ್ಯವನ್ನು ಸೋಮವಾರದಿಂದ ರದ್ದುಗೊಳಿಸಲು ಬೋರ್ಡ್​ ತೀರ್ಮಾನಿಸಿದೆ..

ಕೆಎಸ್​ಸಿಎ
ಕೆಎಸ್​ಸಿಎ
author img

By

Published : Apr 3, 2021, 8:34 PM IST

ಬೆಂಗಳೂರು : ರಾಜ್ಯದಲ್ಲಿ ಕೋವಿಡ್​-19 ಕೇಸ್‌ಗಳ ಏರಿಕೆಯ ಕಾರಣ ಕೆಲ ನೂತನ ಮಾರ್ಗಸೂಚಿಗಳನ್ನು ಸರ್ಕಾರ ಹೊರ ತಂದಿದೆ. ಇದಕ್ಕನುಗುಣವಾಗಿ ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್(ಕೆಎಸ್​ಸಿಎ) ಕೂಡ ತನ್ನ ಎಲ್ಲಾ ಟೂರ್ನಮೆಂಟ್​ಗಳನ್ನು ಭಾನುವಾರದ ನಂತರ ರದ್ದುಗೊಳಿಸುವುದಾಗಿ ಆದೇಶಿಸಿದೆ.

ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ ಹಿನ್ನೆಲೆ, ಸರ್ಕಾರವು ಕೆಲ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯ ಪ್ರಕಾರ ಪಬ್, ಬಾರ್, ರೆಸ್ಟೋರೆಂಟ್​​ಗಳಿಗೆ ಶೇ.50ರಷ್ಟು ಮೀಸಲಾತಿ ನೀಡಿದ್ರೆ, ವಿದ್ಯಾಗಮ, ಜಿಮ್​​, ಸ್ವಿಮ್ಮಿಂಗ್ ಫೂಲ್​ಗಳಿಗೆ 18 ದಿನಗಳ ಕಾಲ ಸಂಪೂರ್ಣ ಸ್ಥಗಿತಗೊಳಿಸಲು ಆದೇಶಿಸಿದೆ. ಜೊತೆಗೆ ಯಾವುದೇ ಕ್ರೀಡೆಗಳನ್ನು ಮುನ್ನೆಚ್ಚರಿಕೆಯಿಂದ ಪ್ರೇಕ್ಷಕರಿಲ್ಲದೆ ನಡೆಸಲು ಅವಕಾಶ ನೀಡಿದೆ.

"ಕೆಎಸ್​ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​) ಕರ್ನಾಟಕ ರಾಜ್ಯ ಸರ್ಕಾರ ಏಪ್ರಿಲ್ 2ರಂದು ಹೊಸ ಕೋವಿಡ್ ಮಾರ್ಗಸೂಚಿಗಳನ್ನು ಪರಿಶೀಲಿಸಿದೆ. ಇದರ ಪ್ರಕಾರ ಕ್ರಿಕೆಟ್ ಪಂದ್ಯಗಳನ್ನಾಡಲು ಯಾವುದೇ ನಿರ್ಬಂಧವಿಲ್ಲ. ಆದರೆ, ಮುನ್ನಡೆಚ್ಚರಿಕೆ ಕ್ರಮವಾಗಿ ಅಂಡರ್-16 ಝೋನಲ್ ಪಂದ್ಯವನ್ನು ಸೋಮವಾರದಿಂದ ರದ್ದುಗೊಳಿಸಲು ಬೋರ್ಡ್​ ತೀರ್ಮಾನಿಸಿದೆ.

ಇಂದು ಆರಂಭವಾಗಿರುವ 2 ದಿನದ ಪಂದ್ಯ ನಾಳೆ ಅಂತ್ಯಗೊಳ್ಳಲಿದೆ. ನಾಳೆಯ ನಂತರ ಯಾವುದೇ ಟೂರ್ನಮೆಂಟ್​ನ ಎಲ್ಲಾ ಪಂದ್ಯಗಳನ್ನು ಅಮಾನತುಗೊಳಿಸುತ್ತೇವೆ" ಎಂದು ಪ್ರಕಟಣೆ ಹೊರಡಿಸಿದೆ. "ಉಳಿದಿರುವ ಪಂದ್ಯಗಳನ್ನು ಕೋವಿಡ್-19 ಪರಿಸ್ಥಿತಿ ಅವಲೋಕಿಸಿ ಮರು ದಿನಾಂಕ ಘೋಷಿಸುತ್ತೇನೆ" ಎಂದು ಕೆಎಸ್​ಸಿಎ ವಕ್ತಾರ ಮತ್ತು ಖಜಾಂಚಿ ವಿನಯ್ ಮೃತ್ಯುಂಜಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಗಾದ್ರೆ ಐಪಿಎಲ್ ಕಥೆ ಏನು? : ರಾಜ್ಯ ಸರ್ಕಾರ ಮಾರ್ಗಸೂಚಿಯಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಕ್ರಿಕೆಟ್​ ಪಂದ್ಯಗಳನ್ನು ನಡೆಸಲು ಅವಕಾಶ ನೀಡಿರುವುದರಿಂದ ಐಪಿಎಲ್​ಗೆ ಯಾವುದೇ ತೊಂದರೆಯಿಲ್ಲ. ಇನ್ನು, ಸರ್ಕಾರದ ಈ ಮಾರ್ಗಸೂಚಿಗಳು ಏಪ್ರಿಲ್​ ತಿಂಗಳಿಗೆ ಮುಗಿಯಲಿವೆ.

ಬೆಂಗಳೂರಿನಲ್ಲಿ ಮೇ 9ರಿಂದ ಟೂರ್ನಿಯ ಕೊನೆಯ ಹಂತದ ಪಂದ್ಯಗಳು ನಡೆಯುವುದರಿಂದ ನಗದು ಸಮೃದ್ಧ ಲೀಗ್​ಗೆ ಯಾವುದೇ ತೊಂದರೆಯಾಗುವುದಿಲ್ಲ ಅನ್ನೋದು ಸ್ಪಷ್ಟಪಡಿಸಲಾಗಿದೆ.

ಇದನ್ನು ಓದಿ:ನಾವು ಅತ್ಯುತ್ತಮ ಸಮತೋಲನ ತಂಡ ಹೊಂದಿದ್ದೇವೆ : ಮೈಕಲ್ ಹಸ್ಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.