ETV Bharat / sports

1980ರ ದಶಕದ ಅತ್ಯುತ್ತಮ ಆಲ್​ರೌಂಡರ್​ ಹೆಸರಿಸಿದ ಕಪಿಲ್​ ದೇವ್​

ಕ್ರಿಕೆಟ್​ ಜಗತ್ತಿನಲ್ಲಿ ಅತ್ಯುತ್ತಮ ಆಲ್​ರೌಂಡರ್​ಗಳಲ್ಲಿ ಒಬ್ಬರಾಗಿರುವ ಕಪಿಲ್​ದೇವ್​ ಭಾರತದ ಮಹಿಳಾ ತಂಡದ ಕೋಚ್​ ಡಬ್ಲ್ಯೂ ಸಿ ರಾಮನ್​ ನಡೆಸಿದ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದರು.

80 ರ ದಶಕದ ಬೆಸ್ಟ್ ಆಲ್​ರೌಂಡರ್​
80 ರ ದಶಕದ ಬೆಸ್ಟ್ ಆಲ್​ರೌಂಡರ್​
author img

By

Published : Aug 1, 2020, 4:09 PM IST

Updated : Aug 1, 2020, 4:26 PM IST

ಹೈದರಾಬಾದ್​​: ಭಾರತ ತಂಡದ ಮಾಜಿ ನಾಯಕ ಕಪಿಲ್​ ದೇವ್​ 80ರ ದಶಕದಲ್ಲಿ ಇಂಗ್ಲೆಂಡ್​ನ ಇಯಾನ್​ ಬಾಥಮ್​​​ ಅತ್ಯುತ್ತಮ ಆಲ್​ರೌಂಡರ್​ ಆಗಿದ್ದರು ಎಂದು ತಿಳಿಸಿದ್ದಾರೆ.

ಕಪಿಲ್​ ದೇವ್​
ಕಪಿಲ್​ ದೇವ್​

ಪಾಕಿಸ್ತಾನದ ಇಮ್ರಾನ್​ ಖಾನ್​, ಇಂಗ್ಲೆಂಡ್​ನ ಇಯಾನ್​ ಬಾಥಮ್, ಕಿವೀಸ್​ನ ರಿಚರ್ಡ್​ ಆ್ಯಡ್ಲಿ ಹಾಗೂ ನಿಮ್ಮನ್ನೂ ಸೇರಿದಂತೆ ನಾಲ್ವರಲ್ಲಿ ಅತ್ಯುತ್ತಮ ಆಲ್​ರೌಂಡರ್​ ಯಾರು? ಎಂಬ ಪ್ರಶ್ನೆಗೆ ಈ ಉತ್ತರ ನೀಡಿದರು.

ಇಯಾನ್​ ಬಾಥಮ್​
ಇಯಾನ್​ ಬಾಥಮ್​ ಸಾಧನೆ

ಇಯಾನ್​ ಬಾಥಮ್​ ನಿಜವಾದ ಆಲ್​ರೌಂಡರ್​. ಅವರು ಯಾವುದೇ ಪರಿಸ್ಥಿತಿಯಲ್ಲಾದರೂ ತಮ್ಮ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದರು. ಬಾಥಮ್​ ಎದುರಾಳಿ ಪಡೆಯನ್ನು ಬ್ಯಾಟಿಂಗ್ ಹಾಗೂ ಬೌಲಿಂಗ್ ದಾಳಿಯನ್ನು​ ಪುಡಿಗಟ್ಟುವ ಸಾಮರ್ಥ್ಯ ಹೊಂದಿದ್ದರು. ಆದರೆ ನಾನು, ಹ್ಯಾಡ್ಲಿಯನ್ನು ಉತ್ತಮ ಬ್ಯಾಟ್ಸ್​ಮನ್​ ಎಂದು ಹೇಳುವುದಿಲ್ಲ. ಆದರೆ ಆತ ನಾಲ್ವರಿಗಿಂತ ಅತ್ಯತ್ತಮ ಬೌಲರ್​ ಆಗಿದ್ದರು ಎಂದರು.

ರಿಚರ್ಡ್​ ಹ್ಯಾಡ್ಲಿ
ರಿಚರ್ಡ್​ ಹ್ಯಾಡ್ಲಿ

ಪಾಕಿಸ್ತಾನದ ಇಮ್ರಾನ್​​ ಖಾನ್​ರನ್ನು ಅತ್ಯುತ್ತಮ ಅಥ್ಲೀಟ್​ ಎಂದು ನಾನು ಹೇಳುವುದಿಲ್ಲ. ಆದರೆ ಆತ ಕಠಿಣ ಪರಿಶ್ರಮಿಯಾಗಿದ್ದರು. ಪಾಕಿಸ್ತಾನದಂತಹ ತಂಡವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದರು. ಅವರು ಮೊದಲು ಸಾಮಾನ್ಯ ಬೌಲರ್​ ಆಗಿದ್ದರು. ಆದರೆ ಕಠಿಣ ಪರಿಶ್ರಮ ಹಾಗೂ ಸ್ವಪ್ರಯತ್ನದಿಂದ ಒಬ್ಬ ವೇಗದ ಬೌಲರ್​ ಆಗಿ ಬದಲಾದರು. ಅವರ ಬ್ಯಾಟಿಂಗ್​ನಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದರು ಎಂದು ವಿವರಿಸಿದರು.

ಇಮ್ರಾನ್​ ಖಾನ್​
ಇಮ್ರಾನ್​ ಖಾನ್​

ತಮ್ಮ ಕುರಿತಾಗಿ ಕೇಳಿದ್ದಕ್ಕೆ, ನಾನು ಶ್ರೇಷ್ಠ ಎಂದು ಹೇಳುವುದಿಲ್ಲ. ನನ್ನನ್ನು ನಾನು ಉತ್ತಮ ಅಥ್ಲೀಟ್​ ಎಂದು ಪರಿಗಣಿಸಿದ್ದೇನೆ. ಆದರೆ ಮೂವರನ್ನು ಒಟ್ಟು ಗೂಡಿಸಿದರೆ ನಾನು ಉತ್ತಮ ಕ್ರೀಡಾಪಟುವಾಗಿದ್ದೆ ಎಂದು ಅವರು ಹೇಳಿದ್ದಾರೆ.

Last Updated : Aug 1, 2020, 4:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.