ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ಮೈದಾನದಲ್ಲಿ ಮಾತ್ರ ಸ್ಪರ್ಧಾತ್ಮಕ ವ್ಯಾಘ್ರನಂತೆ ಕಾಣುತ್ತಾರೆ. ಆದರೆ ಮೈದಾನ ಹೊರಗೆ ಅವರ ವ್ಯಕ್ತಿತ್ವ ತುಂಬಾ ಭಿನ್ನವಾಗಿರುತ್ತದೆ ಎಂದು ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ಹೇಳಿದ್ದಾರೆ.
ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಟೂರ್ನಿಯಿಂದ ಹಿಂದೆ ಸರಿದ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ಜಂಪಾಗೆ ಸಿಕ್ಕಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿಗೆ ಬದ್ಧ ಎದುರಾಳಿಯಾಗಿರುವ ಜಂಪಾ ಈ ವರ್ಷದ ಐಪಿಎಲ್ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಆಡಿದ್ದಾರೆ. ಕೊಹ್ಲಿಯನ್ನ ಆಕ್ರಮಣಕಾರಿ ಆಟಗಾರನಾಗಿ ಮಾತ್ರ ಕಂಡಿದ್ದ ಅವರು ಈ ವರ್ಷ ಕೊಹ್ಲಿಯನ್ನು ತುಂಬಾ ಹತ್ತಿರದಿಂದ ಕಂಡಿದ್ದು, ಅವರ ಗುಣವನ್ನು ಶ್ಲಾಘಿಸಿದ್ದಾರೆ.
ಅವರು(ಕೊಹ್ಲಿ) ಮೈದಾನದಲ್ಲಿ ಇರುವುದಕಕ್ಕಿಂದ ಹೊರಗೆ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿದ್ದಾರೆ. ಅವರ ಆಕ್ರಮಣಶೀಲತೆ ಮತ್ತು ಮೈದಾನದಲ್ಲಿ ಎಷ್ಟು ಸ್ಪರ್ಧಾತ್ಮರಾಗಿರುತ್ತಾರೆಂದು ನೀವು ನೋಡಿರುತ್ತೀರಿ. ಆದರೆ ಅವರು ನಿಜವಾಗಿಯೂ ಮೈದಾನದಿಂದ ಹೊರಗೆ ಬಹಳ ಕೂಲ್ ಆಗಿರುವ ವ್ಯಕ್ತಿಗಳಲ್ಲಿ ಒಬ್ಬರು ಎಂದು ಜಂಪಾ ಆರ್ಸಿಬಿ ಕ್ಯಾಪ್ಟನ್ರನ್ನು ಹೊಗಳಿದ್ದಾರೆ.
ನಿಸ್ಸಂಶಯವಾಗಿ ನೀವು ಅವರ ವಿರುದ್ಧ ಆಡಿದಾಗ ಅವರು ಮೈದಾನದಲ್ಲಿ ಹೇಗಿರುತ್ತಾರೆಂದು ತಿಳಿದಿರುತ್ತೀರಿ. ಆದರೆ ಕ್ರಿಕೆಟ್ ಮೈದಾನದ ಹೊರಗೆ ಅಂತಹ ವ್ಯಕ್ತಿ ಜೊತೆ ಸಮಯ ಕಳಯಲು ಸಾಧ್ಯವಾದಾಗ ಮಾತ್ರ ಆತ ಎಂತಹ ಮನುಷ್ಯ ಎಂದು ನೋಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಅವರು ಮೈದಾನದಲ್ಲಿ ಸ್ಪರ್ಧಾತ್ಮಕ ಕ್ರೀಡಾಪಟುವೆಂಬುದು ತಿಳಿದಿದ್ದೆ. ಆದರೆ ಈ ಪಯಣದಲ್ಲಿ ನಾನು ಮೊದಲ ಬಾರಿಗೆ ಅವರ ಜೊತೆ ಆಡಿರುವುದರಿಂದ ಮೈದಾನದಲ್ಲಿ ಮತ್ತು ಮೈದಾನದ ಹೊರೆಗೆ ಅವರ ಎರಡು ವಿಭಿನ್ನ ಮುಖಗಳನ್ನು ಕಂಡಿದ್ದೇನೆ. ಕೊಹ್ಲಿ ಮೈದಾನದ ಹೊರೆಗೆ ತುಂಬಾ ಸುಂದರ ವ್ಯಕ್ತಿ ಮತ್ತು ಕೂಲ್ ಗಾಯ್. ಅವರು ಸದಾ ನಗುತ್ತಲೇ ಇರುತ್ತಾರೆ. ಜೋಕ್ಸ್ಗಳಿಗೂ ಬಿದ್ದು ಬಿದ್ದು ನಗುತ್ತಾರೆ ಎಂದು ಆಸೀಸ್ ಸ್ಪಿನ್ನರ್ ಹೇಳಿದ್ದಾರೆ.
ಜಂಪಾ ಈ ವರ್ಷದ ಐಪಿಎಲ್ನಲ್ಲಿ ಆರ್ಸಿಬಿ ಪರ ಕೇವಲ 3 ಪಂದ್ಯಗಳಲ್ಲಿ ಆಡಿದ್ದು, 2 ವಿಕೆಟ್ ಮಾತ್ರ ಪಡೆದಿದ್ದಾರೆ. ಅವರು ಎಲಿಮಿನೇಟರ್ ಪಂದ್ಯದಲ್ಲಿ 4 ಓವರ್ಗಳಲ್ಲಿ ಕೇವಲ 12 ರನ್ ನೀಡಿ 1 ವಿಕೆಟ್ ಪಡೆದಿದ್ದರು.