ಚೆನ್ನೈ : ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ನಾಲ್ಕನೇ ದಿನ 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಪಿಚ್ನಲ್ಲಿ ಓಡಿ ರನ್ಗಳಿಸಿದ್ದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಪೈರ್ ಬಳಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಮಂಗಳವಾರ ಮುಗಿದ ಮೊದಲ ಟೆಸ್ಟ್ ಪಂದ್ಯದಲ್ಲಿ 420 ರನ್ಗಳ ಬೆನ್ನಟ್ಟುವಲ್ಲಿ ವಿಫಲವಾದ, ಭಾರತ ತಂಡ 227 ರನ್ಗಳ ಸೋಲು ಕಂಡು ಸರಣಿಯಲ್ಲಿ 0-1 ರಲ್ಲಿ ಹಿನ್ನಡೆ ಸಾಧಿಸಿದೆ.
ನಾಲ್ಕನೇ ದಿನದಾಟದ ವೇಳೆ ಕೊಹ್ಲಿ ಅಂಪೈರ್ ವಿರುದ್ಧ ಗರಂ ಆಗಿರುವ ವಿಡಿಯೋವೊಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಪಿಚ್ ಮೇಲೆ ಓಡುತ್ತಿದ್ದದ್ದನ್ನು ಅಂಪೈರ್ ನಿತಿನ್ ಮೆನನ್ ಗಮನಿಸದೇ ಇದ್ದದ್ದು ಇದಕ್ಕೆ ಕಾರಣವಾಗಿದೆ.
-
Credits-@/aumbetiroydo on insta
— Jay (@Aragorn_2_) February 8, 2021 " class="align-text-top noRightClick twitterSection" data="
😂😂 pic.twitter.com/amH0VE3vUt
">Credits-@/aumbetiroydo on insta
— Jay (@Aragorn_2_) February 8, 2021
😂😂 pic.twitter.com/amH0VE3vUtCredits-@/aumbetiroydo on insta
— Jay (@Aragorn_2_) February 8, 2021
😂😂 pic.twitter.com/amH0VE3vUt
"ಓಯ್, ಮೆನನ್(ನಿತಿನ್ ಮೆನನ್), ಅವರು ಸುಲಭವಾಗಿ ಪಿಚ್ ಮಧ್ಯೆದಲ್ಲೇ ಓಡುತ್ತಾ, ರನ್ ತೆಗೆದುಕೊಳ್ತಿದ್ದಾರೆ,ಏನಿದು? ಸ್ವಲ್ಪ ಈ ಕಡೆನೂ ಗಮನಿಸಬೇಕು" (ಸೀದೆ ರನ್ ಭೀ ಬೀಚ್ಗೆ ಭಾಗ್ ರಹಾ ಹೈ..ಉಸ್ಕೊ ಸಬ್ಕೊ ದೇಖೊ..ಕ್ಯಾ ಹೈ ಯಾರ್) ಎಂದು ಕೊಹ್ಲಿ ಅಂಪೈರ್ ಮುಂದೆ ತಮ್ಮ ಅಸಮಾಧಾನ ಹೊರ ಹಾಕುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
420 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಾಯಕ ವಿರಾಟ್ ಕೊಹ್ಲಿ 72, ಶುಬ್ಮನ್ ಗಿಲ್ 50 ರನ್ಗಳಿಸಿ ಪ್ರತಿರೋಧ ತೋರಿದರೂ ಸೋಲು ತಪ್ಪಿಸಲಾಗಲಿಲ್ಲ.