ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಮುಖಾಮುಖಿಯಾಗಿದ್ದ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ಅದ್ಭುತ ಪ್ರದರ್ಶನ ನೀಡಿದ್ದು, ಕೊನೆಗೆ ಸೂಪರ್ ಓವರ್ ಮೂಲಕ ಗೆಲುವು ದಾಖಲು ಮಾಡಿರುವ ಆಂಗ್ಲ ಪಡೆ ಟ್ರೋಫಿ ಗೆದ್ದು ನೂತನ ಇತಿಹಾಸ ರಚನೆ ಮಾಡಿದೆ.
ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೋಲು ಕಾಣುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕಿವೀಸ್ ಹಾಗೂ ಇಂಗ್ಲೆಂಡ್ ತಂಡಕ್ಕೆ ಕೊಹ್ಲಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
-
Great show by both the teams in the #CWC19Finals yesterday. Congratulations @englandcricket. 👍🏼
— Virat Kohli (@imVkohli) July 15, 2019 " class="align-text-top noRightClick twitterSection" data="
">Great show by both the teams in the #CWC19Finals yesterday. Congratulations @englandcricket. 👍🏼
— Virat Kohli (@imVkohli) July 15, 2019Great show by both the teams in the #CWC19Finals yesterday. Congratulations @englandcricket. 👍🏼
— Virat Kohli (@imVkohli) July 15, 2019
ಉಭಯ ತಂಡಗಳಿಂದಲೂ ನಿನ್ನೆ ಅದ್ಭುತ ಪ್ರದರ್ಶನ ಮೂಡಿ ಬಂದಿದ್ದು, ಅಭಿನಂದನೆಗಳು ಇಂಗ್ಲೆಂಡ್ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ನ್ಯೂಜಿಲ್ಯಾಂಡ್ ನೀಡಿದ್ದ 241ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಕೂಡ 241ರನ್ಗಳಿಕೆ ಮಾಡಲು ಮಾತ್ರ ಶಕ್ತವಾಯಿತು. ಹೀಗಾಗಿ ಸೂಪರ್ ಓವರ್ನಲ್ಲಿ ಉಭಯ ತಂಡಗಳು 15ರನ್ಗಳಿಕೆ ಮಾಡಿದ್ದರಿಂದ ಬೌಂಡರಿ ಆಧಾರದ ಮೇಲೆ ಆಂಗ್ಲರ ತಂಡ ವಿನ್ ಎಂದು ಘೋಷಣೆ ಮಾಡಲಾಗಿತ್ತು.