ದುಬೈ: ನಾಯಕ ಕೆಎಲ್ ರಾಹುಲ್ ಸಿಡಿಸಿದ ಅರ್ಧಶತಕದ ಬಲದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 178 ರನ್ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡಕ್ಕೆ ಅದ್ಭುತ ಫಾರ್ಮ್ನಲ್ಲಿರುವ ರಾಹುಲ್-ಮಯಾಂಕ್ ಜೋಡಿ ಮೊದಲ ವಿಕೆಟ್ಗೆ 61 ರನ್ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಮಯಾಂಕ್ ದೊಡ್ಡ ಹೊಡೆತಕ್ಕೆ ಕೈಯಾಕಿ ಚಾವ್ಲಾಗೆ ವಿಕೆಟ್ ನೀಡಿದರು.
-
Innings Break!#KXIP post a total of 178/4 on the board.
— IndianPremierLeague (@IPL) October 4, 2020 " class="align-text-top noRightClick twitterSection" data="
Is this enough to defend or will #CSK chase this down.
Stay tuned https://t.co/HGiMifs2NT #Dream11IPL pic.twitter.com/xhVxQkIHUg
">Innings Break!#KXIP post a total of 178/4 on the board.
— IndianPremierLeague (@IPL) October 4, 2020
Is this enough to defend or will #CSK chase this down.
Stay tuned https://t.co/HGiMifs2NT #Dream11IPL pic.twitter.com/xhVxQkIHUgInnings Break!#KXIP post a total of 178/4 on the board.
— IndianPremierLeague (@IPL) October 4, 2020
Is this enough to defend or will #CSK chase this down.
Stay tuned https://t.co/HGiMifs2NT #Dream11IPL pic.twitter.com/xhVxQkIHUg
ನಂತರ ಬಂದ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಂದೀಪ್ ಸಿಂಗ್ 16 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 27 ರನ್ಗಳಿಸಿ ಔಟಾದರು. ನಂತರ ನಾಯಕನ ಜೊತೆ ಸೇರಿದ ನಿಕೋಲಸ್ ಪೂರನ್ 17 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 33 ರನ್ಗಳಿಸಿ ಔಟಾದರು.
ನಾಯಕ ಕೆಎಲ್ ರಾಹುಲ್ 52 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 63 ರನ್ಗಳಿಸಿ 18 ಓವರ್ನಲ್ಲಿ ಶಾರ್ದುಲ್ ಟಾಕೂರ್ಗೆ ವಿಕೆಟ್ ಒಪ್ಪಿಸಿದರು.
ಮ್ಯಾಕ್ಸ್ವೆಲ್ 11 ಹಾಗೂ ಸರ್ಫರಾಜ್ ಖಾನ್ ಔಟಾಗದೆ 14 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಸಿಎಸ್ಕೆ ಪರ ಶಾರ್ದುಲ್ ಟಾಕೂರ್ 2 ವಿಕೆಟ್ ಪಡೆದರೆ, ಅನುಭವಿ ಪಿಯೂಷ್ ಚಾವ್ಲಾ ಹಾಗೂ ದೀಪಕ್ ಚಹಾರ್ ತಲಾ ಒಂದು ವಿಕೆಟ್ ಪಡೆದರು.