ETV Bharat / sports

ವಿಂಡೀಸ್​ ವಿರುದ್ಧ ಹ್ಯಾಟ್ರಿಕ್​ ಪಡೆದು ಸಂಭ್ರಮಿಸಿದ ಕನ್ನಡಿಗ ಗೌತಮ್​! - ಗೌತಮ್​ ಹ್ಯಾಟ್ರಿಕ್​

ಕಳೆದ ಪಂದ್ಯದಲ್ಲಿ 6 ವಿಕೆಟ್​ ಪಡೆದು ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದ ಕೆ ಗೌತಮ್​ ಮೂರನೇ ಪಂದ್ಯದಲ್ಲಿ ಹ್ಯಾಟ್ರಿಕ್​ ವಿಕೆಟ್​ ಸಹಿತ 6 ವಿಕೆಟ್​ ಪಡೆದು ಮಿಂಚಿದ್ದಾರೆ.

K Gowtham
author img

By

Published : Aug 8, 2019, 7:17 PM IST

ತರೌಬ(ವಿಂಡೀಸ್​) : ವೆಸ್ಟ್​ ಇಂಡೀಸ್​ ಎ ವಿರುದ್ಧ ನಡೆಯುತ್ತಿರುವ ಮೂರನೇ ಅನಧಿಕೃತ ಟೆಸ್ಟ್​ನಲ್ಲಿ ಭಾರತ ಎ ತಂಡದ ಬೌಲರ್​ ಕನ್ನಡಿಗ ಕೆ.ಗೌತಮ್​ ಹ್ಯಾಟ್ರಿಕ್​ ವಿಕೆಟ್​ ಪಡೆಯುವ ಮೂಲಕ ಮಿಂಚಿದ್ದಾರೆ.

ಕಳೆದ ಪಂದ್ಯದಲ್ಲಿ 6 ವಿಕೆಟ್​ ಪಡೆದು ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದ ಕೆ ಗೌತಮ್​ ಮೂರನೇ ಪಂದ್ಯದಲ್ಲಿ ಹ್ಯಾಟ್ರಿಕ್​ ವಿಕೆಟ್​ ಸಹಿತ 6 ವಿಕೆಟ್​ ಪಡೆದು ಮಿಂಚಿದ್ದಾರೆ.

ಗೌತಮ್​ 73ನೇ ಓವರ್​ನ ಎರಡನೇ ಎಸೆತದಲ್ಲಿ ರೇಮನ್ ರೈಫರ್​ರನ್ನು, 3ನೇ ಎಸೆತದಲ್ಲಿ ಚೆಮರ್​ ಹೋಲ್ಡರ್​ರನ್ನು, 4ನೇ ಎಸೆತದಲ್ಲಿ ಮಿಗುಲ್​ ಕಮ್ಮಿನ್ಸ್​ ವಿಕೆಟ್​ ಪಡೆಯುವ ಮೂಲಕ ಹ್ಯಾಟ್ರಿಕ್​ ವಿಕೆಟ್​ ಪಡೆದರು. ಒಟ್ಟಾ 23.4 ಓವರ್​ಗಳಲ್ಲಿ 67 ರನ್​ ನೀಡಿ 6 ವಿಕೆಟ್​ ಪಡೆದರು.

ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ ತಂಡ 201 ರನ್​ಗಳಿಗೆ ಆಲೌಟ್​ ಆಗಿತ್ತು. ಈ ಮೊತ್ತವನ್ನು ಬೆನ್ನತ್ತಿದ ವಿಂಡೀಸ್​ ಪಡೆ ಗೌತಮ್​ ದಾಳಿಗೆ ತತ್ತರಿಸಿ 194 ರನ್​ಗಳಿಗೆ ಸರ್ವಪ ತನಗೊಂಡಿತು.

7 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಎ ತಂಡ 23 ರನ್​ಗಳಿಸಿದ್ದು ಪ್ರಮುಖ ಮೂರು ವಿಕೆಟ್​ ಕಳೆದುಕೊಂಡು ಆಘಾತಕ್ಕೊಳಗಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.