ಮುಂಬೈ: ವಿಶ್ವಕಪ್ ವೇಳೆ ಆಸ್ಟ್ರೇಲಿಯಾ ತಂಡದ ಸ್ಟಿವ್ ಸ್ಮಿತ್ ಅವರನ್ನು ಚೀಟರ್ ಎಂದು ಹೀಯಾಳಿಸುವುದನ್ನು ನಿಲ್ಲಿಸಿ, ನಮ್ಮನ್ನು ಚೆಪ್ಪಾಳೆ ಮೂಲಕ ಹುರಿದುಂಬಿಸಿ ಎಂದು ಕೈಸನ್ನೆ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಈ ಕ್ಷಣವನ್ನು ನೆನೆಪಿಸಿರುವ ಐಸಿಸಿ ಕೊಹ್ಲಿಗೆ ಐಸಿಸಿ ವರ್ಷದ ಕ್ರೀಡಾಸ್ಫೂರ್ತಿ(ಸ್ಪಿರಿಟ್ ಆಫ್ ಕ್ರಿಕೆಟ್) ಮೆರೆದ ಕ್ರಿಕೆಟರ್ ಪ್ರಶಸ್ತಿಗೆ ಆಯ್ಕೆ ಮಾಡಿದೆ.
2019 ಜೂನ್ 9 ರಂದು ನಡೆದಿದ್ದ ಆ ಪಂದ್ಯದಲ್ಲಿ ಚೆಂಡು ವಿರೂಪ ಪ್ರಕರಣದಿಂದ ಒಂದು ವರ್ಷ ನಿಷೇಧ ಅನುಭವಿಸಿ ವಿಶ್ವಕಪ್ನಲ್ಲಿ ಕಮ್ಬ್ಯಾಕ್ ಮಾಡಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ಗೆ ಅಭಿಮಾನಿಗಳು ಬೆಂಬಿಡದೆ ಕಾಡುತ್ತಿದ್ದಾರೆ. ಪ್ರತಿ ಪಂದ್ಯದಲ್ಲಿ ಇವರಿಬ್ಬರು ಕಣಕ್ಕಿಳಿಯುವಾಗ ಇಂಗ್ಲೆಂಡ್ನಲ್ಲಿ ಅಭಿಮಾನಿಗಳು ಮೊಸಗಾರ, ಚೀಟರ್ ಎಂದು ಕರೆದು ಹೀಯಾಳಿಸುತ್ತಿದ್ದರು.
-
Who remembers this gesture from Virat Kohli during #CWC19?
— ICC (@ICC) January 15, 2020 " class="align-text-top noRightClick twitterSection" data="
The Indian captain is the winner of the 2019 Spirit of Cricket Award 🙌 #ICCAwards pic.twitter.com/Z4rVSH8X7x
">Who remembers this gesture from Virat Kohli during #CWC19?
— ICC (@ICC) January 15, 2020
The Indian captain is the winner of the 2019 Spirit of Cricket Award 🙌 #ICCAwards pic.twitter.com/Z4rVSH8X7xWho remembers this gesture from Virat Kohli during #CWC19?
— ICC (@ICC) January 15, 2020
The Indian captain is the winner of the 2019 Spirit of Cricket Award 🙌 #ICCAwards pic.twitter.com/Z4rVSH8X7x
ಅದೇ ರೀತಿ ಭಾರತದ ವಿರುದ್ಧದ ಪಂದ್ಯದಲ್ಲೂ ಅಭಿಮಾನಿಗಳು ಹೀಗೆ ವರ್ತಿಸಿದ್ದರಿಂದ ಕೋಪಗೊಂಡ ಕೊಹ್ಲಿ, ಚೀಟರ್ ಎಂದು ಹೇಳುವುದನ್ನು ನಿಲ್ಲಿಸಿ, ನಮ್ಮನ್ನು ಪ್ರೋತ್ಸಾಹಿಸಿ ಎಂದು ಕೈ ಸನ್ನೆ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಕೊಹ್ಲಿ ಅವರ ಈ ಕ್ರೀಡಾ ಸ್ಫೂರ್ತಿ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅಲ್ಲದೆ ಸ್ಟೀವ್ ಸ್ಮಿತ್ ಅವರು ಕೊಹ್ಲಿಗೆ ಹಸ್ತಲಾಘವ ಮಾಡುವ ಮೂಲಕ ಧನ್ಯವಾದ ಅರ್ಪಿಸಿದರು.
ಐಸಿಸಿಯ ಇತರೆ ಪ್ರಶಸ್ತಿ ಪಡೆದವರು
- ವರ್ಷದ ಅತ್ಯುತ್ತಮ ಕ್ರಿಕೆಟಿಗನಿಗೆ ನೀಡುವ ಗ್ಯಾರಿ ಸೋಬರ್ಸ್ ಪ್ರಶಸ್ತಿ- ಬೆನ್ ಸ್ಟೋಕ್ಸ್
- ಐಸಿಸಿ ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟರ್- ಪ್ಯಾಟ್ ಕಮ್ಮಿನ್ಸ್
- ಐಸಿಸಿ ವರ್ಷದ ಅತ್ಯುತ್ತಮ ಏಕದಿನ ಕ್ರಿಕೆಟರ್- ರೋಹಿತ್ ಶರ್ಮಾ
- ಐಸಿಸಿ ವರ್ಷದ ಅತ್ಯುತ್ತಮ ಟಿ20 ಪ್ರದರ್ಶನ- ದೀಪಕ್ ಚಹಾರ್( 7ರನ್ಗೆ 6 ವಿಕೆಟ್ ಪಡೆದಿರುವುದು)
- ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ- ಮಾರ್ನಸ್ ಲಾಬುಶೇನ್
- ಐಸಿಸಿ ವರ್ಷದ ಅಸೋಸಿಯೇಟ್ ಕ್ರಿಕೆಟರ್- ಕೈಲ್ ಕೊಯೆಟ್ಜರ್(ಸ್ಕಾಟ್ಲೆಂಡ್)
- ಐಸಿಸಿ ವರ್ಷದ ಕ್ರೀಡಾ ಸ್ಫೂರ್ತಿ ಕ್ಷಣ: ಸ್ಮಿತ್ ವಿರುದ್ಧ ಅಭಿಮಾನಿಗಳು ಹಿಯ್ಯಾಳಿಸಿದ್ದನ್ನು ಖಂಡಿಸಿ, ಫೀಲ್ಡಿಂಗ್ ಚೆಪ್ಪಾಳೆ ತಟ್ಟಲು ತಿಳಿಸಿದ ಕ್ಷಣ
- ಐಸಿಸಿ ವರ್ಷದ ಅಂಪೈರ್( ಡೇವಿಡ್ ಶೇಫರ್ಡ್ ಪ್ರಶಸ್ತಿ)- ರಿಚರ್ಡ್ ಇಲ್ಲಿಂಗ್ವರ್ತ್