ETV Bharat / sports

ನಾಯಕನಾಗಿ ಧೋನಿ ಹಿಂದಿಕ್ಕಿ ಹಲವು ಮೈಲುಗಲ್ಲು ಸ್ಥಾಪಿಸಿದ ವಿರಾಟ್.. - ಅತಿ ಹೆಚ್ಚು ಟೆಸ್ಟ್​ ಗೆದ್ದ ನಾಯಕ ಕೊಹ್ಲಿ

ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 10 ಬಾರಿ ಇನ್ನಿಂಗ್ಸ್​ ಜಯ ಸಾಧಿಸಿದ್ದರೆ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 9 ಬಾರಿ ಈ ಸಾಧನೆ ಮಾಡಿದೆ. ಇನ್ನು, ಅಜರುದ್ದೀನ್​ 8 ಹಾಗೂ ಗಂಗೂಲಿ ನೇತೃತ್ವದಲ್ಲಿ 7 ಪಂದ್ಯಗಳಲ್ಲಿ ಭಾರತ ಈ ಸಾಧನೆ ಮಾಡಿದೆ.

Kohli's captaincy record
author img

By

Published : Nov 16, 2019, 7:47 PM IST

ಇಂದೋರ್: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್​ ಹಾಗೂ130 ರನ್​ಗಳಿಂದ ಗೆಲ್ಲುವುದರ ಮೂಲಕ ಭಾರತ ತಂಡದ ನಾಯಕ ಕೊಹ್ಲಿ ಹೆಸರಿಗೆ ಹಲವು ದಾಖಲೆಗಳು ಸೇರ್ಪಡೆಗೊಂಡಿವೆ.

ಮಯಾಂಕ್​ ಅಗರ್ವಾಲ್ ದ್ವಿಶತಕ ಹಾಗೂ ಭಾರತೀಯ ಬೌಲರ್​ಗಳ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡ ಇನ್ನಿಂಗ್ಸ್​ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ದಾಖಲಾದ ಕೆಲವು ದಾಖಲೆಗಳ ವಿವರ ಇಲ್ಲಿದೆ.

ಅತಿ ಹೆಚ್ಚು ಬಾರಿ ಇನ್ನಿಂಗ್ಸ್​ ಜಯ

ಬಾಂಗ್ಲಾ ವಿರುದ್ಧದ ಇನ್ನಿಂಗ್ಸ್​ ಜಯ ಸಾಧಿಸುವ ಮೂಲಕ ವಿರಾಟ್ ಕೊಹ್ಲಿ ಭಾರತದ ಪರ ಅತೀ ಹೆಚ್ಚು ಇನ್ನಿಂಗ್ಸ್ ಜಯ ಸಾಧಿಸಿದ ನಾಯಕ ಎಂಬ ದಾಖಲೆಗೆ ಪಾತ್ರರಾದರು. ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 10 ಬಾರಿ ಇನ್ನಿಂಗ್ಸ್​ ಜಯ ಸಾಧಿಸಿದ್ದರೆ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 9 ಬಾರಿ ಈ ಸಾಧನೆ ಮಾಡಿದೆ. ಇನ್ನು, ಅಜರುದ್ದೀನ್​ 8 ಹಾಗೂ ಗಂಗೂಲಿ ನೇತೃತ್ವದಲ್ಲಿ 7 ಪಂದ್ಯಗಳಲ್ಲಿ ಭಾರತ ಈ ಸಾಧನೆ ಮಾಡಿದೆ.

ಸತತ 3 ಪಂದ್ಯಗಳಲ್ಲಿ ಇನ್ನಿಂಗ್ಸ್​ ಜಯ

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಎರಡು ಪಂದ್ಯಗಳನ್ನು ಭಾರತ ತಂಡ ಇನ್ನಿಂಗ್ಸ್​ ಜಯ ಸಾಧಿಸಿತ್ತು. ಇದೀಗ ಬಾಂಗ್ಲಾ ವಿರುದ್ಧವೂ ಇನ್ನಿಂಗ್ಸ್​ ಜಯ ಕಾಣುವ ಮೂಲಕ 26 ವರ್ಷಗಳ ನಂತರ ಈ ಸಾಧನೆ ಮಾಡಿದೆ. 1993-94ರಲ್ಲೂ ಭಾರತ ಸತತ ಮೂರು ಇನ್ನಿಂಗ್ಸ್ ಜಯ ಸಾಧಿಸಿತ್ತು.

ಸತತ 6ನೇ ಟೆಸ್ಟ್​ ಜಯ

ಭಾರತ ತಂಡ ವಿಂಡೀಸ್​ ವಿರುದ್ಧ ಆ್ಯಂಟಿಗುವಾ ಟೆಸ್ಟ್‌ನಿಂದ ಈವರೆಗೆ ಸತತ 6 ಟೆಸ್ಟ್​ಗಳಲ್ಲಿ ಜಯ ಸಾಧಿಸಿತು. ಈ ಹಿಂದೆ 2013ರಲ್ಲಿ ಫೆಬ್ರವರಿಯಿಂದ ನವೆಂಬರ್​ವರೆಗೆ ಇಷ್ಟೇ ಪಂದ್ಯಗಳಲ್ಲಿ ಜಯ ಸಾಧಿಸಿತ್ತು.

ನಾಯಕನಾಗಿ ಹೆಚ್ಚು ಜಯ ಸಾಧಿಸಿದ 5ನೇ ನಾಯಕ

ಟೆಸ್ಟ್ ಕ್ರಿಕೆಟ್​ನಲ್ಲಿ ನಾಯಕನಾಗಿ 32 ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರು. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್(53) ಮೊದಲ ಸ್ಥಾನದಲ್ಲಿದ್ದಾರೆ. ನಂತರ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್(48), ಸ್ಟೀವ್​ ವಾ(41), ವಿಂಡೀಸ್​ನ ಕ್ಲೈವ್​ ಲಾಯ್ಡ್​(36) ಇದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.