ಹೈದರಾಬಾದ್: ಕ್ರಿಕೆಟ್ನ ಮೂರು ವಿಧಾನಗಳಲ್ಲೂ ವಿರಾಟ್ ಕೊಹ್ಲಿ ಒಬ್ಬ ಅಸಾಧಾರಣ ಆಟಗಾರ. ಅವರು ಮತ್ತಷ್ಟು ದಾಖಲೆಗಳನ್ನು ಬ್ರೇಕ್ ಮಾಡಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಗಳಿಸಿರುವ ರನ್ಗಳೇ ಅವರೇನು ಎಂಬುದನ್ನು ಹೇಳುತ್ತವೆ. ಅವರಿಗೆ ರನ್ಗಳಿಸುವ ಹಸಿವಿದೆ. ಅದಕ್ಕಾಗಿಯೇ ಅವರು ಹುಡುಕಾಡುತ್ತಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಮಾತ್ರ ರನ್ ಗಳಿಸಬಾರದು ಎಂದು ತಮಾಷೆ ಮಾಡಿದರು.
ನಾಯಕನಾಗಿ ಉತ್ತಮವಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ವಿರಾಟ್, ಟೀಂ ಇಂಡಿಯಾವನ್ನು ಟೆಸ್ಟ್ನಲ್ಲಿ ಅಗ್ರ ಶ್ರೇಯಾಂಕಕ್ಕೆ ಕೊಂಡೊಯ್ದಿದ್ದಾರೆ. ಫಿಟ್ನೆಸ್ ಮತ್ತು ಆರೋಗ್ಯದ ವಿಚಾರದಲ್ಲಿಯೂ ಅವರು ಯಾವಾಗಲೂ ಜಾಗರೂಕರಾಗಿರುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
2020ರ ಟಿ-20 ವಿಶ್ವಕಪ್ ಟೂರ್ನಿ ಕುರಿತು ಸ್ಮಿತ್ ಮಾತನಾಡಿದ್ದು, ತವರಿನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿರುವುದಾಗಿ ತಿಳಿಸಿದರು.
ಕಳೆದ ಕೆಲ ವರ್ಷಗಳಿಂದ ಚುಟುಕು ಕ್ರಿಕೆಟ್ನಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ತೋರದ ಆಸೀಸ್ ಆಟಗಾರ, ವಿಶ್ವಕಪ್ ಟೂರ್ನಿಗಾಗಿ ಸಿದ್ಧತೆ ನಡೆಸುವುದಾಗಿ ತಿಳಿಸಿದ್ದಾರೆ.