ದುಬೈ: ನಾಯಕ ಕೆಎಲ್ ರಾಹುಲ್ ಅಬ್ಬರದ ಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರ್ಸಿಬಿ ವಿರುದ್ಧ 206 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ತಂಡ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 206ರನ್ಗಳ ಮೊತ್ತ ದಾಖಲಿಸಿದೆ.
ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆ ಸೇರಿ ಮೊದಲ ವಿಕೆಟ್ಗೆ 57 ರನ್ಗಳ ಜೊತೆಯಾಟ ನೀಡಿದರು. 20 ಎಸೆತಗಳಲ್ಲಿ 4 ಬೌಂಡರಿ ಸಹಿತ 26 ರನ್ಗಳಿಸಿದ್ದ ಮಯಾಂಕ್ ಚಹಾಲ್ ಬೌಲಿಂಗ್ನಲ್ಲಿ ವಿಕೆಟ್ ಬೌಲ್ಡ್ ಆದರು.
-
💯
— IndianPremierLeague (@IPL) September 24, 2020 " class="align-text-top noRightClick twitterSection" data="
What an innings this by the @lionsdenkxip Skipper.
Take a bow, @klrahul11 pic.twitter.com/eHDDlVzTaJ
">💯
— IndianPremierLeague (@IPL) September 24, 2020
What an innings this by the @lionsdenkxip Skipper.
Take a bow, @klrahul11 pic.twitter.com/eHDDlVzTaJ💯
— IndianPremierLeague (@IPL) September 24, 2020
What an innings this by the @lionsdenkxip Skipper.
Take a bow, @klrahul11 pic.twitter.com/eHDDlVzTaJ
ಮಯಾಂಕ್ ಔಟಾದ ನಂತರವೂ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ರಾಹುಲ್ 2ನೇ ವಿಕೆಟ್ ಜೊತೆಯಾಟದಲ್ಲಿ ಪೂರನ್ ಜೊತೆ ಸೇರಿ 57 ರನ್ಗಳ ಸೇರಿಸಿದರು. ನಿಧಾನಗತಿ ಬ್ಯಾಟಿಂಗ್ ಪ್ರದರ್ಶನ ತೋರಿದ ಪೂರನ್ 18 ಎಸೆತಗಳಲ್ಲಿ 17 ರನ್ಗಳಿಸಿ ಔಟಾದರು. ನಂತರ ಬಂದ ಮ್ಯಾಕ್ಸ್ವೆಲ್ 5 ರನ್ಗಳಿಗೆ ಔಟಾಗುವ ಮೂಲಕ ಮತ್ತೊಮ್ಮೆ ವಿಫಲರಾದರು.
ಕೊನೆಯವರೆಗೂ ತನ್ನ ಸ್ಫೋಟಕ ಬ್ಯಾಟಿಂಗ್ ಮುಂದುರಿಸಿದ ರಾಹುಲ್ 69 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 14 ಬೌಂಡರಿ ಸಹಿತ 132 ರನ್ಗಳಿಸಿ ಔಟಾಗದೇ ಉಳಿದರು. ಈ ಮೂಲಕ ಐಪಿಎಲ್ನಲ್ಲಿ ತಮ್ಮ 2ನೇ ಶತಕ ದಾಖಲಿಸಿದರು. ಇವರು ಕೊನೆಯ ವಿಕೆಟ್ಗೆ ಕರುಣ್ ನಾಯರ್ ಜೊತೆಗೂಡಿ ಕೇವಲಕೊನೆಯ 28 ಎಸೆತಗಳಲ್ಲಿ 84 ರನ್ ಚಚ್ಚಿದರು, ಇದರಲ್ಲಿ ನಾಯರ್ ಪಾಲು ಕೇವಲ 8 ರನ್.
ಕೊನೆಯ ಎರಡು ಓವರ್ಗಳಲ್ಲಿ 49 ರನ್
ವಿಶ್ವದ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾದ ಡೇಲ್ ಸ್ಟೈನ್ ಓವರ್ನಲ್ಲಿ 3 ಸಿಕ್ಸ್ ಹಾಗೂ 2 ಬೌಂಡರಿ ಸಹಿತ 26 ರನ್ ಗಳಿಸಿದ ರಾಹುಲ್ ಕೊನೆಯ ಓವರ್ನಲ್ಲಿ ಕರುಣ್ ಜೊತೆಗೂಡಿ 23 ರನ್ ಸಿಡಿಸಿದರು.
ಆರ್ಸಿಬಿ ಪರ ಚಹಾಲ್ 25 ಕ್ಕೆ 1 ಹಾಗೂ ಶಿವಂ ದುಬೆ 33 ರನ್ ನೀಡಿ 2 ವಿಕೆಟ್ ಪಡೆದರು. ಉಳಿದ ಬೌಲರ್ಗಳು ರಾಹುಲ್ ಚಂಡಮಾರುತಕ್ಕೆ ಸಿಲುಕಿ ಹೈರಾಣಾದರು. ಡೇಲ್ ಸ್ಟೈನ್ 4 ಓವರ್ಗಳಲ್ಲಿ 57 ರನ್ ಬಿಟ್ಟಕೊಟ್ಟರೆ, ಸೈನಿ 37, ಉಮೇಶ್ ಯಾದವ್ 3 ಓವರ್ಗಳಲ್ಲಿ 35 ರನ್ ಬಿಟ್ಟುಕೊಟ್ಟರು.
ಎರಡು ಕ್ಯಾಚ್ ಕೈಚೆಲ್ಲಿದ ಕೊಹ್ಲಿ
ಕ್ಯಾಚ್ ವಿನ್ ಮ್ಯಾಚಸ್ ಎಂದು ಹೇಳುತ್ತಾರೆ. ಆದರೆ ಆರ್ಸಿಬಿ ಶ್ರೇಷ್ಠ ಫೀಲ್ಡರ್ಗಳಲ್ಲಿ ಒಬ್ಬರಾದ ಕೊಹ್ಲಿ ರಾಹುಲ್ 86 ರನ್ಗಳಿಸಿದ್ದ ವೇಳೆ ಹಾಗೂ 90 ರನ್ಗಳಿಸಿದ್ದ ವೇಳೆ 2 ಬಾರಿ ಕ್ಯಾಚ್ ಕೈಚೆಲ್ಲಿದರು. ಇದನ್ನು ಸದುಪಯೋಗಪಡಿಸಿಕೊಂಡ ರಾಹುಲ್ ಶತಕ ಪೂರೈಸಿದರಲ್ಲದೆ ಕೊನೆಯ ಓವರ್ಗಳಲ್ಲಿ 49 ರನ್ ಸೇರಿಸಿದರು.