ETV Bharat / sports

ಕ್ರಿಕೆಟ್​ ಜಗತ್ತಿನಲ್ಲಿ ಭಾರತವನ್ನ ಮೇರು ಶಿಖರಕ್ಕೇರಿಸಿದ ಕಪಿಲ್‌ ಕುರಿತ ಇಂಟ್ರೆಸ್ಟಿಂಗ್‌ ಸಂಗತಿ.. - 1983 ವಿಶ್ವಕಪ್​

ಜನವರಿ 6, 1959ರಂದು ಚಂಡೀಗಢದಲ್ಲಿ ಜನಿಸಿದ ಕಪಿಲ್​ದೇವ್​ ತಮ್ಮ 19ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಭಾರತದ ಪರ 25ನೇ ಕ್ರಿಕೆಟರ್​ ಆಗಿ ತಂಡಕ್ಕೆ ಎಂಟ್ರಿ ಪಡೆದ ಕಪಿಲ್‌, ಪಾಕ್‌ ವಿರುದ್ಧವೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್​ ಆಡಿದ್ದರು.

Kapil dev birthday
Kapil dev birthday
author img

By

Published : Jan 6, 2020, 3:49 PM IST

Updated : Jan 6, 2020, 3:56 PM IST

ಮುಂಬೈ: ಭಾರತದಲ್ಲಿ ಇಂದು ಕ್ರಿಕೆಟ್ ಇಷ್ಟೊಂದು ಗಟ್ಟಿ ನೆಲೆಯೂರಲು ಅಡಿಪಾಯ ಹಾಕಿದ, ಭಾರತಕ್ಕೆ ಚೊಚ್ಚಲ ವಿಶ್ವಕಪ್​ ತಂದುಕೊಟ್ಟ ಮಹಾನ್​ ಕ್ರಿಕೆಟರ್​ ಕಪಿಲ್​ ದೇವ್​​ ಇಂದು 61ನೇ ವಸಂತಕ್ಕೆ ಕಾಲಿರಿಸಿದ್ದಾರೆ.

ಜನವರಿ 6,1959ರಂದು ಚಂಡೀಗಢದಲ್ಲಿ ಜನಿಸಿದ ಕಪಿಲ್​ದೇವ್​ ತಮ್ಮ 19ನೇ ವಯಸ್ಸಿನಲ್ಲಿ ಭಾರತದ 25ನೇ ಕ್ರಿಕೆಟರ್‌ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಪಾಕಿಸ್ತಾನದ ವಿರುದ್ಧವೇ ಮೊದಲ ಏಕದಿನ ಪಂದ್ಯ ಆಡಿರೋದು ವಿಶೇಷ.

ಭಾರತ ತಂಡದ ನಾಯಕತ್ವ: 1982-83ರ ಪಾಕ್‌ ಪ್ರವಾಸ ಕೈಗೊಂಡಿದ್ದ ಗವಾಸ್ಕರ್​ ನೇತೃತ್ವದ ಭಾರತ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. 6 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ 3 ಪಂದ್ಯ ಸೋತರೆ ಮತ್ತೆ 3 ಪಂದ್ಯಗಳಲ್ಲಿ ಡ್ರಾ ಸಾಧಿಸುವಲ್ಲಿ ಮಾತ್ರ ಸಫಲವಾಗಿತ್ತು. ಈ ಸೋಲಿನಿಂದ ಕೆಲ ಆಟಗಾರರು ಕಪಿಲ್​ ದೇವ್​ರನ್ನು ನಾಯಕನನ್ನಾಗಿ ಮಾಡಲು ಒಲುವು ತೋರಿದರು. ಈ ಸರಣಿಯ ಸೋಲಿನ ಬೆನ್ನಲ್ಲೇ ಭಾರತ ಆಯ್ಕೆ ಸಮಿತಿ 24 ವರ್ಷದ ಕಪಿಲ್​ ದೇವ್​ರನ್ನು ನಾಯಕನನ್ನಾಗಿ ನೇಮಿಸಿ 1983ರ 3ನೇ ವಿಶ್ವಕಪ್​ಗೆ ಕಳುಹಿಸಿತು.

ನಾಯಕತ್ವದ ಯಶಸ್ಸು, ಭಾರತಕ್ಕೆ ಚೊಚ್ಚಲ ವಿಶ್ವಕಪ್:​ ಕೇವಲ 24 ವರ್ಷದ ಕಪಿಲ್​ ದೇವ್​ ಅನುಭವಿಗಳ ಪಡೆ ಮುನ್ನಡೆಸಿದ ರೀತಿ ನಿಜಕ್ಕೂ ಕ್ರಿಕೆಟ್​ ಇತಿಹಾಸದಲ್ಲಿ ಅಚ್ಚಳಿಯದ ಸವಿನೆನೆಪು ಎಂದರೆ ತಪ್ಪಾಗಲ್ಲ.

ವಿಶ್ವಕಪ್​ನಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಬಲಿಷ್ಠ ಹಾಗೂ 2 ಬಾರಿಯ ಚಾಂಪಿಯನ್​ ವೆಸ್ಟ್​ ಇಂಡೀಸ್​ಗೆ 34 ರನ್​ಗಳಿಂದ ಸೋಲುಣಿಸಿತ್ತು. 2ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 5 ವಿಕೆಟ್​ನಿಂದ ಗೆದ್ದರೆ, 3ನೇ ಮ್ಯಾಚ್‌ನಲ್ಲಿ ಆಸೀಸ್‌ ವಿರುದ್ಧ 162 ರನ್, ವೆಸ್ಟ್​ ಇಂಡೀಸ್​ ವಿರುದ್ಧ 66 ರನ್​ಗಳ ಹೀನಾಯ ಸೋಲು ಕಂಡಿತ್ತು.

ಸೆಮಿಫೈನಲ್‌ ಪ್ರವೇಶಿಸಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಕಪಿಲ್​ ಏಕಾಂಗಿ ಹೋರಾಟ ನಡೆಸಿ 175 ರನ್ ​ಗಳಿಸಿ ಭಾರತಕ್ಕೆ 31 ರನ್​ಗಳಿಂದ ಜಯ ತಂದುಕೊಟ್ಟರು. ಆಸ್ಟ್ರೇಲಿಯಾವನ್ನು 118 ರನ್​ಗಳಿಂದ ಮಣಿಸಿದ ಭಾರತ, ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ತಂಡವನ್ನು 6 ವಿಕೆಟ್​ಗಳಿಂದ ಬಗ್ಗು ಬಡಿದು ಫೈನಲ್‌ಗೆ ಲಗ್ಗೆಯಿಟ್ಟಿತ್ತು.

ರೋಚಕ ಫೈನಲ್, ಭಾರತಕ್ಕೆ ವಿಶ್ವಕಪ್:​ ಭಾರತ ತಂಡದ ಸೆಮಿಫೈನಲ್​ ಪ್ರವೇಶಿಸುವುದೇ ಅತ್ಯಂತ ದೊಡ್ಡ ಸಾಧನೆ ಎನ್ನುವಂತಿದ್ದ ಕಾಲದಲ್ಲಿ ಫೈನಲ್​ ಪಂದ್ಯದಲ್ಲಿ ವಿಂಡೀಸ್‌ಗೆ ಶಾಕ್​ ನೀಡಿ ವಿಶ್ವಕಪ್​ ಎತ್ತಿ ಹಿಡಿದಿತ್ತು. ಮೊದಲು ಬ್ಯಾಟಿಂಗ್​ ನಡೆಸಿದ್ದ ಭಾರತ 184 ರನ್​ಗಳ ಟಾರ್ಗೆಟ್​ ನೀಡಿತ್ತು. ಈ ಮೊತ್ತ ಬೆನ್ನೆತ್ತಿದ ವಿಂಡೀಸ್​ ಕೇವಲ 140 ರನ್​ಗಳಿಗೆ ಆಲೌಟ್ ಆಗುವ ಮೂಲಕ 40 ರನ್​ಗಳ ಅಚ್ಚರಿಯ ಸೋಲು ಕಂಡಿತ್ತು.

ಇಲ್ಲಿ ವಿಂಡೀಸ್​ ಸೋಲನುಭವಿಸಿತು ಎನ್ನುವುದಕ್ಕೆ ಬಿಸಿರಕ್ತದ ಯುವಕನ ನಾಯಕತ್ವ ಅಲ್ಲಿ ಕೆಲಸ ಮಾಡಿತ್ತು. ಕೆಚ್ಚೆದೆಯ ಹೋರಾಟ, ಅಗ್ರೇಸಿವ್​ ನಾಯಕತ್ವ, ತಂಡದ ಮೇಲಿನ ವಿಶ್ವಾಸ ಭಾರತಕ್ಕೆ ಚೊಚ್ಚಲ ವಿಶ್ವಕಪ್​ ತಂದುಕೊಟ್ಟಿತ್ತು.

ಭಾರತದ ಶ್ರೇಷ್ಠ ನಾಯಕ :1983ರ ವಿಶ್ವಕಪ್ ಮುಡಿಗೇರಿಕೊಂಡ ನಂತರ 3 ವರ್ಷಗಳ ಕಾಲ ಭಾರತ ತಂಡದ ನಾಯಕರಾಗಿದ್ದ ಕಪಿಲ್​ ದೇವ್​ ಕ್ರಿಕೆಟ್​ ಲೋಕದಲ್ಲಿ ಏಕಚಕ್ರಾಧಿಪತಿಯಾಗಿ ಆಳುತ್ತಿದ್ದ ವೆಸ್ಟ್​ ಇಂಡೀಸ್ ​ಹಾಗೂ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ-ಇಂಗ್ಲೆಂಡ್​ಗೆ ಸರಿಸಮನಾಗಿ ಭಾರತವನ್ನು ತಂದು ನಿಲ್ಲಿಸಿದರು. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ 34 ಟೆಸ್ಟ್​ ಪಂದ್ಯಗಳನ್ನಾಡಿದೆ. ಅದರಲ್ಲಿ 4 ಪಂದ್ಯಗಳನ್ನು ಗೆದ್ದು, 7 ಪಂದ್ಯಗಳಲ್ಲಿ ಸೋಲು ಕಂಡಿತ್ತು.

ಉಳಿದ 23 ಪಂದ್ಯಗಳು ಡ್ರಾಗೊಂಡಿದ್ದವು. ಅವರ ದಾಖಲೆ ನೋಡುವುದಕ್ಕೆ ಅತ್ಯಂತ ಪ್ರಭಾವಶಾಲಿಯಾಗಿ ಕಾಣದಿದ್ದರೂ ಅಂಬೆಗಾಲಿಡುತ್ತಿದ್ದ ಕಾಲದಲ್ಲಿ ಈ ಪ್ರದರ್ಶನ ಬಹು ಪರಿಣಾಮಕಾರಿ ಬೆಳವಣಿಗೆಯಾಗಿತ್ತು. 72 ಏಕದಿನ ಪಂದ್ಯಗಳನ್ನು 39 ಪಂದ್ಯಗಳನ್ನು ಗೆದ್ದು, 33 ಪಂದ್ಯಗಳಲ್ಲಿ ಸೋಲನ್ನು ಕಂಡಿತ್ತು.

ವಿಶ್ವಶ್ರೇಷ್ಠ ಆಲ್​ರೌಂಡರ್: ಕಪಿಲ್​ ದೇವ್​ ಭಾರತ ತಂಡವನ್ನು ಬೆಳೆಸಿದ್ದು ಮಾತ್ರವಲ್ಲದೆ ವೈಯಕ್ತಿಕವಾಗಿಯೂ ಒಬ್ಬ ಅದ್ಭುತ ಆಲ್​ರೌಂಡರ್​ ಆಗಿದ್ದರು. ಇವರು ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ ಬೌಲಿಂಗ್​ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ್ದರು. ಹಾಗಾಗಿ ಅವರು ವಿಶ್ವ ಶ್ರೇಷ್ಠ ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಇನ್ನೂ ಮೊದಲ ಸ್ಥಾನದಲ್ಲೇ ಇದ್ದಾರೆ.

ಕಪಿಲ್​ ದೇವ್​​ ಭಾರತದ ಪರ 131 ಟೆಸ್ಟ್​ ಪಂದ್ಯಗಳನ್ನಾಡಿದ್ದು 5248 ರನ್​ ಹಾಗೂ 434 ವಿಕೆಟ್​, 225 ಏಕದಿನ ಪಂದ್ಯಗಳಿಂದ 3783 ರನ್​ ಹಾಗೂ 253 ವಿಕೆಟ್​ ಪಡೆದಿದ್ದರು. 1994 ರಿಂದ 2000ರವರೆಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಪಡೆದ ದಾಖಲೆ ಕಪಿಲ್​ ದೇವ್​ ಹೆಸರಿಲ್ಲೇ ಇತ್ತು. ವೆಸ್ಟ್ ಇಂಡೀಸ್‌ನ ಕರ್ಟ್ಲಿ ವಾಲ್ಷ್ 2000ರಲ್ಲಿ ಈ ದಾಖಲೆ ಮುರಿದಿದ್ದರು.

ಪ್ರಶಸ್ತಿಗಳು:

1979-80 –ಅರ್ಜುನ ಪ್ರಶಸ್ತಿ
1982- ಪದ್ಮಶ್ರೀ ಪ್ರಶಸ್ತಿ
1983 - ವರ್ಷದ ವಿಸ್ಡನ್​ ಕ್ರಿಕೆಟರ್​
1991- ಪದ್ಮಭೂಷಣ ಪ್ರಶಸ್ತಿ
2002- ವಿಸ್ಡನ್ ವರ್ಷದ​ ಭಾರತದ ಕ್ರಿಕೆಟಿಗ
2010- ಐಸಿಸಿ ಕ್ರಿಕೆಟ್​ನಿಂದ ಹಾಲ್​ ಆಫ್​ ಫೇಮ್​ ಗೌರವ
2013- ಗ್ರೇಟೆಸ್ಟ್ ಗ್ಲೋಬಲ್ ಲಿವಿಂಗ್ ಲೆಜೆಂಡ್ಸ್ ಇನ್ ಇಂಡಿಯಾ
2013- ಸಿ ಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ

Intro:Body:Conclusion:
Last Updated : Jan 6, 2020, 3:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.