ಆ್ಯಂಟಿಗುವಾ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಹೆಬ್ಬೆರಳು ಗಾಯವಾಗಿರುವ ಪರಿಣಾಮ ಅಭ್ಯಾಸ ಪಂದ್ಯದಲ್ಲಿ ಉಪನಾಯಕ ಅಜಿಂಕ್ಯಾ ರಹಾನೆಗೆ ನಾಯಕತ್ವ ಜವಾಬ್ದಾರಿ ನೀಡಲಾಗಿದೆ.
ವೆಸ್ಟ್ ಇಂಡೀಸ್ ಎ ವಿರುದ್ಧ ನಡೆಯುತ್ತಿರುವ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ರಹಾನೆ ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿದಿದೆ.
ವಿಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಕೆಮರ್ ರೋಚ್ ಬೌಲಿಂಗ್ನಲ್ಲಿ ಕೊಹ್ಲಿ ಬಲಗೈ ಹೆಬ್ಬೆರಳಿಗೆ ಬಾಲ್ಬಿದ್ದು ಉಗುರು ಕಿತ್ತುಬಂದಿತ್ತು. ಆದರೂ ಉತ್ತಮ ಬ್ಯಾಟಿಂಗ್ ನಡೆಸಿ ಶತಕ ಪೂರ್ಣಗೊಳಿಸಿದ್ದರು.
ಆದರೆ ಇಂದಿನಿಂದ ಆರಂಭವಾಗಿರುವ ಅಭ್ಯಾಸ ಪಂದ್ಯದಿಂದ ಹೊರಗುಳಿದ್ದಾರೆ. ತಂಡದ ನೇತೃತ್ವವನ್ನು ಉಪನಾಯಕ ಅಜಿಂಕ್ಯಾ ರಹಾನೆ ಬಹಿಸಿಕೊಂಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸುತ್ತಿರುವ ಭಾರತ ತಂಡ 35 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 111 ರನ್ಗಳಿಸಿದೆ. ಪೂಜಾರ 22 ಹಾಗೂ ರೋಹಿತ್ 38 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್ 12, ರಾಹುಲ್ 36, ರಹಾನೆ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದ್ದಾರೆ.