ETV Bharat / sports

ಪಂಜಾಬ್​ ತಂಡವನ್ನ ರಾಹುಲ್​ ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ: ಮೆಚ್ಚುಗೆ ವ್ಯಕ್ತಪಡಿಸಿದ ಗವಾಸ್ಕರ್

ಕೆ.ಎಲ್ ರಾಹುಲ್ 2020ರ ಐಪಿಎಲ್​ನಲ್ಲಿ ತಂಡವನ್ನು ಮುನ್ನಡೆಸುವುದರ ಜೊತೆಗೆ, ತಾವೇ ಮುಂದಾಳಾಗಿ ನಿಂತು ಬ್ಯಾಟಿಂಗ್​ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದು, 11 ಪಂದ್ಯಗಳಿಂದ 5 ಅರ್ಧ ಶತಕ ಹಾಗೂ 1 ಶತಕದ ನೆರವಿನಿಂದ 567 ರನ್​ಗಳಿಸಿ ಆರೆಂಜ್ ಕ್ಯಾಪ್ ಆರಂಭದಿಂದಲೂ ತಮ್ಮಲ್ಲೇ ಇಟ್ಟುಕೊಂಡಿದ್ದಾರೆ.

ಕೆಎಲ್ ರಾಹುಲ್
ಕೆಎಲ್ ರಾಹುಲ್
author img

By

Published : Oct 26, 2020, 6:37 PM IST

ನವದೆಹಲಿ: ಪಸ್ತುತ ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್​ ಟೂರ್ನಮೆಂಟ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಕೆ.ಎಲ್. ರಾಹುಲ್ 2020ರ ಐಪಿಎಲ್​ನಲ್ಲಿ ತಂಡವನ್ನು ಮುನ್ನಡೆಸುವುದರ ಜೊತೆಗೆ, ತಾವೇ ಮುಂದಾಳಾಗಿ ನಿಂತು ಬ್ಯಾಟಿಂಗ್​ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದು, 11 ಪಂದ್ಯಗಳಿಂದ 5 ಅರ್ಧಶತಕ ಹಾಗೂ 1 ಶತಕದ ನೆರವಿನಿಂದ 567 ರನ್​ಗಳಿಸಿ ಆರೆಂಜ್ ಕ್ಯಾಪ್ ಆರಂಭದಿಂದಲೂ ತಮ್ಮಲ್ಲೇ ಇಟ್ಟುಕೊಂಡಿದ್ದಾರೆ.

" ರಾಹುಲ್ ಪಂಜಾಬ್ ತಂಡವನ್ನು ಚಾಣಾಕ್ಷತೆಯಿಂದ ಮುನ್ನಡೆಸುತ್ತಿದ್ದಾರೆ. ರಾಹುಲ್ ನಾಯಕತ್ವದ ಜವಾಬ್ದಾರಿಯಲ್ಲಿ ಪಳಗುತ್ತಿದ್ದಾರೆ. ಜೊತೆಗೆ ಅವರು ಈ ಹಿಂದೆ ಆಟಗಾರನಾಗಿ ಗಳಿಸಿದ್ದಕ್ಕಿಂತ ಹೆಚ್ಚಿನ ರನ್​ಗಳನ್ನು ನಾಯಕನಾಗಿ ಗಳಿಸಿಕೊಂಡಿದ್ದಾರೆ. ಅವರ ಫೀಲ್ಡ್​ ಸೆಟ್ಟಿಂಗ್, ಬೌಲಿಂಗ್ ಬದಲಾವಣೆ, ಅದರಲ್ಲೂ ಕ್ರಿಸ್ ಜೋರ್ಡನ್​ರಿಗೆ 19ನೇ ಓವರ್​ ಬೌಲಿಂಗ್ ಕೊಡುವುದು ಹಾಗೂ ಯುವ ಬೌಲರ್​ ಅರ್ಶ್​ದೀಪ್​ ಸಿಂಗ್ ಮೇಲೆ ನಂಬಿಕೆಯಿಟ್ಟು ಕೊನೆಯ ಓವರ್​ನಲ್ಲಿ 14 ರನ್​ಗಳನ್ನು ಡಿಫೆಂಡ್ ಮಾಡಿಕೊಳ್ಳಲು ಚೆಂಡನ್ನು ನೀಡಿದ್ದು ಮಾತ್ರ ಅವರ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ" ಎಂದು ಗವಾಸ್ಕರ್ ಕನ್ನಡಿಗನ ನಾಯಕತ್ವ ಕೊಂಡಾಡಿದ್ದಾರೆ.

ನಿಮಗೆ ತಿಳಿದಿದೆ, ಅವರು ಈಗಾಗಲೆ ಗೆಲುವಿನ ದಾರಿ ಕಂಡುಕೊಂಡಿದ್ದಾರೆ. ಟೂರ್ನಮೆಂಟ್​ನಲ್ಲಿ ಅವರು ಅದನ್ನು ಕಳೆದುಕೊಂಡತೆ ಕಾಣುತ್ತಿತ್ತು. ನೆನಪಿರಲಿ, ಅವರು ಎಲ್ಲ ಪಂದ್ಯಗಳಲ್ಲೂ ಗೆಲುವಿನ ಸನಿಹ ಬಂದಿದ್ದರು. ಸೂಪರ್​ ಓವರ್​ ಗೇಮ್​ ಮತ್ತು ಕೊನೆಯ ಓವರ್​ಗಳಲ್ಲಿ ಸೋಲು ಕಂಡಿದ್ದರು ಎಂದು ಪಂಜಾಬ್ ತಂಡದ ಸಾಮರ್ಥ್ಯವನ್ನು ತಿಳಿಸಿದ್ದಾರೆ.

ಪಂಜಾಬ್ ತಂಡ ಕೆಲವು ಪಂದ್ಯಗಳಲ್ಲಿ ಅಸಾಧಾರಣ ಕ್ರಿಕೆಟ್ ಆಡಿದೆ. ಕಳೆದ ಪಂದ್ಯದಲ್ಲಿ 126 ರನ್​ಗಳಿಸಿದರೂ ಅದನ್ನೇ ತಮ್ಮ ಆತ್ಮ ವಿಶ್ವಾಸದ ಬಲದಿಂದ ಡಿಫೆಂಡ್ ಮಾಡಿಕೊಳ್ಳುವ ಮೂಲಕ ಗೆಲುವಿನ ಸುಳಿವು ಹುಡುಕಿಕೊಂಡಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಇದರಲ್ಲಿ ಕೋಚ್​ ಅನಿಲ್ ಕುಂಬ್ಳೆ ಪಾತ್ರವನ್ನು ಮರೆಯುವಂತಿಲ್ಲ. ಅವರು ವೃತ್ತಿ ಜೀವನದ ಸಮಯದಲ್ಲೂ ಹೋರಾಟ ಮನೋಭಾವನೆ ಹೊಂದಿದ್ದವರು, ಅವರು ದವಡೆ ಮುರಿದಿದ್ದರೂ ಬ್ಯಾಂಡೇಜ್ ಕಟ್ಟಿಕೊಂಡು ಬೌಲಿಂಗ್ ಮಾಡಿದ್ದನ್ನು ನೀವು ನೋಡಿರಬಹುದು. ಇದೇ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರೂ ಅಸಾಧ್ಯವಾದ ರೀತಿಯಲ್ಲಿ ಪಂಜಾಬ್ ತಂಡ ತಿರುಗಿ ಬೀಳುತ್ತಿರುವುದಕ್ಕೆ ಬಲವಾದ ಕಾರಣ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.