ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದ್ದು, ಅದಕ್ಕಾಗಿ ಎಲ್ಲ ತಂಡಗಳು ಭರ್ಜರಿ ತಯಾರಿಯಲ್ಲಿ ಮಗ್ನವಾಗಿವೆ. ಎಲ್ಲ ಪ್ರಾಂಚೈಸಿಗಳ ಪ್ಲೇಯರ್ಸ್ ಬ್ಯಾಟಿಂಗ್, ಕ್ಷೇತ್ರ ರಕ್ಷಣೆ ಹಾಗೂ ಬೌಲಿಂಗ್ನತ್ತ ಹೆಚ್ಚಿನ ಗಮನ ಹರಿಸುತ್ತಿದ್ದು, ಇವರಿಗೆ ಕೋಚ್ಗಳು ಸಖತ್ ಆಗಿ ತರಬೇತಿ ನೀಡುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಅಭ್ಯಾಸದ ವೇಳೆ ಬ್ಯಾಟಿಂಗ್ ಹಾಗೂ ಅದ್ಭುತ ಕ್ಷೇತ್ರರಕ್ಷಣೆ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಅಭ್ಯಾಸದ ವೇಳೆ ಒಂದೇ ಕೈಯಲ್ಲಿ ಚುರುಕಿನ ಕ್ಯಾಚ್ ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ.
-
Did you ‘catch’ that? 😮#SaddaPunjab #Dream11IPL @JontyRhodes8 pic.twitter.com/VmrCnQtgBZ
— Kings XI Punjab (@lionsdenkxip) September 14, 2020 " class="align-text-top noRightClick twitterSection" data="
">Did you ‘catch’ that? 😮#SaddaPunjab #Dream11IPL @JontyRhodes8 pic.twitter.com/VmrCnQtgBZ
— Kings XI Punjab (@lionsdenkxip) September 14, 2020Did you ‘catch’ that? 😮#SaddaPunjab #Dream11IPL @JontyRhodes8 pic.twitter.com/VmrCnQtgBZ
— Kings XI Punjab (@lionsdenkxip) September 14, 2020
51 ವರ್ಷದ ಜಾಂಟಿ ರೋಡ್ಸ್ ಸದ್ಯ ಪಂಜಾಬ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದು, ಈ ಹಿಂದೆ ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚಿದ್ದ ಇವರು 2003ರಲ್ಲಿ ನಿವೃತ್ತಿ ಘೋಷಣೆ ಮಾಡಿದ್ದರು. ಅತ್ಯದ್ಭುತ ಕ್ಷೇತ್ರ ರಕ್ಷಕ ಎಂಬ ಹೆಸರು ಗಳಿಸಿರುವ ಜಾಂಟಿ ರೋಡ್ಸ್ ಇದೀಗ ಎಲ್ಲರೂ ನಾಚುವಂತೆ ಕ್ಯಾಚ್ ಹಿಡಿದಿದ್ದಾರೆ.
ಇದರ ವಿಡಿಯೋ ತುಣುಕವೊಂದನ್ನ ಪಂಜಾಬ್ ತನ್ನ ಟ್ವಿಟರ್ ಅಕೌಂಟ್ನಲ್ಲಿ ಹಾಕಿಕೊಂಡಿದೆ.