ಮುಂಬೈ: ದಶಕದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆದಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸತತ 4ನೇ ವರ್ಷವೂ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂಬರ್ ಒನ್ ಆಗಿ ಕ್ಯಾಲೆಂಡರ್ ವರ್ಷವನ್ನು ಮುಗಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ನಂತರ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದರು. ಆದರೆ ವಿಲಿಯರ್ಸ್ರಿಂದ ಭರ್ಜರಿ ಪೈಪೋಟಿಯಿಂದ 2014 ರಿಂದ 16ರವರೆಗೆ 2ನೇ ಸ್ಥಾನದಲ್ಲಿದ್ದ ಕೊಹ್ಲಿ, ನಂತರ 2017 ರಿಂದ ಇಲ್ಲಿಯವರೆಗೆ ನಂಬರ್ ಒನ್ ಸ್ಥಾನದಲ್ಲೇ ಮುಂದುವರಿದ್ದಾರೆ.
ಇದನ್ನು ಓದಿ: ಐಸಿಸಿ ಟೆಸ್ಟ್ ಶ್ರೇಯಾಂಕ : ಸ್ಮಿತ್, ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಲಿಯಮ್ಸನ್.. 6ನೇ ಸ್ಥಾನದಲ್ಲಿ ರಹಾನೆ
2011ರಿಂದಲೂ ಕೊಹ್ಲಿ 3 ನೇ ಶ್ರೇಯಾಂಕದಿಂದ ಕೆಳಗಿಳಿದಿಲ್ಲ. ಇನ್ನು ಟೆಸ್ಟ್ ಕ್ರಿಕೆಟ್ನಲ್ಲೂ ಕೊಹ್ಲಿ 2017ರ ಬಳಿಕ ಟಾಪ್2 ರಲ್ಲೇ ಮುಂದುವರಿಯುತ್ತಿದ್ದಾರೆ. ಇಂದು ಬಿಡುಗಡೆಯಾದ ಟಿ20 ಶ್ರೇಯಾಂಕದಲ್ಲಿ ಕೊಹ್ಲಿ 2ನೇ ಸ್ಥಾನದಲ್ಲಿದ್ದು 2020ನ್ನು ಮುಗಿಸಿದ್ದಾರೆ.
ಕೊಹ್ಲಿ ಜೊತೆ ಜೊತೆಗೆ ಸಾಗುತ್ತಿರುವ ಭಾರತ ಸೀಮಿತ ಓವರ್ಗಳ ಉಪನಾಯಕ ರೋಹಿತ್ ಶರ್ಮಾ ಕೂಡ 2018ರಿಂದ ಏಕದಿನ ಶ್ರೇಯಾಂಕದಲ್ಲಿ ನಂಬರ್ 2ರಲ್ಲೇ ಮುಂದುವರಿದಿದ್ದಾರೆ.