ETV Bharat / sports

ಫೋರ್ಬ್ಸ್​ನ 100 ಶ್ರೀಮಂತ ಕ್ರೀಡಾಪಟುಗಳ​​ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಕೊಹ್ಲಿ! - ಫೋರ್ಬ್ಸ್​ ಪಟ್ಟಿಯಲ್ಲಿ ಸ್ಥಾನ ಪಡೆದ ಕೊಹ್ಲಿ

2020ರ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯನ್ನು ಫೋರ್ಬ್ಸ್​ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ವಿಟ್ಜರ್​ರ್ಲೆಂಡ್​ನ ರೋಜರ್​ ಫೆಡರರ್ 106.3 ಮಿಲಿಯನ್​ ಯುಎಸ್​ಡಿ(802 ಕೋಟಿ) ಆದಾಯ ಹೊಂದಿದ್ದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಲಿಸ್ಟ್​ನಲ್ಲಿ ವಿರಾಟ್​ ಕೊಹ್ಲಿ 26 ಮಿಲಿಯನ್​ ಯುಎಸ್​ಡಿ(196 ಕೋಟಿ) ಆದಾಯದೊಂದಿಗೆ 66ನೇ ಸ್ಥಾನ ಪಡೆದಿದ್ದಾರೆ.

Forbes Highest earning athletes list
ಫೋರ್ಬ್ಸ್​ನ ಶ್ರೀಮಂತ ಅಥ್ಲೀಟ್ಸ್​​ ಪಟ್ಟಿ
author img

By

Published : May 30, 2020, 1:32 PM IST

Updated : May 30, 2020, 1:43 PM IST

ನವದೆಹಲಿ: ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಫೋರ್ಬ್ಸ್​ ಬಿಡುಗಡೆ ಮಾಡಿರುವ 2020ರ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಹಾಗೂ ಭಾರತದ ಏಕಮಾತ್ರ ಕ್ರೀಡಾಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

2020ರ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯನ್ನು ಫೋರ್ಬ್ಸ್​ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ವಿಟ್ಜರ್​ರ್ಲೆಂಡ್​ನ ರೋಜರ್​ ಫೆಡರರ್ 106.3 ಮಿಲಿಯನ್​ ಯುಎಸ್​ಡಿ(802 ಕೋಟಿ) ಆದಾಯ ಹೊಂದಿದ್ದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಲಿಸ್ಟ್​ನಲ್ಲಿ ವಿರಾಟ್​ ಕೊಹ್ಲಿ 26 ಮಿಲಿಯನ್​ ಯುಎಸ್​ಡಿ(196 ಕೋಟಿ) ಆದಾಯದೊಂದಿಗೆ 66ನೇ ಸ್ಥಾನ ಪಡೆದಿದ್ದಾರೆ.

Forbes Highest earning athletes list
ರೋಜರ್​ ಫೆಡರರ್​

ವಿರಾಟ್​ ಕೊಹ್ಲಿ ಕಳೆದ ವರ್ಷ ಕೂಡ ಟಾಪ್ 100ರಲ್ಲಿ ಸ್ಥಾನ ಪಡೆದಿದ್ದ ಏಕೈಕ ಕ್ರಿಕೆಟರ್​ ಆಗಿದ್ದರು. ಆದರೆ ಈ 4 ಬಾರಿ ಕಳೆದ ವರ್ಷಕ್ಕಿಂತ 30ಕ್ಕಿಂತ ಹೆಚ್ಚಿನ ಸ್ಥಾನ ಏರಿಕೆ ಕಂಡಿದ್ದಾರೆ. ಕೊಹ್ಲಿ 24 ಮಿಲಿಯನ್​ ಡಾಲರ್​ ಆದಾಯವನ್ನು ತಮ್ಮ ಜಾಹೀರಾತು ರಾಯಭಾರತ್ವದಿಂದ ಹಾಗೂ 2 ಮಿಲಿಯನ್​ ಡಾಲರ್​ ಮೊತ್ತದ ಆದಾಯವನ್ನು ಬಿಸಿಸಿಐ ನೀಡುವ ವೇತನದಿಂದ ಪಡೆಯಲಿದ್ದಾರೆ.

ಅತಿ ಹೆಚ್ಚು ಆದಾಯ ಗಳಿಸಿರುವ ಫೋರ್ಬ್ಸ್​ ಪಟ್ಟಿಯಲ್ಲಿ ರೋಜರ್​ ಫೆಡರರ್​ ನಂತರದ ಸ್ಥಾನಗಳಲ್ಲಿ ಫುಟ್​ಬಾಲ್​ ಸ್ಟಾರ್​ಗಳಾದ ಫೋರ್ಚುಗಲ್​ನ ಕ್ರಿಶ್ಚಿಯಾನೊ ರೊನಾಲ್ಡೊ 105 ಮಿಲಿಯನ್​ ಯುಎಸ್​ಡಿ, (793 ಕೋಟಿ ರೂ.) 3ನೇ ಸ್ಥಾನದಲ್ಲಿ, ಅರ್ಜೆಂಟೈನಾದ ಲಿಯೋನಲ್​ ಮೆಸ್ಸಿ 104 ಮಿಲಿಯನ್​ ಯುಎಸ್​ಡಿ (785 ಕೋಟಿ ರೂ.) ಹಾಗೂ ಬ್ರೆಜಿಲ್​ನ ನೇಮರ್ ​ 95.5 ಮಿಲಿಯನ್ ಯುಎಸ್​ಡಿ (721 ಕೋಟಿ ರೂ.) 4ನೇ ಸ್ಥಾನದಲ್ಲಿದ್ದಾರೆ.

Last Updated : May 30, 2020, 1:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.