ETV Bharat / sports

ಐಪಿಎಲ್​ ಇತಿಹಾಸದಲ್ಲಿ 11ನೇ ಹಿಟ್​ ವಿಕೆಟ್​​​​​​​​​​​​​​​​​​ ಆದ ಹಾರ್ದಿಕ್ ಪಾಂಡ್ಯ!

author img

By

Published : Sep 24, 2020, 7:03 PM IST

ಪಂದ್ಯದಲ್ಲಿ ಬರೋಡಾ ಆಟಗಾರ ಹಿಟ್​ ವಿಕೆಟ್​ ಆಗಿ ವಿಕೆಟ್​ ಒಪ್ಪಿಸಿದ್ದರು. ಇದರ ಪ್ರಾಯಶ್ಚಿತ್ತವಾಗಿ, ಅದ್ಭುತ ಕ್ಷೇತ್ರರಕ್ಷಣೆ ನಡೆಸಿ ಮೂರು ಕ್ಯಾಚ್​ ತೆಗೆದುಕೊಳ್ಳುವ ಮೂಲಕ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಹಾರ್ದಿಕ್ ಪಾಂಡ್ಯ  ಹಿಟ್​ ವಿಕೆಟ್
ಹಾರ್ದಿಕ್ ಪಾಂಡ್ಯ ಹಿಟ್​ ವಿಕೆಟ್

ಹೈದರಬಾದ್​: ಐಪಿಎಲ್​ ಇತಿಹಾಸದಲ್ಲಿ ಬ್ಯಾಟ್ಸ್​ಮನ್​ಗಳು ಬೌಂಡರಿ, ಸಿಕ್ಸರ್​ಗಳ ಸುರಿಮಳೆ ಸುರಿಸುವುದು ಸಾಮಾನ್ಯ ಸಂಗತಿ. ಆದರೆ ಹಿಟ್​ ವಿಕೆಟ್​ ಮೂಲಕ ಬ್ಯಾಟ್ಸ್​ಮನ್ ಔಟಾಗುವುದು ತುಂಬಾ ವಿರಳ. ಬುಧವಾರ ಕೆಕೆಆರ್​ ವಿರುದ್ಧ ಮುಂಬೈ ಆಲ್​ರೌಂಡರ್ ಪಾಂಡ್ಯ ಹಿಟ್​ ವಿಕೆಟ್​ ಆಗುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಈ ರೀತಿ ವಿಕೆಟ್ ಒಪ್ಪಿಸಿದ 11ನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ. ​

ಪಂದ್ಯದಲ್ಲಿ ಬರೋಡಾ ಆಟಗಾರ ಹಿಟ್​ ವಿಕೆಟ್​ ಆಗಿ ವಿಕೆಟ್​ ಒಪ್ಪಿಸಿದ್ದರ ಪ್ರಾಯಶ್ಚಿತ್ತವಾಗಿ, ಅದ್ಭುತ ಕ್ಷೇತ್ರರಕ್ಷಣೆ ನಡೆಸಿ ಮೂರು ಕ್ಯಾಚ್​ ತೆಗೆದುಕೊಳ್ಳುವ ಮೂಲಕ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಹಿಟ್​ ವಿಕೆಟ್​ ಆದ ಬ್ಯಾಟ್ಸ್​ಮನ್​ಗಳು
ಹಿಟ್​ ವಿಕೆಟ್​ ಆದ ಬ್ಯಾಟ್ಸ್​ಮನ್​ಗಳು

​ತಂಡದ ಮೊತ್ತ 147ಕ್ಕೆ 3 ಇದ್ದಾಗ ಬ್ಯಾಟಿಂಗ್​​ಗೆ ಇಳಿದಿದ್ದ ಹಾರ್ದಿಕ್​ 13 ಎಸೆತಗಳಲ್ಲಿ 18 ರನ್​ಗಳಿಸಿದ್ದರು. ಅವರು ರಸೆಲ್ ಬೌಲಿಂಗ್​ನಲ್ಲಿ ಕ್ರೀಸ್​ನಿಂದ ತುಂಬಾ ಹಿಂದೆ ಬಂದು ಹೊಡೆಯಲು ಯತ್ನಿಸಿದಾಗ ಅವರ ಬ್ಯಾಟ್​ ಸ್ಟಂಪ್​ಗೆ ತಾಗಿದ್ದರಿಂದ, ಹಿಟ್​ ವಿಕೆಟ್ ಆದರು.

ಇನ್ನು ಐಪಿಎಲ್​ ಇತಿಹಾಸದಲ್ಲಿ ಈ ರೀತಿ ವಿಚಿತ್ರವಾಗಿ ವಿಕೆಟ್​ ಒಪ್ಪಿಸಿದ್ದು, ಇದೇ ಮೊದಲೇನಲ್ಲ. 2008ರಲ್ಲಿ ಮುಸವೀರ್ ಖೋಟೆ ಹಾಗೂ ಮಿಸ್ಬಾ ಉಲ್​ ಹಕ್​, 2009ರಲ್ಲಿ ಸ್ವಪ್ನಿಲ್ ಆಸ್ನೋಡಕರ್​, 2012ರಲ್ಲಿ ರವೀಂದ್ರ ಜಡೇಜಾ, 2012ರಲ್ಲಿ ಸೌರಭ್ ತಿವಾರಿ, 2016ರಲ್ಲಿ ಡೇವಿಡ್ ವಾರ್ನರ್​, ದೀಪಕ್ ಹೂಡಾ ಹಾಗೂ ಯುವರಾಜ್​ ಸಿಂಗ್​, 2017ರಲ್ಲಿ ಜಾಕ್ಸನ್​ , 2019ರಲ್ಲಿ ರಿಯಾನ್ ಪರಾಗ್​ ಹಿಟ್​ ವಿಕೆಟ್​ ಮೂಲಕ ಔಟಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.