ETV Bharat / sports

ಶತಕ ಸಿಡಿಸಿದ ಪಂತ್​​​; ಸಂಭ್ರಮಿಸಿದ ವಿರಾಟ್​ ಕೊಹ್ಲಿ: ವಿಡಿಯೋ - ಕುರ್ಚಿಯಿಂದ ಜಿಗಿದು ಸಂಭ್ರಮಿಸಿದ ವಿರಾಟ್​

ಒತ್ತಡದ ನಡುವೆಯೂ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಪಂದ್ಯದಲ್ಲಿ ರಿಷಭ್ ಪಂತ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು.

Kohli
Kohli
author img

By

Published : Mar 5, 2021, 9:06 PM IST

ಅಹಮದಾಬಾದ್​: ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ವಿಕೆಟ್​ ಕೀಪರ್ ರಿಷಭ್​ ಪಂತ್​ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದು, ಈ ವೇಳೆ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ವಿಶೇಷವಾಗಿ ಸಂಭ್ರಮಿಸಿದ್ದಾರೆ.

ಅಹಮದಾಬಾದ್​​ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್​ ಪಂದ್ಯದಲ್ಲಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದ್ದರು. ಆದ್ರೆ ರಿಷಭ್​ ಪಂತ್​ ಶತಕದಾಟ ನೋಡಿ ಸಂಭ್ರಮಿಸಿದ್ದಾರೆ. ಡ್ರೆಸ್ಸಿಂಗ್ ರೂಮ್​ನಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡುತ್ತಿದ್ದ ವಿರಾಟ್​, ವಿಕೆಟ್ ಕೀಪರ್ ರಿಷಭ್ ಶತಕ ಸಾಧನೆ ಮಾಡುತ್ತಿದ್ದಂತೆ ತಾವು ಕುಳಿತುಕೊಂಡಿದ್ದ ಕುರ್ಚಿಯಿಂದೆದ್ದು ಹೊರಗಡೆ ಬಂದು ಖುಷಿ ಪಟ್ಟರು.

ಇದನ್ನೂ ಓದಿ: ಇಂಗ್ಲೆಂಡ್​, ಆಸ್ಟ್ರೇಲಿಯಾ, ಭಾರತದಲ್ಲಿ ರಿಷಭ್​ ಶತಕ: ಈ ಸಾಧನೆಗೈದ 2ನೇ ವಿಕೆಟ್​ ಕೀಪರ್​

ಮೊದಲ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ 205 ರನ್​ಗಳಿಗೆ ಆಲೌಟ್ ಆಗಿದ್ದು, ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್​ ಆರಂಭಿಸಿರುವ ಟೀಂ ಇಂಡಿಯಾ 7ವಿಕೆಟ್ ​ನಷ್ಟಕ್ಕೆ 297ರನ್ ​ಗಳಿಕೆ ಮಾಡಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗೆ ಟೀಂ ಇಂಡಿಯಾ ಲಗ್ಗೆ ಹಾಕಬೇಕಾದರೆ ಈ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಡ್ರಾ ಅಥವಾ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.