ನವದೆಹಲಿ: ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ರನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಕೈ ಬಿಡಲಾಗಿದ್ದು, ನಿರ್ಧಾರದಿಂದ ನಿರಾಶರಾಗಬೇಡಿ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ಕಿವಿಮಾತು ಹೇಳಿದ್ದಾರೆ.
ಕೆ.ಎಲ್.ರಾಹುಲ್ ಉತ್ತಮ ಆಟಗಾರ. ಆದ್ರೆ, ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದರು. ಅಲ್ಲದೇ ತಂಡಕ್ಕೆ ಕಂಬ್ಯಾಕ್ ಮಾಡಲು ಸಲಹೆ ನೀಡಿರುವ ಪ್ರಸಾದ್, ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರನ್ನು ಫಾಲೋ ಮಾಡುವಂತೆ ತಿಳಿಸಿದ್ದಾರೆ.
ಹಿಂದೆ ಒಂದು ಬಾರಿ ವಿವಿಎಸ್ ಲಕ್ಷ್ಮಣ್ ಅವರನ್ನು ಟೀಂ ಇಂಡಿಯಾದಿಂದ ಕೈ ಬಿಡಲಾಯಿತು. ದೇಶೀ ಟೂರ್ನಿಗೆ ಮರಳಿದ ಲಕ್ಷ್ಮಣ್ ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದು 1,400 ರನ್ ಗಳಿಸುವ ಮೂಲಕ ತಂಡಕ್ಕೆ ವಾಪಾಸ್ ಆಗಿದ್ದರು ಎಂದು ವಿವಿಎಸ್ ಲಕ್ಷ್ಮಣ್ ಉದಾಹರಿಸಿ ವಾಪಸಾತಿಗೆ ಸಲಹೆ ಕೊಟ್ಟಿದ್ದಾರೆ.
ಕಳೆದ 30 ಟೆಸ್ಟ್ ಇನ್ನಿಂಗ್ಸ್ ಮೂಲಕ ರಾಹುಲ್ ಗಳಿಸಿರುವುದು ಕೇವಲ 664 ರನ್. ಇದರಲ್ಲಿ ಅವರು ಇಂಗ್ಲೆಂಡ್ ವಿರುದ್ಧ 149 ರನ್ಗಳಿಸಿರುವುದೇ ಉತ್ತಮ ಸಾಧನೆಯಾಗಿದೆ.