ETV Bharat / sports

ಪಾಕ್‌ ಬೌಲರ್‌ಗಳ ದಂಡಿಸಿದ ವಿಲಿಯಮ್ಸನ್​: ಮೊದಲ ದಿನ ಕಿವೀಸ್​ ಮೇಲುಗೈ - ಶಾಹೀನ್ ಅಫ್ರಿದಿ

ಎರಡು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಯುವ ಬೌಲರ್​ ಶಹೀನ್ ಅಫ್ರಿದಿ ಆತಿಥೇಯರಿಗೆ ಕೇವಲ 13 ರನ್​ಗಳಾಗುವಷ್ಟರಲ್ಲಿ 2 ವಿಕೆಟ್​ ಪಡೆದು ಆಘಾತ ನೀಡಿದರು. ಆರಂಭಿಕರಾದ ಟಾಮ್ ಲ್ಯಾಥಮ್​ 4 ಹಾಗೂ ಟಾಮ್ ಬ್ಲಂಡೆಲ್​ 5 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು.

ಕೇನ್​ ವಿಲಿಯಮ್ಸನ್​
ಕೇನ್​ ವಿಲಿಯಮ್ಸನ್​
author img

By

Published : Dec 26, 2020, 3:16 PM IST

ಮೌಂಟ್​ ಮಾಂಗನುಯ್​: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಕಿವೀಸ್​ ನಾಯಕ ಕೇನ್​ ವಿಲಿಯಮ್ಸನ್​ ಹಾಗೂ ಅನುಭವಿ ರಾಸ್​ ಟೇಲರ್​ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ತಂಡ ಮೊದಲ 3 ವಿಕೆಟ್​ ಕಳೆದುಕೊಂಡು 223 ರನ್​ಗಳಿಸಿದೆ.

2 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಯುವ ಬೌಲರ್​ ಶಹೀನ್ ಅಫ್ರಿದಿ ಆತಿಥೇಯರಿಗೆ ಕೇವಲ 13 ರನ್​ಗಳಾಗುವಷ್ಟರಲ್ಲಿ 2 ವಿಕೆಟ್​ ಪಡೆದು ಆಘಾತ ನೀಡಿದರು. ಆರಂಭಿಕರಾದ ಟಾಮ್ ಲ್ಯಾಥಮ್​ 4 ಹಾಗೂ ಟಾಮ್ ಬ್ಲಂಡೆಲ್​ 5 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು.

ಆದರೆ ಮೂರನೇ ವಿಕೆಟ್​ಗೆ ಜೊತೆಯಾದ ವಿಲಿಯಮ್ಸನ್ (94*)​ ಮತ್ತು ರಾಸ್ ಟೇಲರ್​ (70) 120 ರನ್​ಗಳ ಜೊತೆಯಾಟ ನೀಡಿದರು. ಟೇಲರ್​ 151 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 70 ರನ್​ಗಳಿಸಿ ಔಟಾದರು.

ಓದಿ: ಬಾಕ್ಸಿಂಗ್‌ ಡೇ ಟೆಸ್ಟ್.. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್‌ಗೆ ಬುಮ್ರಾ, ಅಶ್ವಿನ್ ಪೆಟ್ಟು ; ಟೀಂ ಇಂಡಿಯಾ 36/1

ಕೇನ್​ ವಿಲಿಯಮ್ಸನ್​ 243 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 94 ರನ್​ಗಳಿಸಿದರೆ, ಇವರಿಗೆ ಸಾಥ್‌​ ನೀಡಿದ ಹೆನ್ರಿ ನಿಕೋಲ್ಸ್​ 100 ಎಸೆತಗಳಲ್ಲಿ 4 ಬೌಂಡರಿ ಸಹಿತ 42 ರನ್​ಗಳಿಸಿದರು. ಇವರಿಬ್ಬರೂ 4ನೇ ವಿಕೆಟ್​ಗೆ ಮುರಿಯದ 89 ರನ್​ಗಳ ಜೊತೆಯಾಟ ನಡೆಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಪಾಕಿಸ್ತಾನ ಪರ ಶಹೀನ್ ಅಫ್ರಿದಿ 55 ರನ್​ ನೀಡಿ 3 ವಿಕೆಟ್​ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.