ETV Bharat / sports

ರೋಹಿತ್​​​​​​ ಜೊತೆಗೆ ಈ ಬ್ಯಾಟ್ಸ್​ಮನ್​​​​​ ಆರಂಭಿಕನಾಗಲಿ... ಕನ್ನಡಿಗನ ಪರ ಲಕ್ಷ್ಮಣ್​​​​ ಬ್ಯಾಟಿಂಗ್​​​​ - ಕೆಎಲ್​ ರಾಹುಲ್​ ಬೆಂಬಲಕ್ಕೆ ಲಕ್ಷ್ಮಣ್​

ಧವನ್​ ಜಾಗದಲ್ಲಿ ಕೆ.ಎಲ್.ರಾಹುಲ್​ ಆರಂಭಿಕನಾಗಿ ಕಣಕ್ಕಿಳಿಯಲು ಇದು ಸುಸಮಯ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಕೊಹ್ಲಿ ಹಾಗೂ ಟೀಂ​ ಮ್ಯಾನೇಜ್​ಮೆಂಟ್​ಗೆ ಸಲಹೆ ನೀಡಿದ್ದಾರೆ.

VVS Laxman support to KL rahul
VVS Laxman support to KL rahul
author img

By

Published : Nov 28, 2019, 7:18 PM IST

ಮುಂಬೈ: ಗಾಯದಿಂದ ವಿಂಡೀಸ್​ ವಿರುದ್ಧದ ಸೀಮಿತ ಓವರ್​ಗಳ ಪಂದ್ಯಗಳಿಂದ ಹೊರಬಿದ್ದಿರುವ ಶಿಖರ್​ ಧವನ್​ ಜಾಗದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್​ರನ್ನು ಕಣಕ್ಕಿಳಿಸಿ ಎಂದು ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್​ ಸಲಹೆ ನೀಡಿದ್ದಾರೆ.

ವರ್ಷಾರಂಭದಲ್ಲಿ ಭಾರತ ಆಡುತ್ತಿರುವ ವಿಂಡೀಸ್​ ವಿರುದ್ಧದ ಏಕದಿನ ಸರಣಿ ಹಾಗೂ ಟಿ-20 ಸರಣಿಯಿಂದ ಗಾಯದ ಕಾರಣ ಶಿಖರ್​ ಧವನ್​​ ಹೊರಬಿದ್ದಿದ್ದು, ಅವರ ಜಾಗಕ್ಕೆ ಬಿಸಿಸಿಐ ಈಗಾಗಲೇ ಸಂಜು ಸಾಮ್ಸನ್​ ಅವರನ್ನು ಆಯ್ಕೆ ಮಾಡಿದೆ.

ಆದರೆ ಧವನ್​ ಜಾಗದಲ್ಲಿ ಕೆ.ಎಲ್.ರಾಹುಲ್​ ಆರಂಭಿಕನಾಗಿ ಕಣಕ್ಕಿಳಿಯಲು ಇದು ಸುಸಮಯ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಕೊಹ್ಲಿ ಹಾಗೂ ಟೀಂ​ ಮ್ಯಾನೇಜ್​ಮೆಂಟ್​ಗೆ ಸಲಹೆ ನೀಡಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗುವ ಗೇಮ್‌ ಪ್ಲಾನ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ಲಕ್ಷ್ಮಣ್‌, ರಾಹುಲ್​ ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ ಸೀಮಿತ ಓವರ್ ಕ್ರಿಕೆಟ್​ಗೆ ಮರಳದಿರುವುದರಿಂದ ಈಗಾಗಲೇ ಉತ್ತಮ ಫಾರ್ಮ್​ನಲ್ಲಿರುವ ರಾಹುಲ್​, ಧವನ್ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್​ ಆರಂಭಿಸಬೇಕು. ನನ್ನ ಪ್ರಕಾರ ರಾಹುಲ್​ ವಿಂಡೀಸ್​ ವಿರುದ್ಧ ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಎಂದು ವಿವಿಎಸ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಣ್​ ಹೀಗೆ ಹೇಳಲು ಕಾರಣವಿದೆ. ಕೆ.ಎಲ್.ರಾಹುಲ್​ ಕಳೆದೆರಡು ಐಪಿಎಲ್​ ಆವೃತ್ತಿಯಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ಪರ ಆರಂಭಿಕನಾಗಿ ಕಣಕ್ಕಿಳಿದು ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್​ಗಳ ಸಾಲಿನಲ್ಲಿದ್ದಾರೆ. ಅಲ್ಲದೆ ಪ್ರಸ್ತುತ ಸಯ್ಯದ್​ ಮುಷ್ತಾಕ್​ ಅಲಿ, ವಿಜಯ್​ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಆರಂಭಿಕನಾಗಿ ಯಶಸ್ವಿ ಬ್ಯಾಟ್ಸ್​ಮನ್​ ಆಗಿದ್ದಾರೆ.

ರಾಹುಲ್​ ಹೊರತುಪಡಿಸಿ ಭಾರತದ ನಾಲ್ಕನೇ ಕ್ರಮಾಂಕದಲ್ಲಿ ಬಾಂಗ್ಲಾ ವಿರುದ್ಧ ಆಡಿದ ಶ್ರೇಯಸ್​ ಅಯ್ಯರ್​ ಆಟವನ್ನು ಕೂಡ ಲಕ್ಷ್ಮಣ್​ ಹಾಡಿ ಹೊಗಳಿದ್ದಾರೆ.

ಶ್ರೇಯಸ್​ ಅಯ್ಯರ್​ ಬ್ಯಾಟಿಂಗ್​ ನೋಡಿ ತುಂಬಾ ಆಕರ್ಷಿತನಾಗಿದ್ದೇನೆ. ಬಾಂಗ್ಲಾದೇಶ ವಿರುದ್ಧದ ನಾಗ್ಪುರ ಟಿ-20ಯಲ್ಲಿ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಭಾರತ ತಂಡಕ್ಕೆ ಅಯ್ಯರ್​ ಅವರ ಬ್ಯಾಟಿಂಗ್​ ನೆರವಾಗಿತ್ತು. ಮೊದಲು ರಾಹುಲ್ ಜೊತೆಗೆ ಸ್ಟ್ರೈಕ್​ ಬದಲಿಸಿಕೊಂಡು ನಿಧಾನಗತಿ ಆಟವಾಡಿ, ರಾಹುಲ್​ ನಿರ್ಗಮಿಸಿದ ನಂತರ ತಮ್ಮ ಸ್ಫೂಟಕ ಆಟ ನಡೆಸಿದ ಅಯ್ಯರ್​ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಅಯ್ಯರ್​ ನನ್ನ ಪ್ರಕಾರ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರ ಎಂದು ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.