ETV Bharat / sports

ಕೊಹ್ಲಿ vs ತೆಂಡೂಲ್ಕರ್: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 12 ವರ್ಷ ಪೂರೈಸಿದಾಗ ಇಬ್ಬರ ಸಾಧನೆ ಏನು? - ವಿರಾಟ್ ಕೊಹ್ಲಿ

ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 12 ವರ್ಷ ಪೂರೈಸಿದ್ದು, ಸಚಿನ್​ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 12 ವರ್ಷ ಪೂರೈಸಿದ ದಿನಗಳಲ್ಲಿ ಮಾಡಿದ ಸಾಧನೆಗಳನ್ನ ಹೋಲಿಸಲಾಗುತ್ತಿದೆ.

ಕೊಹ್ಲಿ vs ತೆಂಡೂಲ್ಕರ್
ಕೊಹ್ಲಿ vs ತೆಂಡೂಲ್ಕರ್
author img

By

Published : Aug 19, 2020, 12:49 PM IST

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ, ಟೀಂ​ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಕ್ರಿಕೆಟರ್​ ಮಾಸ್ಟರ್​ ಬ್ಲಾಸ್ಟರ್​​ ಸಚಿನ್ ತೆಂಡೂಲ್ಕರ್ ನಡುವಿನ ಹೋಲಿಕೆಗಳು ಹೆಚ್ಚುತ್ತಲೇ ಇವೆ. ಪ್ರಸ್ತುತ ಸಚಿನ್​ರ ಎಲ್ಲಾ ದಾಖಲೆಗಳನ್ನು ವಿರಾಟ್​ ಮುರಿಯಬಹುದೆಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ.

ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 12 ವರ್ಷ ಪೂರೈಸಿದ್ದು, ಸಚಿನ್​ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 12 ವರ್ಷ ಪೂರೈಸಿದ ದಿನಗಳಲ್ಲಿ ಮಾಡಿದ ಸಾಧನೆಗಳನ್ನ ಹೋಲಿಸಲಾಗುತ್ತಿದೆ.

ಸಚಿನ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಅವರು ಬ್ಯಾಟ್‌ನಿಂದ ಎಲ್ಲವನ್ನೂ ಸಾಧಿಸಿದ್ದಾರೆ. 463 ಏಕದಿನ ಪಂದ್ಯಗಳಿಂದ 44.83 ಸರಾಸರಿಯಲ್ಲಿ 18,426 ರನ್ ಗಳಿಸಿದ್ದಾರೆ. ಸಚಿನ್ 50 ಓವರ್‌ ಫಾರ್ಮೆಟ್​ನಲ್ಲಿ ಶತಕಗಳ ಅರ್ಧಶತಕ ಸಿಡಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳಲ್ಲಿ 'ಮಾಸ್ಟರ್ ಬ್ಲಾಸ್ಟರ್' ಎಂದು ಜನಪ್ರಿಯವಾಗಿರುವ ಸಚಿನ್ 200 ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಗಳಿಸಿದ್ದಾರೆ. ಟೆಸ್ಟ್​ನಲ್ಲಿ 51 ಶತಕ ಸಿಡಿಸಿದ್ದಾರೆ.

ಕೊಹ್ಲಿ vs ತೆಂಡೂಲ್ಕರ್
ಕೊಹ್ಲಿ vs ತೆಂಡೂಲ್ಕರ್

'ಗೇಮ್ ಆಫ್ ಫೇಮ್' ಇತಿಹಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಮುಟ್ಟಿದ ಏಕೈಕ ಆಟಗಾರ ಸಚಿನ್ ಮತ್ತು ಹಾಲಿ ಭಾರತ ತಂಡದ ನಾಯಕ ವಿರಾಟ್​ ಆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಈಗಾಗಲೇ​ 70 ಶತಕ ಸಿಡಿಸಿದ್ದಾರೆ.

ಇಲ್ಲಿಯವರೆಗೆ, ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 43 ಶತಕಗಳನ್ನು ದಾಖಲಿಸಿದ್ದಾರೆ. ಅತ್ಯುತ್ತಮ ರನ್-ಚೇಸರ್‌ಗಳಲ್ಲಿ ಒಬ್ಬರಾಗಿ ತಮ್ಮ ಇಮೇಜ್ ಅನ್ನು ಸ್ಥಾಪಿಸಿದ್ದಾರೆ. 31 ರ ಹರೆಯದ ವಿರಾಟ್​ 248 ಏಕದಿನ ಪಂದ್ಯಗಳಲ್ಲಿ, 59.33 ಸರಾಸರಿಯಲ್ಲಿ 11,867 ರನ್ ಗಳಿಸಿದ್ದಾರೆ. ಪಾಕಿಸ್ತಾನ ವಿರುದ್ಧ 183 ರನ್​​ ಗಳಿಸಿದ್ದು, ಏಕದಿನ ಫಾರ್ಮೆಟ್​ನಲ್ಲಿ ಗರಿಷ್ಠ ಸ್ಕೋರ್ ಆಗಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12 ವರ್ಷಗಳನ್ನು ಪೂರೈಸಿದ ನಂತರ ಸಚಿನ್ 272 ಇನ್ನಿಂಗ್ಸ್‌ಗಳಲ್ಲಿ 10,803 ರನ್ ಗಳಿಸಿದ್ದಾರೆ. ಅದರಲ್ಲಿ 31 ಶತಕ ಮತ್ತು 53 ಅರ್ಧಶತಕಗಳಿದ್ದವು.

ಏಕದಿನದಲ್ಲಿ ಕೊಹ್ಲಿ ಸರಾಸರಿ 59.33 ಆಗಿದ್ದರೆ, ಸಚಿನ್ ಸರಾಸರಿ 43.73 ರಷ್ಟಿದ್ದರು. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ ಮತ್ತು ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಕೊಹ್ಲಿ, ಈವರೆಗೆ 86 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 53.62 ಸರಾಸರಿಯಲ್ಲಿ 27 ಶತಕಗಳೊಂದಿಗೆ 7,240 ರನ್ ಗಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.