ಲಂಡನ್: ಇಂಗ್ಲೆಂಡ್ನ ಸ್ಟಾರ್ ಓಪನರ್ ಜಾನಿ ಬೈರ್ಸ್ಟೋವ್ ಬಿಗ್ಬ್ಯಾಶ್ ಲೀಗ್ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ. ಅವರು ಇದೇ ಮೊದಲ ಬಾರಿಗೆ ಬಿಗ್ಬ್ಯಾಶ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ, ರಾಷ್ಟ್ರೀಯ ತಂಡದ ಜವಾಬ್ದಾರಿ ನಿರ್ವಹಿಸಬೇಕಾಗಿರುವುದರಿಂದ ಟೂರ್ನಿಯಿಂದ ಹಿಂದಿ ಸರಿಯುವುದಾಗಿ ಹೇಳಿದ್ದಾರೆ.
ಬೈರ್ಸ್ಟೋವ್ 10ನೇ ಬಿಗ್ಬ್ಯಾಶ್ ಲೀಗ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಲೀಗ್ ನಡೆಯುವ ಸಂದರ್ಭದಲ್ಲೇ ಇಂಗ್ಲೆಂಡ್ ತಂಡದ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ತಂಡದಿಂದ ಕರೆ ಬರುವ ಸಾಧ್ಯತೆ ಇರುವುದರಿಂದ ಟೂರ್ನಿಯಿಂದ ಹಿಂದಕ್ಕೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
-
Unfortunately, with this comes the news that Jonny Bairstow has been recalled by the ECB, and has withdrawn from #BBL10 😌 pic.twitter.com/nrdNFqvd3e
— KFC Big Bash League (@BBL) December 2, 2020 " class="align-text-top noRightClick twitterSection" data="
">Unfortunately, with this comes the news that Jonny Bairstow has been recalled by the ECB, and has withdrawn from #BBL10 😌 pic.twitter.com/nrdNFqvd3e
— KFC Big Bash League (@BBL) December 2, 2020Unfortunately, with this comes the news that Jonny Bairstow has been recalled by the ECB, and has withdrawn from #BBL10 😌 pic.twitter.com/nrdNFqvd3e
— KFC Big Bash League (@BBL) December 2, 2020
ದುರಾದೃಷ್ಟವಶಾತ್ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ನಿಂದ ಜಾನಿ ಬೈರ್ಸ್ಟೋವ್ ರಾಷ್ಟ್ರೀಯ ತಂಡದ ಪರ ಆಡಲು ಕರೆ ಬಂದಿರುವುದರಿಂದ ಬಿಗ್ಬ್ಯಾಶ್ ನಿಂದ ಹಿಂದೆ ಸರಿದಿದ್ದಾರೆ ಎಂದು ಬಿಗ್ಬ್ಯಾಶ್ ಹೇಳಿಕೆ ಬಿಡುಗಡೆ ಮಾಡಿದೆ.
ಬೈರ್ಸ್ಟೋವ್ ಸ್ಥಾನಕ್ಕೆ ಆಂಡ್ರೆ ಫ್ಲೆಚರ್ ಮೆಲ್ಬೋರ್ನ್ ಸ್ಟಾರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ 10ರಿಂದ 10ನೇ ಆವೃತ್ತಿಯ ಬಿಗ್ಬ್ಯಾಶ್ ಲೀಗ್ ಆರಂಭವಾಗಲಿದೆ.
ಬೈರ್ಸ್ಟೋವ್ ಪ್ರಸ್ತುತ ಇಂಗ್ಲೆಂಡ್ ತಂಡದ ಜೊತೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ತಂಡ ಈಗಾಗಲೇ 3-0ಯಲ್ಲಿ ಟಿ-20 ಸರಣಿ ಗೆದ್ದಿದೆ. ಶುಕ್ರವಾರ ಕೇಪ್ಟೌನ್ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.