ರಾಂಚಿ: ಟೀಂ ಇಂಡಿಯಾ ಹಿರಿಯ ಆಟಗಾರ ಎಂ ಎಸ್ ಧೋನಿ ತವರು ಮೈದಾನದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಂಚಿ ಮೈದಾನದ ಇತಿಹಾಸದ ಎರಡನೇ ಟೆಸ್ಟ್ ಪಂದ್ಯ ನಾಳೆಯಿಂದ ಆರಂಭವಾಗಲಿದ್ದು, 39,000 ಆಸನದ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ ಕೇವಲ 1500 ಟಿಕೆಟ್ಗಳು ಮಾತ್ರವೇ ಮಾರಾಟಗೊಂಡಿದೆ ಎಂದು ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.
200ರಿಂದ 2000 ತನಕ ಟಿಕೆಟ್ ಬೆಲೆ ನಿಗದಿಪಡಿಸಲಾಗಿದ್ದು, ಟೀಂ ಇಂಡಿಯಾ ಈಗಾಗಲೇ ಸರಣಿ ಗೆದ್ದಿರುವ ಕಾರಣದಿಂದ ಪ್ರೇಕ್ಷಕರು ಮೈದಾನದತ್ತ ಆಗಮಿಸುವ ಮನಸ್ಸು ಮಾಡಿಲ್ಲ. ಲೋಕಲ್ ಬಾಯ್ ಧೋನಿ ಟೆಸ್ಟ್ನಲ್ಲಿ ಇಲ್ಲದಿರುವುದೂ ಎಲ್ಲಕ್ಕಿಂತ ಮುಖ್ಯ ಕಾರಣ ಎನ್ನಲಾಗುತ್ತಿದೆ.
-
#TeamIndia trained at the nets at the JSCA Stadium in Ranchi ahead of the 3rd and final Test against South Africa.#INDvSA pic.twitter.com/EzB1nkI2sz
— BCCI (@BCCI) October 17, 2019 " class="align-text-top noRightClick twitterSection" data="
">#TeamIndia trained at the nets at the JSCA Stadium in Ranchi ahead of the 3rd and final Test against South Africa.#INDvSA pic.twitter.com/EzB1nkI2sz
— BCCI (@BCCI) October 17, 2019#TeamIndia trained at the nets at the JSCA Stadium in Ranchi ahead of the 3rd and final Test against South Africa.#INDvSA pic.twitter.com/EzB1nkI2sz
— BCCI (@BCCI) October 17, 2019
2017ರ ಮಾರ್ಚ್ನಲ್ಲಿ ರಾಂಚಿ ಮೈದಾನದಲ್ಲಿ ಮೊದಲ ಟೆಸ್ಟ್ ಆಯೋಜನೆಯಾಗಿತ್ತು. ಆದರೆ, ಆ ವೇಳೆಗಾಗಲೇ ಮಾಹಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಈಗಾಗಲೇ ಸರಣಿ ಗೆದ್ದಿರುವ ಟೀಂ ಇಂಡಿಯಾ ನಾಳೆಯಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಲು ಯೋಜನೆ ರೂಪಿಸಿದೆ.