ETV Bharat / sports

ಅಬ್ಬರಿಸಿದ ಗೇಲ್​, ರಾಹುಲ್ ​: ಆರ್​ಸಿಬಿ ವಿರುದ್ಧ 8 ವಿಕೆಟ್​ಗಳ ರೋಚಕ ಜಯ ಸಾಧಿಸಿದ ಪಂಜಾಬ್

ಆರ್​ಸಿಬಿ ನೀಡಿದ 172 ರನ್​ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡ ಕೊನೆಯ ಎಸೆತದಲ್ಲಿ ನಿಕೋಲಸ್​ ಪೂರನ್ ಸಿಡಿಸಿದ ಸಿಕ್ಸರ್​ ನೆರವಿನಿಂದ 8 ವಿಕೆಟ್​ಗಳ ರೋಚಕ ಜಯ ಸಾಧಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ.

author img

By

Published : Oct 15, 2020, 11:16 PM IST

Updated : Oct 16, 2020, 6:05 AM IST

Kings eleven Punjab beat RCB  by 8 wickets

ಶಾರ್ಜಾ: ಬ್ಯಾಟಿಂಗ್ ಸ್ನೇಹಿ ಪಿಚ್​ನಲ್ಲಿ ಅಬ್ಬರಿಸಿದ ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡದ ನಾಯಕ ರಾಹುಲ್ ಹಾಗೂ ಯುನಿವರ್ಸಲ್ ಬಾಸ್​ ಕ್ರಿಸ್​ ಗೇಲ್ ಅವರ ಅರ್ಧಶತಕದ ಹೊರೆತಾಗಿಯೂ ಕೊನೆಯ ಎಸೆತದಲ್ಲಿ ಜಯ ಸಾಧಿಸುವ ಮೂಲಕ ಸೋಲಿನ ಸರಪಳಿಯನ್ನು ಕಳಚಿದೆ.

ಆರ್​ಸಿಬಿ ನೀಡಿದ 172 ರನ್​ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡ ಕೊನೆಯ ಎಸೆತದಲ್ಲಿ ನಿಕೋಲಸ್​ ಪೂರನ್ ಸಿಡಿಸಿದ ಸಿಕ್ಸರ್​ ನೆರವಿನಿಂದ 8 ವಿಕೆಟ್​ಗಳ ರೋಚಕ ಜಯ ಸಾಧಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ.

ಆರಂಭಿಕರಾಗಿ ಕಣಕ್ಕಿಳಿದ ಕರ್ನಾಟಕ ಜೋಡಿಯಾದ ಮಯಾಂಕ್ ಮತ್ತು ರಾಹುಲ್ ಮೊದಲ ವಿಕೆಟ್​ಗೆ 78 ರನ್​ಗಳ ಜೊತೆಯಾಟ ನೀಡಿದರು. ಮಯಾಂಕ್​ 25 ಎಸೆತಗಳಲ್ಲಿ 4 ಬೌಂಡಿ ಹಾಗೂ 3 ಸಿಕ್ಸರ್​ ಸಹಿತ 45 ರನ್​ಗಳಿಸಿ ಚಹಾಲ್​ ಓವರ್​ನಲ್ಲಿ ಬೌಲ್ಡ್​ ಆದರು.

13ನೇ ಆವೃತ್ತಿಯ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಅವಕಾಶ ಪಡೆದ ಕ್ರಿಸ್ ಗೇಲ್ 8 ವರ್ಷದ ಬಳಿಕ ಆರಂಭಿಕ ಸ್ಥಾನದ ಬದಲಾಗಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಆಕರ್ಷಕ ಅರ್ಧಶತಕ ಬಾರಿಸಿದರು. ಯುನಿವರ್ಸಲ್ ಬಾಸ್​ 2ನೇ ವಿಕೆಟ್​ 93 ರನ್​ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಗಡಿಗೆ ತಂದು ನಿಲ್ಲಿಸಿ ಕೊನೆಯ ಓವರ್​ನಲ್ಲಿ ರನ್​ಔಟಾದರು.

ಔಟಾಗುವ ಮುನ್ನ ಅವರು 45 ಎಸೆತಗಳಲ್ಲಿ 5 ಸಿಕ್ಸರ್​ ಹಾಗೂ 1 ಬೌಂಡರಿ ಸಹಿತ 63 ರನ್​ಗಳಿಸಿದರೆ, ರಾಹುಲ್ 49 ಎಸೆತಗಳಲ್ಲಿ 1 ಬೌಂಡರಿ ಹಾಗೂ5 ಸಿಕ್ಸರ್​ಗಳ ನೆರವಿನಿಂದ ರನ್, ಗೇಲ್​ 1 ಬೌಂಡರಿ ಹಾಗೂ 5 ಸಿಕ್ಸರ್​ಗಳ ಸಹಿತ ಔಟಾಗದೆ 61 ರನ್​​ಗಳಿಸಿ ಗೆಲುವಿನ ರೂವಾರಿಗಯಾದರು.

ಕೊನೆಯ ಓವರ್​ ಡ್ರಾಮ

ಚಹಾಲ್ ಎಸೆದ ಕೊನೆಯ ಓವರ್​ನಲ್ಲಿ ಪಂಜಾಬ್ ತಂಡಕ್ಕೆ ಗೆಲ್ಲಲು 2 ರನ್​ಗಳ ಅಗತ್ಯವಿತ್ತು. ಮೊದಲ ಮೂರು ಎಸೆತಗಳನ್ನಾಡಿದ ಗೇಲ್ ಒಂದು ರನ್​ಗಳಿಸಿದರೆ. 4 ಎಸೆತವನ್ನು ರಾಹುಲ್ ಡಾಟ್ ಮಾಡಿದರು. 5ನೇ ಎಸೆತದಲ್ಲಿ ಸಿಂಗಲ್ ತೆಗೆಯುವ ಬರದಲ್ಲಿ ಗೇಲ್​ ಔಟಾದರು. ಆದರೆ ಕೊನೆಯ ಎಸೆತವನ್ನು ಸಿಕ್ಸರ್​ಗಟ್ಟುವ ಮೂಲಕ ಪೂರನ್​ ಪಂಜಾಬ್​ಗೆ ಗೆಲುವು ತಂದುಕೊಟ್ಟರು.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ್ದ ಆರ್​ಸಿಬಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡಲು ಹೋಗಿ ಕೈಸುಟ್ಟುಕೊಂಡಿತು. ಎಬಿಡಿ ಬ್ಯಾಟಿಂಗ್ ಕ್ರಮಾಂಕದ ಬದಲಾದ ಕಾರಣ ಅವರ ಆಟ 2 ರನ್​ಗಳಿಗೆ ಮುಕ್ತಾಯಿತು. ನಾಯಕ ಕೊಹ್ಲಿ 48 , ಶಿವಂ ದುಬೆ 23 ಹಾಗೂ ಕ್ರಿಸ್ ಮೋರಿಸ್​ 25 ರನ್​ಗಳಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.

ಪಂಜಾಬ್ ಪರ ಮುರುಗನ್ ಅಶ್ವಿನ್ 2, ಶಮಿ 2, ಜೋರ್ಡನ್ ಹಾಗೂ ಅರ್ಶ್​ದೀಪ್ ಸಿಂಗ್ ತಲಾ ಇಂದು ವಿಕೆಟ್ ಪಡೆದು ಮಿಂಚಿದರು.

Last Updated : Oct 16, 2020, 6:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.