ಕೇಪ್ಟೌನ್: ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಜೆಪಿ ಡುಮಿನಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
2017ರಲ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಡುಮಿನಿ 2019ರ ಏಕದಿನ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ಗೂ ಹಾಗೂ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ವಿಶ್ವದ ವಿವಿಧ ಟಿ20 ಲೀಗ್ಗಳಲ್ಲಿ ಆಡುತ್ತಿದ್ದರು.
ಸೀಮಿತ ಓವರ್ಗಳ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಂತರ ಡುಮಿನಿ ಕೆನಡಾದ ಗ್ಲೋಬಲ್ ಟಿ20 ಲೀಗ್ ಹಾಗೂ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಿದ್ದರು. ಆದರೆ, ಗಾಯದ ಕಾರಣ ತವರಿನ ಲೀಗ್ ಆದ ಮಜಾನ್ಸಿ ಲೀಗ್ನಲ್ಲಿ ಆಡಿರಲಿಲ್ಲ. ಆಟಗಾರ ಆಗುವ ಬದಲಾಗಿ ಮೆಂಟರ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಾರ್ಲ್ ರಾಕ್ಸ್ ತಂಡ ಚಾಂಪಿಯನ್ ಆಗುವಲ್ಲಿ ನೆರವಾಗಿದ್ದರು.
"ಪ್ರಾಂಚೈಸಿ ಲೀಗ್ನಲ್ಲಿ ಆಡಲು ಹಾಗೂ ಹಣಗಳಿಸುವಷ್ಟು ವಯಸ್ಸು ನನ್ನಲ್ಲಿದೆ. ಆದರೆ, ನಾನು ಆ ಉದ್ದೇಶ ಹೊಂದಿಲ್ಲ. ನಾನು ಗ್ಲೋಬಲ್ ಟಿ20 ಹಾಗೂ ಸಿಪಿಎಲ್ ಲೀಗ್ ಆಡಿದ್ದೇನೆ. ಅಲ್ಲಿ ಯುವ ಕ್ರಿಕೆಟಿಗರು ಹಿರಿಯ ಆಟಗಾರರ ಸ್ಥಾನ ಅಲಂಕರಿಸಲು ಕಾತುರದಿಂದಿದ್ದಾರೆ. ನಾನು ಮುಂದೆ ಏನು ಮಾಡುತ್ತೇನೆ ಎಂದು ಗೊತ್ತಿಲ್ಲ. ಆದರೆ, ಭವಿಷ್ಯದ ಬಗ್ಗೆ ಚಿಂತಿಸದೆ ನಿವೃತ್ತಿಯ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಡುಮಿನಿ ತಿಳಿಸಿದ್ದಾರೆ.
ಡುಮಿನಿ ದಕ್ಷಿಣ ಆಫ್ರಿಕಾ ಪರ 46 ಟೆಸ್ಟ್,199 ಏಕದಿನ ಹಾಗೂ 81 ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ನಲ್ಲಿ 6ಶತಕ ಸೇರಿದಂತೆ 2103ರನ್, 42 ವಿಕೆಟ್, ಏಕದಿನ ಕ್ರಿಕೆಟ್ನಲ್ಲಿ 4 ಶತಕ, 27 ಅರ್ಧಶತಕಗಳು ಸೇರಿ 5117 ರನ್ ಹಾಗೂ 69 ವಿಕೆಟ್, ಟಿ20ಯಲ್ಲಿ 11 ಅರ್ಧಶತಕ ಸೇರಿ 1934 ರನ್ ಹಾಗೂ 21 ವಿಕೆಟ್ ಪಡೆದಿದ್ದಾರೆ.