ETV Bharat / sports

ನಾಲ್ಕನೇ ಟೆಸ್ಟ್​ಗೂ ಮುನ್ನ ನೆಟ್ಸ್​ನಲ್ಲಿ ಬೆವರಿಳಿಸಿದ ಕೊಹ್ಲಿ ಮತ್ತು ರೋಹಿತ್ - ಭಾರತ ಮತ್ತು ಇಂಗ್ಲೆಂಡ್ 3ನೇ ಟೆಸ್ಟ್​

ಗುರುವಾರದಿಂದ ಅಹ್ಮದಾಬಾದ್​ನಲ್ಲಿ 4ನೇ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಈಗಾಗಲೆ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪ್ರವೇಶ ಬಹುತೇಕ ಖಚಿತ ಮಾಡಿಕೊಂಡಿರುವ ಭಾರತ ತಂಡ ಕೊನೆಯ ಪಂದ್ಯದಲ್ಲಿ ಡ್ರಾ ಅಥವಾ ಗೆಲುವು ಸಾಧಿಸಬೇಕಿದೆ.

ರೋಹಿತ್ ಶರ್ಮಾ ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ ವಿರಾಟ್ ಕೊಹ್ಲಿ
author img

By

Published : Mar 1, 2021, 9:01 PM IST

ಅಹ್ಮದಾಬಾದ್​: ನಾಯಕ ಕೊಹ್ಲಿ ಸೇರಿದಂತೆ ಭಾರತ ತಂಡದ ಸ್ಟಾರ್ ಬ್ಯಾಟ್ಸ್​ಮನ್​ಗಳಾದ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಟೆಸ್ಟ್​ಗೂ ಮುನ್ನ ನೆಟ್ಸ್​ನಲ್ಲಿ ಬೆವರು ಹರಿಸಿದ್ದಾರೆ.

ಗುರುವಾರದಿಂದ ಅಹ್ಮದಾಬಾದ್​ನಲ್ಲಿ 4ನೇ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಈಗಾಗಲೆ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪ್ರವೇಶ ಬಹುತೇಕ ಖಚಿತ ಮಾಡಿಕೊಂಡಿರುವ ಭಾರತ ತಂಡ ಕೊನೆಯ ಪಂದ್ಯದಲ್ಲಿ ಡ್ರಾ ಅಥವಾ ಗೆಲುವು ಸಾಧಿಸಬೇಕಿದೆ.

ನಾಯಕ ಕೊಹ್ಲಿ , ಉಪನಾಯಕ ಅಜಿಂಕ್ಯ ರಹಾನೆ ಮತ್ತು ಅನುಭವಿ ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ ನೆಟ್ಸ್​ನಲ್ಲಿ ಸ್ಪಿನ್ ಮತ್ತು ವೇಗದ ಬೌಲರ್​ಗಳಿಗೆ ಫುಲ್, ಡ್ರೈವ್ ಮತ್ತು ಫ್ಲಿಕ್ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ಗಳಲ್ಲಿ ಟ್ವೀಟ್ ಮಾಡಿಕೊಂಡಿದೆ.

ಮುಖ್ಯ ಕೋಚ್ ರವಿಶಾಸ್ತ್ರಿ, ರೋಹಿತ್ ಮತ್ತು ಕೊಹ್ಲಿ ಅವರೊಂದಿಗೆ ಕೆಲವು ಸಮಯ ಚರ್ಚೆ ಕೂಡ ನಡೆಸಿದ್ದಾರೆ. ನಂತರ ಕೆಲಕಾಲ ರೋಹಿತ್ ಮತ್ತು ಕೊಹ್ಲಿ ಒಟ್ಟಿಗೆ ಮಾತನಾಡಿದ್ದಾರೆ.

ಇನ್ನು 3ನೇ ಟೆಸ್ಟ್​ನಲ್ಲಿ 11 ವಿಕೆಟ್ ಪಡೆದಿದ್ದ ಅಕ್ಷರ್ ಪಟೇಲ್, 4ನೇ ಪಂದ್ಯ ಇದೇ ಸ್ಟೇಡಿಯಂನಲ್ಲಿ ನಡೆಯುವುದರಿಂದ ನೆಟ್ಸ್​ನಲ್ಲಿ ದಿಗ್ಗಜ ಬ್ಯಾಟ್ಸ್​ಮನ್​ಗಳ ಎದುರು ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ನಂತರ ರಹಾನೆ ಮತ್ತು ರೋಹಿತ್ ಸ್ಪಿಪ್​ನಲ್ಲಿ ನಿಂತು ಒಂದು ಕೈಯಲ್ಲಿ ಕ್ಯಾಚಿಂಗ್ ಅಭ್ಯಾಸ ಮಾಡಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಅಶ್ವಿನ್​ ತಂಡಕ್ಕೆ ಮರಳಬೇಕು: ಬ್ರಾಡ್​ ಹಾಗ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.