ಸಿಡ್ನಿ(ಆಸ್ಟ್ರೇಲಿಯಾ) : ಕೋಲ್ಕತ್ತಾ ನೈಟ್ ರೈಡರ್ಸ್ ಪರ 2020ರ ಐಪಿಎಲ್ ಸೀಸನ್‌ನಲ್ಲಿ ಆಡಬೇಕಿದ್ದ ಆಸ್ಟ್ರೇಲಿಯಾದ ಯುವ ಬೌಲರ್ ಕ್ರಿಸ್ ಗ್ರೀನ್ ಅನುಮಾನಾಸ್ಪದ ಬೌಲಿಂಗ್ ಆರೋಪದ ಕಾರಣ ಮೂರು ತಿಂಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.
ಜನವರಿ 2 ರಂದು ನಡೆದಿದ್ದ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧದ ಪಂದ್ಯದಲ್ಲಿ ನಿಯಮಬಾಹಿರವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಫೀಲ್ಡ್ ಅಂಪೈರ್ಗಳಾದ ನಥಾನ್ ಜಾನ್ಸ್ಟೋನ್, ಮೈಕ್ ಗ್ರಹಾಮ್ಸ್ಮಿತ್ ಮತ್ತು ಥರ್ಡ್ ಅಂಪೈರ್ ಪಾಲ್ ವಿಲ್ಸನ್ ವರದಿ ನೀಡಿದ್ದರು. ರಾಷ್ಟ್ರೀಯ ಕ್ರಿಕೆಟ್ ಕೇಂದ್ರದಲ್ಲಿ ಜನವರಿ 5 ರಂದು ನಡೆಸಿದ ಪರೀಕ್ಷೆಯಲ್ಲೂ ಗ್ರೀನ್ ಅವರ ಬೌಲಿಂಗ್ ನಿಯಮ ಬಾಹಿರವಾಗಿರುವುದು ಸಾಬೀತಾಗಿದ್ದು, ಅವರನ್ನು 90 ದಿನಗಳ ಕಾಲ ಯಾವುದೇ ಕ್ರಿಕೆಟ್ನಲ್ಲೂ ಆಡದಂತೆ ನಿಷೇಧಿಸಲಾಗಿದೆ.
ಸಿಡ್ನಿ ಥಂಡರ್ ನಡೆಸುವ ಎಲ್ಲಾ ಪರೀಕ್ಷೆಗಳಿಗೆ ಸಹಕರಿಸುವುದಕ್ಕೆ ಮೊದಲು ಅವರನ್ನು ಗೌರವಿಸುತ್ತೇವೆ. ಆದಷ್ಟು ಬೇಗ ಕ್ರಿಸ್ಗೆ ಬೌಲಿಂಗ್ ಪರೀಕ್ಷೆ ನಡೆಸಲಿದ್ದು, ಅವರಲ್ಲಿ ತೃಪ್ತಿದಾಯಕ ಪ್ರತಿಕ್ರಿಯೆ ಬಂದರೆ ನಿಷೇಧದ ಅವಧಿ ಮುಗಿದ ನಂತರ ಉಳಿದ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥ ಪೀಟರ್ ರೋಚ್ ತಿಳಿಸಿದ್ದಾರೆ.
ಕ್ರಿಸ್ ಗ್ರೀನ್ ಅವರನ್ನು ಡಿಸೆಂಬರ್ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂಗೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮೂಲಬೆಲೆ 20 ಲಕ್ಷ ರೂಗೆ ಖರೀದಿಸಿತ್ತು. ಐಪಿಎಲ್ ಮಾರ್ಚ್ 29 ರಿಂದ ಆರಂಭವಾಗಲಿದ್ದು, ಗ್ರೀನ್ ಅವರು ಗವರ್ನಿಂಗ್ ಕೌನ್ಸಿಲ್ ಒಪ್ಪಿಗೆ ಪಡೆದು ಲೀಗ್ನಲ್ಲಿ ಆಡಬಹುದಾಗಿದೆ. ದೇಶಿ ತಂಡಗಳಾದ ನ್ಯೂಸೌತ್ ವೇಲ್ಸ್ ಹಾಗೂ ಸಿಡ್ನಿ ಥಂಡರ್ ತಂಡಗಳು ಅವರನ್ನು ಒಬ್ಬ ಬ್ಯಾಟ್ಸ್ಮನ್ ಆಗಿ ತಂಡದಲ್ಲಿ ಆಡಿಸಬಹುದಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸೂಚಿಸಿದೆ.