ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಭಾರತದಲ್ಲಿ ಮತ್ತು ಆಸೀಸ್ ನೆಲದಲ್ಲಿ ಟೀಂ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಕಂಡಷ್ಟು ಯಶಸ್ಸನ್ನು ತುಂಬಾ ಶೀಘ್ರದಲ್ಲಿ ಮತ್ತೊಬ್ಬ ನಾಯಕ ಕಾಣಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಕೊಹ್ಲಿ ಅವರ ನೇತೃತ್ವದಲ್ಲಿ, ಭಾರತವು 2016-17 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು. ಅಲ್ಲದೇ ಆಸೀಸ್ ನೆಲ್ಲದಲ್ಲೇ ಕಾಂಗರೂಗಳ ವಿರುದ್ಧ 2-1 ರಿಂದ ಟೆಸ್ಟ್ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ್ದರು ಎಂದಿದ್ದಾರೆ.
"ತವರಿನಲ್ಲಿ ಅಥವಾ ಆಸೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿದ ಸಾಧನೆಯನ್ನು ಇನ್ನೊಬ್ಬ ಭಾರತೀಯ ನಾಯಕನು ಬಹಳ ಸಮಯದ ವರೆಗೆ ಅನುಕರಿಸುತ್ತಾನೆ" ಎಂದು ಹೇಳಿದ್ದಾರೆ.
ಓದಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ಗೆ ಆರಂಭಿಕ ಆಘಾತ... ಪಂದ್ಯಕ್ಕೆ ವರುಣನ ಅಡ್ಡಿ!
ಆಸ್ಟ್ರೇಲಿಯಾದಲ್ಲಿ ಗೆಲುವು ಸುಲಭವಾಗಿ ದಕ್ಕುವುದಿಲ್ಲ ಎಂದು ಹೇಳಿರುವ ರವಿ ಶಾಸ್ತ್ರಿ, ಪ್ರಸ್ತುತ ಭಾರತದ ತಂಡವು ಗೌರವಕ್ಕೆ ಏಕೆ ಅರ್ಹವಾಗಿದೆ ಎಂದು ವಿವರಿಸಿದ್ದಾರೆ.
21 ನೇ ಶತಮಾನದ ಆರಂಭದಿಂದಲೂ ಭಾರತೀಯ ತಂಡ ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಉತ್ತಮ ವೇಗದ ಬೌಲಿಂಗ್ ಸಂಪನ್ಮೂಲಗಳನ್ನು ಹೊಂದಿರಲಿಲ್ಲ. ಅದಕ್ಕಾಗಿಯೇ ಈ ಭಾರತೀಯ ತಂಡವು ಈ ಹಿಂದಿನ ತಂಡಗಳಿಗಿಂತ ಗೌರವವನ್ನು ಪಡೆದಿದೆ ಎಂದಿದ್ದಾರೆ.