ETV Bharat / sports

ಕೆ.ಎಲ್.ರಾಹುಲ್​ರನ್ನು ಟೆಸ್ಟ್​ ತಂಡಕ್ಕೆ ಆಯ್ಕೆ ಮಾಡದಿರುವುದು ಮೂರ್ಖತನ: ಕಪಿಲ್​ ದೇವ್​ ಕಿಡಿ

author img

By

Published : Feb 25, 2020, 7:49 PM IST

ನಾವು ಕ್ರಿಕೆಟ್​ ಆಡುತ್ತಿದ್ದ ಸಮಯಕ್ಕೂ ಈ ಸಮಯಕ್ಕೂ ಬಹಳ ವ್ಯತ್ಯಾಸ ಕಂಡುಬರುತ್ತಿದೆ. ಒಂದು ತಂಡವನ್ನು ಕಟ್ಟಿದಾಗ ಆಟಗಾರರಿಗೆ ಆತ್ಮವಿಶ್ವಾಸ ತುಂಬಬೇಕು. ಆದರೆ ಪದೇ ಪದೆ ತಂಡದಲ್ಲಿ ಬದಲಾವಣೆ, ಪ್ರತಿ ಪಂದ್ಯಕ್ಕೂ ಹೊಸ ತಂಡ ಕಟ್ಟುವುದು, ತಂಡದಲ್ಲಿ ಕ್ರಮಾಂಕಗಳ ಬದಲಾವಣೆ ಮಾಡುವುದು ಮೂರ್ಖತನದ ಪರಮಾವಧಿ ಎಂದು ಕಪಿಲ್​ ದೇವ್​ ಹೇಳಿದ್ದಾರೆ.

Kapil Dev- KL Rahul
ಕಪಿಲ್​ ದೇವ್​- ಕೆಎಲ್​ ರಾಹುಲ್​

ಮುಂಬೈ: ನ್ಯೂಜಿಲ್ಯಾಂಡ್​ ವಿರುದ್ಧ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ನಂತರವೂ ಕೆ.ಎಲ್.ರಾಹುಲ್​ರನ್ನು ಟೆಸ್ಟ್​ ತಂಡದಿಂದ ಕೈಬಿಟ್ಟಿರುವುದಕ್ಕೆ ಭಾರತದ ತಂಡದ ಮಾಜಿ ನಾಯಕ ಕಪಿಲ್​ ದೇವ್​ ಆಯ್ಕೆ ಸಮಿತಿಯ ನಡೆಯನ್ನು ಮೂರ್ಖತನ ಎಂದು ಕಿಡಿಕಾರಿದ್ದಾರೆ.

"ನನಗಂತೂ ಅರ್ಥವಾಗುತ್ತಿಲ್ಲ. ನಾವು ಕ್ರಿಕೆಟ್​ ಆಡುತ್ತಿದ್ದ ಸಮಯಕ್ಕೂ ಇಂದಿನ ಸಮಯಕ್ಕೂ ಬಹಳ ವ್ಯತ್ಯಾಸ ಕಂಡುಬರುತ್ತಿದೆ. ಒಂದು ತಂಡವನ್ನು ಕಟ್ಟಿದಾಗ ಆಟಗಾರರಿಗೆ ಆತ್ಮವಿಶ್ವಾಸ ತುಂಬಬೇಕು. ಆದರೆ ಪದೇ ಪದೆ ತಂಡದಲ್ಲಿ ಬದಲಾವಣೆ, ಪ್ರತಿ ಪಂದ್ಯಕ್ಕೂ ಹೊಸ ತಂಡ ಕಟ್ಟುವುದು, ತಂಡದಲ್ಲಿ ಕ್ರಮಾಂಕಗಳ ಬದಲಾವಣೆ ಮಾಡುವುದು ಮೂರ್ಖತನದ ಪರಮಾವಧಿ" ಎಂದು ಕಪಿಲ್​ದೇವ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ರಾಹುಲ್​ ಕುರಿತು ಮಾತನಾಡಿರುವ ಅವರು, ತಂಡದ ಆಡಳಿತ ಮಂಡಳಿ ಕೇವಲ ಫಾರ್ಮೇಟ್​ಗಳಲ್ಲಿ ಆಡುವ ಆಟಗಾರರನ್ನು ನಂಬಿದೆ. ಆದರೆ ಫಾರ್ಮ್​ನಲ್ಲಿರುವ ಆಟಗಾರರ ಮೇಲೆ ನಂಬಿಕೆ ಇಡಬೇಕು. ರಾಹುಲ್​ ಪ್ರಸ್ತುತ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆದರೆ ತಂಡದಿಂದ ಹೊರಗುಳಿದಿದ್ದಾರೆ. ಇದು ಜ್ಞಾನವಿಲ್ಲದವರು ಮಾಡುವ ಕೆಲಸ. ಒಬ್ಬ ಆಟಗಾರ ಉತ್ತಮ ಫಾರ್ಮ್​ನಲ್ಲಿದ್ದಾನೆಂದರೆ ಆತನಿಗೆ ಆಡುವ ಅವಕಾಶ ನೀಡಬೇಕು ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಕಪಿಲ್​ ದೇವ್​ ಹೇಳಿದ್ದಾರೆ.

ಕೊಹ್ಲಿ, ಪೂಜಾರ, ರಹಾನೆಯಂತಹ ಆಟಗಾರರಿದ್ದರೂ 200ರೊಳಗೆ ಆಲೌಟ್ ಆಗಿದ್ದನ್ನು ಕಪಿಲ್​ ದೇವ್​ ಪ್ರಶ್ನಿಸಿದ್ದಾರೆ.

"ತಂಡದಲ್ಲಿ ದೊಡ್ಡ ಹೆಸರು ಮಾಡಿರುವ ಕನಿಷ್ಠ ಒಂದು ಇನ್ನಿಂಗ್ಸ್​ನಲ್ಲಿ 200 ರನ್​ ಗಳಿಸಲು ಆಗಲಿಲ್ಲವೆಂದರೆ ನೀವು ಅಲ್ಲಿನ ಸ್ಥಿತಿಗತಿಗಳನ್ನು ಅರಿತಿಲ್ಲ ಎಂದರ್ಥ. ನೀವು ಪಂದ್ಯ ಗೆಲ್ಲಬೇಕೆಂದರೆ ಆಟದ ಬಗ್ಗೆ ಹೆಚ್ಚಿನ ಗಮನ ಹಾಗೂ ಪೂರ್ವ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ" ಎಂದು ದೇವ್​ ಭಾರತ ತಂಡಕ್ಕೆ ಕಿವಿಮಾತು ಹೇಳಿದ್ದಾರೆ.

ಇನ್ನು ಏಕದಿನ ಸರಣಿ ಹಾಗೂ ಮೊದಲ ಟೆಸ್ಟ್​ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಕಿವೀಸ್​ ತಂಡವನ್ನು ಕಪಿಲ್​ ದೇವ್​ ಮೆಚ್ಚಿ ಮಾತನಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.