ETV Bharat / sports

ತಾಹೀರ್ ನಂತರ ಹರಿಣಗಳ ತಂಡದ ಮತ್ತೊಬ್ಬ ಕ್ರಿಕೆಟರ್​ ನಿವೃತ್ತಿ: ವಿಶ್ವಕಪ್​ ನಂತರ ಡುಮಿನಿ ಗುಡ್​ಬೈ!

ಇಂಗ್ಲೆಂಡ್​​ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್​ ಬಳಿಕ ತಾವೂ ಏಕದಿನ ಪಂದ್ಯಕ್ಕೆ ವಿದಾಯ ಘೋಷಣೆ ಮಾಡುವುದಾಗಿ ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಜೆಪಿ ಡುಮಿನಿ ತಿಳಿಸಿದ್ದಾರೆ.

author img

By

Published : Mar 15, 2019, 5:21 PM IST

ಆಲ್​ರೌಂಡರ್​ ಜೆಪಿ ಡುಮಿನಿ

ಕೇಪ್​ಟೌನ್​: ಇಂಗ್ಲೆಂಡ್​​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಮುಕ್ತಾಯಗೊಳ್ಳುತ್ತಿದ್ದಂತೆ ವಿವಿಧ ತಂಡದ ಪ್ರಮುಖ ಪ್ಲೇಯರ್ಸ್​ ನಿವೃತ್ತಿ ಘೋಷಣೆ ಮಾಡಲು ಮುಂದಾಗುತ್ತಿದ್ದಾರೆ. ಈಗಾಗಲೇ ವೆಸ್ಟ್​ ಇಂಡೀಸ್​ನ ಕ್ರಿಸ್​ ಗೇಲ್​, ದಕ್ಷಿಣ ಆಫ್ರಿಕಾದ ಇಮ್ರಾನ್​ ತಾಹೀರ್​ ಕ್ರಿಕೆಟ್​ಗೆ ಗುಡ್​ಬೈ ಹೇಳುವುದಾಗಿ ತಿಳಿಸಿದ್ದಾರೆ.

JP Duminy
ಆಲ್​ರೌಂಡರ್​ ಜೆಪಿ ಡುಮಿನಿ

ಇದೀಗ ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಜೆಪಿ ಡುಮಿನಿ ವಿಶ್ವಕಪ್​ ನಂತರ ತಾವೂ ಏಕದಿನ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡುವುದಾಗಿ ಇಂದು ತಿಳಿಸಿದ್ದಾರೆ. ಈಗಾಗಲೇ 2017ರಲ್ಲಿ ಟೆಸ್ಟ್​ ಹಾಗೂ ಫಸ್ಟ್​ ಕ್ಲಾಸ್​ ಕ್ರಿಕೆಟ್​ಗೆ ಡುಮಿನಿ ವಿದಾಯ ಹೇಳಿದ್ದು, ಇದು ನಿವೃತ್ತಿ ಘೋಷಣೆ ಮಾಡಲು ಸರಿಯಾದ ಸಮಯ ಎಂದು ತಿಳಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಿಗೆ ಮಾತ್ರ ಲಭ್ಯವಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಹಿಂದೆ 2011 ಹಾಗೂ 2015ರಲ್ಲಿ ದಕ್ಷಿಣ ಆಫ್ರಿಕಾದ ವಿಶ್ವಕಪ್​ ತಂಡದಲ್ಲಿ ಡುಮಿನಿ ಭಾಗಿಯಾಗಿದ್ದರು.

ಆಫ್ರಿಕಾ ತಂಡದ ಪರ 193 ಏಕದಿನ ಪಂದ್ಯಗಳನ್ನಾಡಿರುವ ಡುಮಿನಿ 5047ರನ್​ಗಳಿಸಿದ್ದು, 68 ವಿಕೆಟ್​ ಪಡೆದುಕೊಂಡಿದ್ದಾರೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.