ಬೆಂಗಳೂರು: ಕೆಪಿಎಲ್ನ 8ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಅಂಡರ್ 19 ಹೀರೋ ದೇವದತ್ ಪಡಿಕ್ಕಲ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಬಳ್ಳಾರಿ ಟಸ್ಕರ್ಸ್ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 9 ರನ್ಗಳಿಂದ ಮಣಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟಸ್ಕರ್ಸ್ 20 ಓವರ್ಗಳಲ್ಲಿ 163 ರನ್ಗಳ ಸ್ಪರ್ಧಾತ್ಮ ಮೊತ್ತ ಕಲೆಹಾಕಿತು. ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ 56 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ 70 ರನ್ಗಳಿಸಿದರು. ಇವರಿಗೆ ಸಾಥ್ ನೀಡಿದ ಅಭಿಷೇಕ್ ರೆಡ್ಡಿ 24, ಜೀಶಾನ್ 25 ರನ್ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
-
All-round performance hand the @BallariTuskers a nine run win over the @HubliTigers in match 6 of #KPL8.
— Namma KPL (@KPLKSCA) August 19, 2019 " class="align-text-top noRightClick twitterSection" data="
#HTvBT #KPL8 #NammaKPL #KPLNoduGuru pic.twitter.com/TqhZpRBj6s
">All-round performance hand the @BallariTuskers a nine run win over the @HubliTigers in match 6 of #KPL8.
— Namma KPL (@KPLKSCA) August 19, 2019
#HTvBT #KPL8 #NammaKPL #KPLNoduGuru pic.twitter.com/TqhZpRBj6sAll-round performance hand the @BallariTuskers a nine run win over the @HubliTigers in match 6 of #KPL8.
— Namma KPL (@KPLKSCA) August 19, 2019
#HTvBT #KPL8 #NammaKPL #KPLNoduGuru pic.twitter.com/TqhZpRBj6s
ಹುಬ್ಬಳ್ಳಿ ಪರ ವಿನಯ್ ಕುಮಾರ್ 1, ಆದಿತ್ಯ ಸೋಮಣ್ಣ 2, ಡೇವಿಡ್ ಮೆಥಾಯಿಸ್ 2, ಮಿತ್ರಕಾಂತ್ ಯಾದವ್ 2 ವಿಕೆಟ್ ಪಡೆದು ಮಿಂಚಿದರು.
164 ರನ್ಗಳನ್ನು ಬೆನ್ನೆತ್ತಿದ ಟೈಗರ್ಸ್ ಮೊದಲ ಓವರ್ನಲ್ಲೇ ಅನುಭವಿ ತಾಹ ವಿಕೆಟ್ ಕಳೆದುಕೊಂಡಿತು. ಆದರೆ ವಿಶ್ವನಾಥ್ 30 ರನ್, ಲೌನಿತ್ ಸಿಸೋಡಿಯಾ 22, ಕೆಎಲ್ ಶ್ರೀಜಿತ್ 22 ರನ್, ನಾಯಕ ವಿನಯ್ ಕುಮಾರ್ 37 ರನ್, ಪ್ರವೀಣ್ ದುಬೆ 28 ರನ್ಗಳಿಸಿ ಗೆಲುವಿಗಾಗಿ ಕೊನೆಯ ಓವರ್ವರೆಗೂ ಹೋರಾಟ ನಡೆಸಿದರು. ಆದರೆ 20 ಓವರ್ಗಳಲ್ಲಿ 154 ರನ್ಗಳಿಸಲಷ್ಟೇ ಶಕ್ತವಾಗಿ 9 ರನ್ಗಳಿಂದ ಸೋಲೊಪ್ಪಿಕೊಂಡಿತು.
ಬಳ್ಳಾರಿ ಪರ ಪ್ರಸಿದ್ ಕೃಷ್ಣ 1, ಕೆ ಗೌತಮ್ 1, ಕಾರ್ತಿಕ್ ಸಿಎ 3, ಕೆಪಿ ಅಪ್ಪಣ್ಣ 1, ಅಬ್ರಾರ್ ಕಾಜಿ 2 ವಿಕೆಟ್ ಪಡೆದು ತಂಡಕ್ಕೆ 9 ರನ್ಗಳ ರೋಚಕ ಗೆಲುವು ತಂದುಕೊಟ್ಟರು. ಆಕರ್ಷಕ ಅರ್ಧಶತಕ ಸಿಡಿಸಿದ ಪಡಿಕ್ಕಲ್ ಸತತ 2ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.