ETV Bharat / sports

ಸತತ 15 ಪಂದ್ಯಗಳ ಗೆಲುವಿನ ನಂತರ ಟಿ-20 ಪಂದ್ಯದಲ್ಲಿ ಸೋಲುಕಂಡ ಕರ್ನಾಟಕ ತಂಡ

ಸತತ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಕರ್ನಾಟಕ ತಂಡ ಬರೋಡಾ ವಿರುದ್ಧ 14ರನ್​ಗಳಿಂದ ಸೋಲುಕಂಡು ತನ್ನ ದಾಖಲೆಯ ಜಯದ ಓಟಕ್ಕೆ ತೆರ ಎಳೆದುಕೊಂಡಿದೆ.

Syed Mushtaq Ali Trophy
author img

By

Published : Nov 9, 2019, 2:34 PM IST

ವಿಶಾಖಪಟ್ಟಣ: ಕಳೆದ ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿ ಕಳೆದ ಸೀಸನ್​ನಿಂದ ಸತತ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದ ಕರ್ನಾಟಕ ತಂಡ ತನ್ನ 16 ನೇ ಪಂದ್ಯದಲ್ಲಿ ಸೋಲುಕಾಣುವ ಮೂಲಕ ಗೆಲುವಿನ ಸರಪಳಿಯನ್ನು ಕಳಚಿದೆ.

ಇಂದು ವಿಶಾಖಪಟ್ಟಣದಲ್ಲಿ ಬರೋಡಾ ವಿರುದ್ಧ 14 ರನ್​ಗಳ ಸೋಲು ಕಾಣುವ ಮೂಲಕ ಕರ್ನಾಟಕ ತನ್ನ ದಾಖಲೆಯ ಜಯದ ಓಟವನ್ನು ನಿಲ್ಲಿಸಿತು. ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಬರೋಡಾ 4 ವಿಕೆಟ್ ಕಳೆದುಕೊಂಡು196 ರನ್​ಗಳಿಸಿತು. ನಾಯಕ ಕೇದಾರ್​ ದೇವದರ್​ 52, ಆದಿತ್ಯ ವಾಗ್ಮೋಡೆ 32, ಸ್ವಪ್ನಿಲ್​ ಸಿಂಗ್ 36, ವಿಷ್ಣು ಸೋಲಂಕಿ 35 ರನ್​ಗಳಿಸಿ ಬೃಹತ್​ ಮೊತ್ತಕ್ಕೆ ಕಾರಣರಾದರು.

197 ರನ್​ಗಳ ಟಾರ್ಗೆಟ್​ ಪಡೆದ ಕರ್ನಾಟಕ ತಂಡ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ವೈಫಲ್ಯದಿಂದ ಗೆಲುವಿನ ಸನಿಹ ಬಂದರೂ ಗುರಿಮುಟ್ಟಲಾಗದೇ 14 ರನ್​ಗಳಿಂದ ಸೋಲೊಪ್ಪಿಕೊಂಡಿತು.

ರೋಹನ್​ ಕಂಡಮ್​ 57, ಲುವನಿತ್​ ಸಿಸೋಡಿಯಾ 38 ಹಾಗೂ ನಾಯಕ ಕರುಣ್​ ನಾಯರ್​ 47 ಹಾಗೂ ಶ್ರೇಯಸ್​ ಗೋಪಾಲ್​ 20ರನ್​ಗಳಿಸಿ ಗೆಲುವಿಗಾಗಿ ನಡೆಸಿದ ಪ್ರಯತ್ನ ವಿಫಲವಾಯಿತು.

ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯದಲ್ಲಿ ನವೆಂಬರ್​ 11 ರಂದು ಆಂಧ್ರಪ್ರದೇಶದ ವಿರುದ್ಧ ಆಡಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.