ಪೋರ್ಟ್ ಆಫ್ ಸ್ಪೇನ್: ಭಾರತ ಪ್ರವಾಸದಲ್ಲಿ ತವರಿನಲ್ಲೇ ಎಲ್ಲ ಮಾದರಿಯ ಕ್ರಿಕೆಟ್ನಲ್ಲೂ ಸರಣಿ ಸೋಲು ಅನುಭವಿಸಿದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ನನ್ನು ಎರಡು ಮಾದರಿ ಕ್ರಿಕೆಟ್ನಿಂದ ಕೆಳಗಿಳಿಸಿ ಕೀರನ್ ಪೊಲಾರ್ಡ್ರನ್ನು ನಾಯಕನನ್ನಾಗಿ ಘೋಷಿಸಿದೆ. ಜೇಸನ್ ಹೋಲ್ಡರ್ ಟೆಸ್ಟ್ನಲ್ಲಿ ನಾಯಕನಾಗಿ ಮುಂದುವರೆಯಲಿದ್ದಾರೆ.
ವಿಶೇಷವೆಂದರೆ ಪೊಲಾರ್ಡ್ ಏಕದಿನ ಪಂದ್ಯವನ್ನಾಡಿ ಸುಮಾರು ಮೂರು ವರ್ಷಗಳೇ ಕಳೆದಿವೆ. ಸದ್ಯ ಇದೇ ಆಟಗಾರನಿಗೆ ಏಕದಿನ ಹಾಗೂ ಟಿ20 ನಾಯಕತ್ವನನ್ನಾಗಿ ಹೆಸರಿಸಿದೆ. ಪೊಲಾರ್ಡ್ 2016 ಅಕ್ಟೋಬರ್ 5ರಂದು ಪಾಕ್ ವಿರುದ್ಧ ಕೊನೆಯದಾಗಿ ಏಕದಿನ ಪಂದ್ಯವನ್ನಾಡಿದ್ದರು. ಫಾರ್ಮ್ ಸಮಸ್ಯೆಯಿಂದ ಏಕದಿನ ತಂಡದ ಸ್ಥಾನ ಕಳೆದುಕೊಂಡಿದ್ದರು.
-
BREAKING NEWS - CWI President Ricky Skerritt announces the official appointment of Kieron Pollard as West Indies White Ball captain. #CWIPressConference pic.twitter.com/YicpwakDKE
— Windies Cricket (@windiescricket) September 9, 2019 " class="align-text-top noRightClick twitterSection" data="
">BREAKING NEWS - CWI President Ricky Skerritt announces the official appointment of Kieron Pollard as West Indies White Ball captain. #CWIPressConference pic.twitter.com/YicpwakDKE
— Windies Cricket (@windiescricket) September 9, 2019BREAKING NEWS - CWI President Ricky Skerritt announces the official appointment of Kieron Pollard as West Indies White Ball captain. #CWIPressConference pic.twitter.com/YicpwakDKE
— Windies Cricket (@windiescricket) September 9, 2019
ಸೆಪ್ಟಂಬರ್ 7 ಹಾಗೂ 8 ರಂದು ವೆಸ್ಟ್ ಇಂಡೀಸ್ ಕ್ರಿಕಟ್ ಮಂಡಳಿಯ ಸಭೆಯಲ್ಲಿ ಪೊಲಾರ್ಡ್ಗೆ ನಾಯಕನ ಪಟ್ಟ ನೀಡಲಾಗಿದೆ. ಈ ವಿಚಾರವನ್ನು ಮಂಡಳಿ ಅಧ್ಯಕ್ಷ ರಿಕ್ಕಿ ಸ್ಕೆರಿಟ್ ಅಧಿಕೃತವಾಗಿ ಘೋಷಿಸಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧ ನವೆಂಬರ್ 5 ರಿಂದ ಆರಂಭವಾಗಲಿರುವ ಟಿ20 ಹಾಗೂ ಏಕದಿನ ಸರಣಿ ಪೊಲಾರ್ಡ್ ನಾಯಕತ್ವಕ್ಕೆ ಮೊದಲ ಪರೀಕ್ಷೆಯಾಗಲಿದೆ. ಈ ಸರಣಿ ಭಾರತದಲ್ಲಿ ನಡೆಯಲಿದೆ. ಇದಾದ ವಾರದ ಬಳಿಕ ಭಾರತದ ವಿರುದ್ಧ ವಿಂಡೀಸ್ ತಂಡ ಆಡಲಿದೆ.