ಲಂಡನ್: ಸೆಮಿಫೈನಲ್ ಪ್ರವೇಶಿಸಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಗಾಯದ ಹೊಡೆತ ಮುಂದುವರೆದಿದ್ದು, ಬ್ಯಾಟ್ಸ್ಮನ್ ಖವಾಜ ಹಾಗೂ ಆಲ್ರೌಂಡರ್ ಸ್ಟೋಯ್ನೀಸ್ ಆಸೀಸ್ ತಂಡದಿಂದ ಹೊರಬಿದ್ದಿದ್ದಾರೆ.
ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದರು. ಸ್ಟೋಯ್ನೀಸ್ ಕೂಡ ಫೀಲ್ಡಿಂಗ್ ನಡೆಸುವ ವೇಳೆ ಗಾಯಗೊಂಡಿದ್ದರು. ಹೀಗಾಗಿ ಸ್ಟೋಯ್ನಿಸ್ ಕೇವಲ 3 ಓವರ್ ಮಾತ್ರ ಎಸೆದಿದ್ದರು. ಖಾವಾಜ ಕೂಡ 6 ರನ್ ಗಳಿಸಿದ್ದ ವೇಳೆ ಗಾಯಗೊಂಡು ನಿವೃತ್ತಿ ತೆಗೆದುಕೊಂಡಿದ್ದರು.
-
JUST IN: Australia bring in Matthew Wade and Mitchell Marsh in their #CWC19 squad as cover for Usman Khawaja and Marcus Stoinis, but no official replacement has been made yet. pic.twitter.com/dPrpeF0LDi
— Cricket World Cup (@cricketworldcup) July 7, 2019 " class="align-text-top noRightClick twitterSection" data="
">JUST IN: Australia bring in Matthew Wade and Mitchell Marsh in their #CWC19 squad as cover for Usman Khawaja and Marcus Stoinis, but no official replacement has been made yet. pic.twitter.com/dPrpeF0LDi
— Cricket World Cup (@cricketworldcup) July 7, 2019JUST IN: Australia bring in Matthew Wade and Mitchell Marsh in their #CWC19 squad as cover for Usman Khawaja and Marcus Stoinis, but no official replacement has been made yet. pic.twitter.com/dPrpeF0LDi
— Cricket World Cup (@cricketworldcup) July 7, 2019
ಖವಾಜ ಬದಲಿಗೆ ಮ್ಯಾಥ್ಯೂ ವೇಡ್ ಹಾಗೂ ಸ್ಟೋಯ್ನೀಸ್ ಬದಲಿಗೆ ಮಿಚೆಲ್ ಮಾರ್ಶ್ ತಂಡ ಸೇರಿಕೊಳ್ಳಲಿದ್ದಾರೆಂಬ ಮಾಹಿತಿ ಲಭ್ಯವಿದೆ. ಆದರೆ ಆಸೀಸ್ ಕ್ರಿಕೆಟ್ ಮಂಡಳಿಯಿಂದ ಇವರಿಬ್ಬರ ಆಯ್ಕೆ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಂದಿಲ್ಲ.
ಆಸ್ಟ್ರೇಲಿಯಾ ಎ ಪರ ಇಂಗ್ಲೆಂಡ್ನ ಕೌಂಟಿ ತಂಡಗಳ ವಿರುದ್ಧ ಏಕದಿನ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಮ್ಯಾಥ್ಯೂ ವೇಡ್, ತಾನು ಆಡಿರುವ 4 ಪಂದ್ಯಗಳಲ್ಲಿ 2 ಶತಕ ಹಾಗೂ ಮತ್ತೆರಡು ಪಂದ್ಯಗಳಲ್ಲಿ 40+ ರನ್ ಬಾರಿಸಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಇನ್ನು ಮಿಚೆಲ್ ಮಾರ್ಶ್ ಕೂಡ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ್ದಾರೆ. ಇವರಿಬ್ಬರ ಎಂಟ್ರಿಯಿಂದ ಆಸೀಸ್ ತಂಡ ಮತ್ತಷ್ಟು ಬಲಿಷ್ಠವಾಗಲಿದೆ.