ETV Bharat / sports

ಕೊಹ್ಲಿ, ಸ್ಮಿತ್​ ಹಿಂದಿಕ್ಕಿರುವುದು ಸಂತಸ ತಂದಿದೆ: ವಿಲಿಯಮ್ಸನ್ - ಕಿವೀಸ್ ನಾಯಕ ಕೇನ್ ವಿಲಿಯಮ್ಸನ್​

ಟೌರಂಗದಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಕೇನ್ ಇಬ್ಬರು ಅಗ್ರ ಆಟಗಾರರನ್ನು ಹಿಂದಿಕ್ಕಿದ್ದಾರೆ. ವಿಲಿಯಮ್ಸನ್ 2015ರ ಅಂತ್ಯದ ವೇಳೆಗೆ ಅಗ್ರ ಸ್ಥಾನ ಪಡೆದುಕೊಂಡಿದ್ದರು. ಆದರೆ, ಸ್ಮಿತ್ ಅಥವಾ ಕೊಹ್ಲಿ ಇಬ್ಬರೂ ಮೊದಲ ಸ್ಥಾನದಲ್ಲಿರುತ್ತಿದ್ದರು. ಈ ವರ್ಷ ಸ್ಮಿತ್ 313 ದಿನಗಳು ಮತ್ತು ಕೊಹ್ಲಿ 51 ದಿನಗಳವರೆಗೆ ಅಗ್ರಸ್ಥಾನದಲ್ಲಿದ್ದರು.

kane williamson
ಕಿವೀಸ್ ನಾಯಕ ಕೇನ್ ವಿಲಿಯಮ್ಸನ್​
author img

By

Published : Jan 1, 2021, 11:02 AM IST

ಮೌಂಟ್ ಮೌಂಗನುಯಿ : ಐಸಿಸಿ ಪುರುಷರ ಟೆಸ್ಟ್ ಪ್ಲೇಯರ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಟೀವ್​ ಸ್ಮಿತ್​ರನ್ನು ಹಿಂದಿಕ್ಕಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್​ ಅಗ್ರಸ್ಥಾನಕ್ಕೇರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಐಸಿಸಿ ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಭಾರತದ ವಿರಾಟ್ ಕೊಹ್ಲಿ ಹಿಂದಿಕ್ಕುವುದು ಆಹ್ಲಾದಕರವಾಗಿದೆ ಎಂದು ತಿಳಿಸಿದ್ದಾರೆ.

  • 💬 "It's about trying to do as much as you can for the team. If you can contribute as much as you can and it can be reflected on the rankings, that's really cool."

    📽️ WATCH: The new World No.1 in Tests reacts to the latest ICC Rankings update 🙌 pic.twitter.com/qIAZTrPdTS

    — ICC (@ICC) December 31, 2020 " class="align-text-top noRightClick twitterSection" data=" ">

ಐಸಿಸಿ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ. ಅದರಲ್ಲಿ ವಿಲಿಯಮ್ಸನ್, "ಈ ಇಬ್ಬರು ಆಟಗಾರರು (ಕೊಹ್ಲಿ ಮತ್ತು ಸ್ಮಿತ್) ಅತ್ಯುತ್ತಮರು. ಅವರಿಗಿಂತ ಮುಂದೆ ಹೋಗುವುದು ನನಗೆ ಆಶ್ಚರ್ಯಕರ ಮತ್ತು ಸಂತಸ ತಂದಿದೆ. ಈ ಆಟಗಾರರು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದಾರೆ" ಎಂದೂ ಇದೇ ವೇಳೆ ಅವರು ಗುಣಗಾನ ಮಾಡಿದ್ದಾರೆ.

"ನಿಮ್ಮ ತಂಡಕ್ಕಾಗಿ ನೀವು ಎಷ್ಟು ಸಾಧ್ಯವೋ ಅಷ್ಟು ಆಡಲು ಬಯಸುತ್ತೀರಿ. ನಿಮ್ಮ ತಂಡಕ್ಕಾಗಿ ನೀವು ಹೆಚ್ಚಿನದನ್ನು ಮಾಡಲು ಸಾಧ್ಯವಾದರೆ, ಅದರ ಪರಿಣಾಮವನ್ನು ಶ್ರೇಯಾಂಕವಾಗಿ ನೋಡಲಾಗುತ್ತದೆ" ಎಂದು ವಿಲಿಯಮ್ಸನ್ ಹೇಳಿದರು.

ಟೌರಂಗದಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಕೇನ್ ಇಬ್ಬರು ಅಗ್ರ ಆಟಗಾರರನ್ನು ಹಿಂದಿಕ್ಕಿದ್ದಾರೆ. ವಿಲಿಯಮ್ಸನ್ 2015ರ ಅಂತ್ಯದ ವೇಳೆಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ, ಸ್ಮಿತ್ ಅಥವಾ ಕೊಹ್ಲಿ ಇಬ್ಬರೂ ಮೊದಲ ಸ್ಥಾನದಲ್ಲಿರುತ್ತಿದ್ದರು. ಈ ವರ್ಷ ಸ್ಮಿತ್ 313 ದಿನಗಳು ಮತ್ತು ಕೊಹ್ಲಿ 51 ದಿನಗಳವರೆಗೆ ಅಗ್ರಸ್ಥಾನದಲ್ಲಿದ್ದರು.

ಓದಿ : ಐಸಿಸಿ ಟೆಸ್ಟ್​ ಶ್ರೇಯಾಂಕ : ಸ್ಮಿತ್, ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಲಿಯಮ್ಸನ್.. 6ನೇ ಸ್ಥಾನದಲ್ಲಿ ರಹಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.